Advertisement

ಅಯ್ಯೋ ವಿಧಿಯೇ…ಮೃತ ತಾಯಿಯ ಎದೆ ಹಾಲುಣ್ಣಲು ಯತ್ನಿಸುತ್ತಿದ್ದ ಮಗು 

12:27 PM May 25, 2017 | Team Udayavani |

ಭೂಪಾಲ್‌: ಈ ದೃಶ್ಯ ನೋಡಿದರೆ ಎಂತಹಾ ಕಲ್ಲು ಹೃದಯವೂ ಕರಗಬೇಕು. ಯಾರ ಕಣ್ಣಲ್ಲೂ ನೀರು ಜಿನುಗಲೇ ಬೇಕು. ಹಾಲುಗಲ್ಲದ ಮಗುವೊಂದು ತಾಯಿ ಮೃತಪಟ್ಟಿರುವುದು ತಿಳಿಯದೆ ಮೊಲೆಹಾಲುಣ್ಣಲು ಯತ್ನಿಸಿರುವುದು ಭೂಪಾಲ್‌ನ ರೈಲು ಹಳಿಯ ಪಕ್ಕದಲ್ಲಿ ನಡೆದಿದ್ದು, ಇದೀಗ ಆ ದಾರುಣ ಸನ್ನಿವೇಶದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

Advertisement

ಬುಧವಾರ ಬೆಳಗ್ಗೆ ದಮೋಹ್‌ ಎಂಬಲ್ಲಿ ರೈಲು ಹಳಿಯ ಪಕ್ಕದಲ್ಲಿ ಸಾರ್ವಜನಿಕರು ಮಹಿಳೆ ಮೃತಪಟ್ಟಿರುವುದು ಜೊತೆಯಲ್ಲಿ ದ್ದ ಮಗು ಹಾಲುಣ್ಣಲು ಯತ್ನಿಸಿದ್ದನ್ನು ಕಂಡು ಮಮ್ಮಲ ಮರುಗಿದ್ದಾರೆ. 

ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮಗುವಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ದುರಂತವೆಂದರೆ ಈ ವೇಳೆ 10 ರೂಪಾಯಿ ನೀಡಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಯಾರೊಬ್‌ಬರೂ ನೆರವಾಗಲಿಲ್ಲ, ಕೊನೆಗೆ ಮಾನವೀಯತೆ ಮೆರೆದ ವಾರ್ಡ್‌ ಬಾಯ್‌ 10 ರೂಪಾಯಿ ಕಟ್ಟಿದ್ದಾನೆ. 

ರೈಲಿನಿಂದ ಹಾರಿ ಇಲ್ಲವೆ ,ರೈಲು ಢಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವುದಾಗಿ ಪೊಲೀಸರು ಅಂದಾಜಿಸಿದ್ದು, ತಲೆಯಲ್ಲಿ ಗಂಭೀರ ಗಾಯ ಕಂಡು ಬಂದಿದೆ. ಆಕಯ ಸಂಬಂಧಿಕರು ಯಾರಾದರು ಬರಬಹುದು ಎಂದು  ಎದುರುನೋಡಲಾಗುತ್ತಿದೆ. ಮಗುವನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next