Advertisement

United Nations; ಬಹುಪಾಲು ಮಕ್ಕಳಿಗೆ ದೈಹಿಕ ಶಿಕ್ಷಣದ ಅವಕಾಶವಿಲ್ಲ

01:39 AM Jul 29, 2024 | Team Udayavani |

ನ್ಯೂಯಾರ್ಕ್‌: ಜಾಗತಿಕವಾಗಿ ಬಹುತೇಕ ಮಕ್ಕಳು ಕನಿಷ್ಠ ದೈಹಿಕ ಶಿಕ್ಷಣ ಅವಕಾಶದಿಂದ ವಂಚಿತರಾಗಿ ದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ ಈ ಮಾಹಿತಿ ನೀಡಿದೆ.

Advertisement

ವರದಿ ಯ ಪ್ರಕಾರ ವಿಶ್ವದಲ್ಲಿ ಶೇ.58ರಷ್ಟು ದೇಶಗಳು ಮಾತ್ರ ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಣವನ್ನು ಕಡ್ಡಾಯ ಗೊಳಿಸಿವೆ. ಶೇ.7ರಷ್ಟು ಶಾಲೆಗಳಲ್ಲಿ ಮಾತ್ರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮಾನ ದೈಹಿಕ ಶಿಕ್ಷಣ ವನ್ನು ನೀಡುತ್ತಿವೆ. ಮಾಧ್ಯಮಿಕ ಶಾಲೆಯಲ್ಲಿ ಮೂರನೇ ಎರಡರಷ್ಟು ವಿದ್ಯಾರ್ಥಿಗಳು ಹಾಗೂ ಪ್ರಾಥ ಮಿಕ ಶಾಲೆಯ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಕನಿಷ್ಠ ದೈಹಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಲ್ಲದೇ ಬಹುತೇಕ ದೇಶಗಳು ದೈಹಿಕ ಶಿಕ್ಷಣಕ್ಕೆ ಅಗತ್ಯವಾದ ದೇಣಿಗೆಯನ್ನು ನೀಡುತ್ತಿಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next