Advertisement
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 21,443.05 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆಯಲಾಗುತ್ತಿದೆ. ಆ ಪೈಕಿ ಮಿಶ್ರತಳಿ 166.87 ಹಾಗೂ ದ್ವಿತಳಿ 7.61 ಸಹಿತ ಒಟ್ಟು 174.48 ರೇಷ್ಮೆ ಮೊಟ್ಟೆ ಚಾಕಿ ಸಾಕಾಣಿಕೆ ಮಾಡಲಾಗುತ್ತದೆ ಜಿಲ್ಲೆಯಲ್ಲಿ ಮಿಶ್ರತಳಿ 11,468.728 ಮೆಟ್ರಿಕ್ ಟನ್ ಹಾಗೂ ದ್ವಿತಳಿ ಸಂಕರಣ 494.203 ಒಟ್ಟು 11,962.931 ಮೆಟ್ರಿಕ್ ಟನ್ ರೇಷ್ಮೆ ಗೂಡು ಉತ್ಪಾದನೆ ಆಗುತ್ತಿದೆ.
ಹಾನಿಗೊಳಗಾಗುತ್ತವೆ. ಮುಖ್ಯವಾಗಿ ಎಳೆಯ ಎಲೆಗಳ ದಂಟು ಮತ್ತು ಎಲೆಯ ಮೇಲ್ಮೆ„ ಕೂಡುವಿಕೆಯ ಜಾಗದಲ್ಲಿ ದಾಳಿ ಮಾಡುತ್ತವೆ. ಇದರಿಂದ ಭಾದಿತ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಮೇಲ್ಮುಖವಾಗಿ ಅಥವಾ ಕೆಳಮುಖವಾಗಿ ಸುರುಳಿಯಾಗುತ್ತವೆ.
Related Articles
Advertisement
ನುಸಿ ರೋಗ ನಿರ್ವಹಣಾ ಕ್ರಮಗಳುಆರಂಭಿಕ ಹಂತದಲ್ಲಿ ಬಾಧಿತ ಕುಡಿ ಚಿಗುರುಗಳನ್ನು ತೆಗೆದು ಸುಡುವುದು. ನುಸಿ ಹುಳುಗಳ ಸಂಖ್ಯೆಯನ್ನು ನಿಗ್ರಹಿಸಲು ಎಲೆಗಳ ಕೆಳಭಾಗದಲ್ಲಿ ರಭಸವಾಗಿ ನೀರಿನ ಸಿಂಪಡಣೆ ಮಾಡುವುದು. ಸಸ್ಯಜನ್ಯ ಉತ್ಪನ್ನಗಳು: ವಿಡಿ ಗ್ರೀನ್ ಪಾತ್ 2 ಮಿಲಿ /ಲೀಟರ್ ಜೊತೆಗೆ ಅಡ್ ಪೊÅà ಶೂಟಿಂಗ್ 0.3 ಮಿಲಿ/ಲೀ ನೀರಿನೊಂದಿಗೆ ಮಿಶ್ರಣ ಮಾಡಿ ಒಂದು ವಾರದ ಅಂತರದಲ್ಲಿ ಎರಡು ಬಾರಿ ಸಿಂಪಡಿಸುವುದು. ರಾಸಾಯನಿಕ ನಿರ್ವಹಣೆ: ಎಸ್‌ಸಿ 0.5 ಮಿಲಿ ಸೈನೊಪೈರಾಫೆನ್ ಅನ್ನು ಲೀ. ನೀರಿಗೆ ಬೆರೆಸಿ ಸಿಂಪಡಿಸಿ, ಸುರಕ್ಷತಾ ಅವಧಿ 15 ದಿನಗಳು, 0.25 ಮಿ.ಲೀ. ಸ್ಟ್ರಡರ್‌ನೂ° ಲೀ. ನೀರಿಗೆ ಬೆರಸಿ., 1.5ಮಿಲಿ ಗ್ರಾಂ ಫೆನಾಜಾಕ್ವಿನ್ ಅನ್ನು ಲೀ. ನೀರಿಗೆ ನೀರಿಗೆ ಬೆರೆಸಿ ಸಿಂಪಡಿಸಿ, ಸುರಕ್ಷತಾ ಅವಧಿ 20 ದಿನಗಳು. ಜೈವಿಕ ನಿಯಂತ್ರಣ: ಆರಂಭಿಕ ಹಂತದಲ್ಲಿ ವಾರಕ್ಕೊಮ್ಮೆ ಬ್ಲಾಪೊಸ್ಪೆಥಸ್ ಪಲ್ಸೆಸೆನ್ಸ್ ಸಿಂಪಡಿಸುವುದು. ಇವೆಲ್ಲವನ್ನು ಮಾಡಿ ಹೆಚ್ಚಿನ ಮಾಹಿತಿಗಾಗಿ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ವಿಜ್ಞಾನಿಗಳ ತಂಡ ಭೇಟಿ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವಿವಿಧ ಹೋಬಳಿಗಳಿಗೆ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಕೆ.ಎಸ್.ವಿನೋಧ, ಡಾ.ರಮೇಶ್,ಡಾ.ಕೆ.ಆರ್.ಶಶಿಧರ್,ಡಾ. ಜೆ.ಬಿ.ನರೇಂದ್ರ ಕುಮಾರ್ ಅವರನ್ನು ಒಳಗೊಂಡಂತೆ ತಂಡ ರೇಷ್ಮೆ ಹಿಪ್ಪುನೇರಳೆ ತೋಟಗಳಿಗೆ ಭೇಟಿ ನೀಡಿ ನುಸಿರೋಗ ಹರಡಿರುವುದು ಪರಿಶೀಲಿಸಿ ರೇಷ್ಮೆ ಬೆಳೆಗಾರರಿಗೆ ರೋಗ ನಿಯಂತ್ರಸಲು ಕೈಗೊಳ್ಳಬೇಕಾದ ಕ್ರಮಗಳು ಮಾಹಿತಿಯನ್ನು ನೀಡಿದರು. ಸಾಮಾನ್ಯವಾಗಿ ಎರಡು ಮಳೆಗಳ ಅಂತರದಲ್ಲಿ ಒಣಹವೆ ಹೆಚ್ಚಾದಾಗ ನುಸಿಪೀಡೆ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಅವಳಿ ಜಿಲ್ಲೆಯಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ನುಸಿಪೀಡೆ ಕಾಣಿಸಿಕೊಂಡಿದೆ. ಅದನ್ನು ನಿಯಂತ್ರಿಸುವ ಕುರಿತು ರೇಷ್ಮೆ ಬೆಳೆಗಾರರಿಗೆ ಮಾಹಿತಿ ನೀಡಲಾಗಿದೆ. ರಾಸಾಯನಿಕ ಗೊಬ್ಬರನ್ನು ಬಳಕೆ ಮಾಡುವುದನ್ನು ಸ್ವಯಂ ನಿಯಂತ್ರಣ ಮಾಡಿಕೊಂಡಾಗ ನುಸಿಯಂತಹ ಪೀಡೆ ಕಾಣಿಸಿಕೊಳ್ಳುವುದಿಲ್ಲ.
● ಡಾ.ವಿನೋದಾ, ರೇಷ್ಮೆ ಸಂಶೋಧನಾ
ಕೇಂದ್ರದ ವಿಜ್ಞಾನಿ