ಕಲಬುರಗಿ: ತಾಯಿ ಮತ್ತು ಮಗು ಬಾವಿಗೆ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಚಿಂಚೋಳಿಯ ಗಂಗೂನಾಯ್ಕ ತಾಂಡಾದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಗಂಗೂ ನಾಯಕ್ ತಾಂಡಾದ ಕವಿತಾ(23) ಮತ್ತು 2ವರ್ಷದ ಪವನ್ ಕುಮಾರ್ ಮೃತಪಟ್ಟ ದುರ್ದೈವಿಗಳು.
ಕವಿತಾಬಾಯಿ, ಕಬ್ಬಲಿಗ ಸಮಾಜದ ಸುರೇಶ್ ಎಂಬಾತನೊಂದಿಗೆ ಪ್ರೀತಿಸಿ 3ವರ್ಷಗಳ ಹಿಂದೆ ಮದುವೆಯಾಗಿದ್ದಳು. ಭಾನುವಾರ ಬೆಳಿಗ್ಗೆ ಅತ್ತೆ ಹಾಗೂ ಗಂಡ ಜತೆಗೆ ಜಗಳ ಮಾಡಿಕೊಂಡಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆಗೆ ನಿರ್ಧರಿಸಿದ್ದ ಆರೋಪಿ ಆ್ಯಸಿಡ್ ದಾಳಿಕೋರ
ಆದರೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಿಪಿಐ ಮಹಾಂತೇಶ ಪಾಟೀಲ್ ತಿಳಿಸಿದ್ದಾರೆ.