Advertisement

ಬಾಗಲಕೋಟೆಯಲ್ಲಿ ತಾಯಿ-ಮಗಳಿಗೆ ಸೋಂಕು ದೃಢ

04:49 PM Apr 27, 2020 | keerthan |

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಪತ್ತೆಯಾಗದ ಕೋವಿಡ್-19 ಸೋಂಕು, ಸೋಮವಾರ ತಾಯಿ ಮಗಳಿಗೆ ಕಾಣಿಸಿಕೊಂಡಿದೆ.

Advertisement

ಜಮಖಂಡಿ ನಗರದ 42 ವರ್ಷದ ಮಹಿಳೆ ಪಿ 508 ಮತ್ತು 21 ವರ್ಷದ ಪಿ 509 ಅವರಿಗೆ ಕೋವಿಡ್19 ಸೋಂಕು ದೃಢಪಟ್ಟಿದ್ದು, ಅವರಿಗೆ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇವರಿಬ್ಬರು ತಾಯಿ ಮಗಳಾಗಿದ್ದು, ತೀವ್ರ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 47 ವರ್ಷದ ಖಾಸಗಿ ವಾಹನ ಚಾಲಕನಿಗೆ ಏ. 24ರಂದು ಕೋವಿಡ್ ವೈರಸ್ ಖಚಿತವಾಗಿತ್ತು. ಆತನ ಪತ್ನಿ ಹಾಗೂ ಪುತ್ರಿಗೂ ಈಗ ಸೋಂಕು ತಗುಲಿದೆ.

ಚಾಲಕ ಪಿ 456 ವ್ಯಕ್ತಿ ಮನೆಯಲ್ಲಿ ಒಟ್ಟು ಐವರು ವಾಸಿಸುತ್ತಿದ್ದು, ಅವರಲ್ಲಿ ಮೂವರಿಗೆ ಈಗ ಸೋಂಕು ದೃಢವಾಗಿದೆ. ಉಳಿದವರಿಗೆ ಪ್ರತ್ಯೇಕವಾಗಿ ನಿಗಾ ವಹಿಸಲಾಗಿದೆ.

26ಕ್ಕೇರಿದ ಸೋಂಕಿತರ ಸಂಖ್ಯೆ :

Advertisement

ಜಿಲ್ಲೆಯಲ್ಲಿ ಏ. 2ರಂದು 76 ವರ್ಷದ ವೃದ್ಧನಿಗೆ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದು, ಆತ ಮೃತಪಟ್ಟಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಒಟ್ಟು 26 ಜನರಿಗೆ ಸೋಂಕು ಖಚಿತವಾಗಿದೆ. ಅದರಲ್ಲಿ ಮುಧೋಳದ ಒಬ್ಬರು, ಬಾಗಲಕೋಟೆಯ ಐವರು ಸೇರಿ ಒಟ್ಟು 6 ಜನ ಕೋವಿಡ್-19 ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಂದ ಬಿಡುಗಡೆಗೊಂಡಿದ್ದಾರೆ. ಉಳಿದ 19 ಜನರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next