Advertisement
ಸಾಂಕ್ರಾಮಿಕ ರೋಗಗಳ ನಿಯಂತ್ರಿಸಲು ಆರೋಗ್ಯ ಇಲಾಖೆ ಶಿಫಾರಸುಗಳಿಗೆ ಮಹಾನಗರ ಪಾಲಿಕೆ ಮಣೆ ಹಾಕಿಲ್ಲ. ಅವಳಿನಗರದಲ್ಲಿ ಸೊಳ್ಳೆಯ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಫಾಗಿಂಗ್ ಕಾರ್ಯಕ್ಕೆ ಆದ್ಯತೆ ನೀಡಿಲ್ಲ. ಹೀಗಾಗಿ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣ ತಪ್ಪಿದ್ದು, ಸೊಳ್ಳೆಯ ಕಾಟ ಅವಳಿನಗರದಲ್ಲಿ ಜೋರಾಗಿದೆ.
Related Articles
Advertisement
ಡೆಂಘೀ ಹಾವಳಿ:
2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250, 2020ರಲ್ಲಿ 36 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿತ್ತು. ಸದ್ಯ ಮೂರು ತಿಂಗಳಲ್ಲಿ 152 ಜನರಲ್ಲಿ ಡೆಂಘೀ ರೋಗ ಲಕ್ಷಣ ಕಂಡು ಬಂದಿದ್ದು, ಈ ಪೈಕಿ ತಪಾಸಣೆಗೆ ಒಳಪಡಿಸಿದಾಗ 11 ಜನರಲ್ಲಿ ದೃಢಪಟ್ಟಿದೆ. ಅದರಲ್ಲೂ ಮಾರ್ಚ್ ತಿಂಗಳಲ್ಲಿಯೇ ಐದು ಜನರಲ್ಲಿ ಡೆಂಘಿ ದೃಢಪಟ್ಟಿದೆ. ಇನ್ನು ಹುಬ್ಬಳ್ಳಿಯ ಶಹರ ವ್ಯಾಪ್ತಿಯಲ್ಲಿ ನಾಲ್ಕು, ಧಾರವಾಡ ಶಹರ ವ್ಯಾಪ್ತಿಯಲ್ಲಿ ಮೂರು, ಕುಂದಗೋಳ ತಾಲೂಕಿನಲ್ಲಿ ಎರಡು, ಕಲಘಟಗಿ ತಾಲೂಕಿನಲ್ಲಿ ಒಂದು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.
ಚಿಕೂನ್‌ಗುನ್ಯಾ ಗುನ್ನ:
2015ರಲ್ಲಿ 17, 2016ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019ರಲ್ಲಿ 121, 2020ರಲ್ಲಿ 17 ಜನರಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು. ಇದೀಗ ಈ ಮೂರು ತಿಂಗಳಲ್ಲಿ ಚಿಕೂನ್‌ಗುನ್ಯಾ ರೋಗ ಲಕ್ಷಣವುಳ್ಳ 104 ಜನರನ್ನು ತಪಾಸಣೆಗೆ ಒಳಪಡಿಸಿದಾಗ ಇಬ್ಬರಲ್ಲಿ ದೃಢಪಟ್ಟಿದ್ದು, ಅದು ಮಾರ್ಚ್ ತಿಂಗಳಲ್ಲಿಯೇ ರೋಗ ಪತ್ತೆಯಾಗಿದೆ. ಧಾರವಾಡ ಗ್ರಾಮೀಣ ಹಾಗೂ ಶಹರ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಕಂಡು ಬಂದಿದ್ದು, ನಿಧಾನವಾಗಿಯೇ ಚಿಕೂನ್‌ಗುನ್ಯಾ ಗುನ್ನ ನೀಡಲು ಶುರು ಮಾಡಿಬಿಟ್ಟಿದೆ.
ಮಲೇರಿಯಾ-ಮೆದುಳು ಜ್ವರ ಬಾಧೆ:
2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17, 2020ರಲ್ಲಿ 8 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ರೋಗವು, ಮೂರು ತಿಂಗಳಲ್ಲಿ ಕುಂದಗೋಳದಲ್ಲಿ ಒಬ್ಬರಲ್ಲಿ ಮಲೇರಿಯಾ ಪತ್ತೆಯಾಗಿದ್ದರೆ, ಮೆದುಳು ಜ್ವರ ಲಕ್ಷಣಗಳು ಕಂಡು ಬಂದರೂ ತಪಾಸಣೆಯಲ್ಲಿ ದೃಢಪಟ್ಟಿಲ್ಲ. ಕೋವಿಡ್ ಸೋಂಕಿನ ರೋಗಲಕ್ಷಣಗಳು ಹಾಗೂ ಕೀಟಜನ್ಯ ಸಾಂಕ್ರಾಮಿಕ ರೋಗಗಳ ಗುಣಲಕ್ಷಣಗಳಲ್ಲಿ ಸಾಮ್ಯತೆ ಇರುವ ಕಾರಣ ತಪಾಸಣೆಗೆ ಜನರಿಂದ ಹಿಂದೇಟು ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಕೀಟ ಜನ್ಯದಿಂದ (ಸೊಳ್ಳೆ) ಬರುವ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾದಂತಹ ರೋಗಗಳ ಹಾವಳಿಯು ಬೇಸಿಗೆಯ ಕಾಲದಲ್ಲಿ ಕಂಡು ಬಂದಿಲ್ಲ. ಈ ಸಮಯದಲ್ಲಿ ರೋಗಗಳ ಹಾವಳಿ ಮೇಲ್ನೋಟಕ್ಕೆ ತಗ್ಗಿದ್ದರೂ ಮಳೆಗಾಲದಲ್ಲಿ ಉಲ್ಬಣ ಆಗುವ ಆತಂಕ ಇರುವ ಕಾರಣ ಈ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುವುದು ಸೂಕ್ತ. –ಡಾ| ಮಂಜುನಾಥ ಎಸ್,. ಜಿಲ್ಲಾ ಮಲೇರಿಯಾ ಅಧಿಕಾರಿಗಳು, ಧಾರವಾಡ
-ಶಶಿಧರ್ ಬುದ್ನಿ