Advertisement

ಬಹುತೇಕ ಹೊಟೇಲ್‌ ಇಂದಿನಿಂದ ಪುನರಾರಂಭ

12:09 AM Jun 08, 2020 | Sriram |

ಉಡುಪಿ: ಕೋವಿಡ್-19 ಭೀತಿಯ ಮುಂಜಾಗ್ರತ ಕ್ರಮ ಅನುಸರಿಸಿಕೊಂಡು ಜೂ. 8ರಿಂದ ಜಿಲ್ಲೆಯಲ್ಲಿ ಹೊಟೇಲ್‌ಗ‌ಳು ಬಾಗಿಲು ತೆರೆದುಕೊಳ್ಳಲಿದ್ದು, ಗ್ರಾಹಕರಿಗೆ ಸವಿರುಚಿಯಾದ ತಿನಿಸುಗಳನ್ನು ಉಣಬಡಿಸಲಿವೆ.

Advertisement

ನಗರದೊಳಗಿನ ಬಹುತೇಕ ಹೊಟೇಲ್‌ಗ‌ಳು ಸೋಮವಾರ ಪ್ರಾರಂಭವಾಗುವ ಸಾಧ್ಯತೆಗಳಿದ್ದು, ಕೆಲವೊಂದು ಹೊಟೇಲ್‌ಗ‌ಳು ಮಾತ್ರ ಸ್ವಲ್ಪ ವಿಳಂಬವಾಗಿ ಬಾಗಿಲು ತೆರೆದುಕೊಳ್ಳಲಿವೆ. ಇದಕ್ಕಾಗಿ ಅಂತಿಮ ಹಂತದ ಭರದ ಸಿದ್ಧತೆ ಹೊಟೇಲ್‌ಗ‌ಳಲ್ಲಿ ರವಿವಾರ ನಡೆಯಿತು.

ರಾಜ್ಯ ಸರಕಾರ ಜೂ.8ರಿಂದ ರಾಜ್ಯಾದ್ಯಂತ ಹೊಟೇಲ್‌ಗ‌ಳನ್ನು ತೆರೆಯಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲೂ ಹೊಟೇಲ್‌ಗ‌ಳು ಬಾಗಿಲು ತೆರೆಯಲು ಹೊಟೇಲ್‌ಗ‌ಳನ್ನು ಸ್ವತ್ಛಗೊಳಿಸಿ ಸಿದ್ಧಪಡಿಸುವ ಪೂರ್ವ ತಯಾರಿಗಳು ನಡೆದವು.

ಸುದೀರ್ಘ‌ ಸಮಯದ ಬಳಿಕ ಆರಂಭ
ಕೋವಿಡ್-19 ವೈರಸ್‌ ಸೋಂಕಿನಿಂದ ಕಳೆದ ಸುದೀರ್ಘ‌ ಅವಧಿಯಿಂದ ಹೊಟೇಲ್‌ಗಳು ಬಂದ್‌ ಆಗಿದ್ದವು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ಸಡಿಲಿಕೆ ಹಲವು ಹಂತಗಳಲ್ಲಿ ಆಗಿದ್ದರೂ ಹೊಟೇಲ್‌ಗ‌ಳ ತೆರವಿಗೆ ಅವಕಾಶಸಿಕ್ಕಿರಲಿಲ್ಲ. ವೈರಸ್‌ ಹರಡುವ ಮುಂಜಾಗೃತ ಕ್ರಮವಾಗಿ ಹೊಟೇಲ್‌ಗ‌ಳನ್ನು ಪ್ರಾರಂಭ ಮಾಡುವುದಕ್ಕೆ ಅನುಮತಿ ನೀಡಿರಲಿಲ್ಲ. ಸುದೀರ್ಘ‌ ಅವಧಿ ಬಂದ್‌ ಆಗಿದ್ದರಿಂದ ಉದ್ಯಮಿಗಳು, ಸಣ್ಣ ಪುಟ್ಟ ಹೊಟೇಲ್‌ ವ್ಯಾಪಾರಸ್ಥರು ಅಪಾರ ನಷ್ಟಕ್ಕೆ ಒಳಗಾಗಿ ದ್ದರು. ಕೆಲವೊಂದು ಹೊಟೇಲ್‌ಗ‌ಳಲ್ಲಿ ಮಾತ್ರ ಪಾರ್ಸೆಲ್‌ ಆಹಾರ ನೀಡಲಾಗುತ್ತಿತ್ತು.

ಕೆಲಸಕ್ಕೆ ಕಾರ್ಮಿಕರು ದೊರೆತರೂ ಹೊಟೇಲ್‌ಗ‌ಳಿಗೆ ಗ್ರಾಹಕರು ಬಾರದೆ ಇದ್ದಲ್ಲಿ, ಅವರಿಗೆ ಸಂಬಳ ಕೊಡುವು
ದಕ್ಕೆ ಕಷ್ಟವಾದೀತು. ಹೀಗಾಗಿ ಮುಂದಿನ ದಿನಗಳಲ್ಲಿ ವ್ಯಾಪಾರ ಹೇಗಿದೆ ಎಂಬು ದನ್ನು ನೋಡಿಕೊಂಡು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಸದ್ಯದ ಸ್ಥಿತಿಯಲ್ಲಿ ನಾವೇ ನಿಭಾಯಿಸು ತ್ತೇವೆ ಎಂದು ನಗರದ ಸಣ್ಣ ಹೊಟೇಲ್‌ನ ಮಾಲಕ ಆನಂದ ಅವರು ಹೇಳಿದರು.

Advertisement

ಕಾರ್ಮಿಕರ, ಅಡುಗೆಯವರ ಕೊರತೆ ಸಾಧ್ಯತೆ
ಅನುಮತಿ ಸಿಕ್ಕಿದರೂ ಹೊಟೇಲ್‌ ಆರಂಭಕ್ಕೆ ಕಾರ್ಮಿಕರ ಕೊರತೆ ಕೂಡ ಎದುರಾಗಿದೆ. ನಗರದ ವಿವಿಧ ಹೊಟೇಲ್‌ಗ‌ಳಲ್ಲಿ ಅನ್ಯ ರಾಜ್ಯ ಹಾಗೂ ಜಿಲ್ಲೆಗಳ ಕಾರ್ಮಿಕರು ಕೆಲಸಕ್ಕಿದ್ದರು. ಅವರೆಲ್ಲರೂ ತಮ್ಮ ಊರುಗಳಿಗೆ ತೆರಳಿದ್ದು. ಈಗ ಹೊಟೇಲ್‌ ಆರಂಭಿಸುವುದಕ್ಕೆ ಕಾರ್ಮಿಕರ, ಅಡುಗೆಯವರ ಸಮಸ್ಯೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next