Advertisement
ಈ ದಾಳಿಯ ಪರಿಣಾಮವೆಂಬಂತೆ ಮಾಸ್ಕೋದ ಡೊಮೆಡೆಡೊ, ಶೆರೆಮೆ ಟಿಯೆವೊ ಹಾಗೂ ಜಹು ಕೋವಿÕ$R ವಿಮಾನ ನಿಲ್ದಾಣಗಳನ್ನು ಸ್ವಲ್ಪ ಸಮಯ ದವರೆಗೆ ಮುಚ್ಚಲಾಗಿತ್ತು. ಈ ದಾಳಿ ವೇಳೆ 50 ವರ್ಷದ ಮಹಿಳೆಯೊಬ್ಬರು ಗಾಯ ಗೊಂಡಿದ್ದಾರೆ ಎನ್ನಲಾಗಿದೆ. ಮಾಸ್ಕೋ, ಅದರ ಹೊರ ವಲಯದ ನಗರಗಳಲ್ಲಿ 2.1 ಕೋಟಿ ಜನ ವಾಸವಾಗಿದ್ದಾರೆ.
Related Articles
Advertisement
ರಷ್ಯಾದಿಂದ ಪ್ರತಿದಾಳಿಉಕ್ರೇನ್ ದಾಳಿಗೆ ಪ್ರತಿಯಾಗಿ ರಷ್ಯಾ ಕೂಡ 145 ಡ್ರೋನ್ಗಳ ಮೂಲಕ ದಾಳಿ ನಡೆಸಿದೆ. ಈ ಪೈಕಿ 62 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ರಷ್ಯಾದ ಬ್ರಿಯಾನ್ಸ್ ಪ್ರದೇಶದಲ್ಲಿರುವ ಸೇನಾ ಶಸ್ತ್ರಾಸ್ತ್ರ ಸಂಗ್ರಹಣ ಕೇಂದ್ರದ ಮೇಲೆಯೂ ದಾಳಿ ಮಾಡಿರುವುದಾಗಿ ಉಕ್ರೇನ್ ಹೇಳಿದೆ. ಈ ಪ್ರದೇಶದಲ್ಲಿ 14 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ. ರಷ್ಯಾ ಸಂಸತ್ ಕಟ್ಟಡ ಕ್ರೆಮ್ಲಿನ್ ಇರುವ ಸ್ಥಳದಿಂದ ಆಗ್ನೇಯಕ್ಕೆ ಸುಮಾರು 45 ಕಿ.ಮೀ. ದೂರವಿರುವ ರಮೆನ್ಸೊಯ್ ಜಿಲ್ಲೆಯನ್ನು ಗುರಿ ಯಾಗಿಸಿಕೊಂಡು ಉಕ್ರೇನ್ ಸೆಪ್ಟಂಬರ್ನಲ್ಲಿ ನಡೆಸಿದ ದಾಳಿಯೇ ಈವರೆಗಿನ ಅತಿದೊಡ್ಡ ದಾಳಿಯಾಗಿತ್ತು. ಆಗ ಉಕ್ರೇನ್ 20 ಡ್ರೋನ್ಗಳ ಮೂಲಕ ದಾಳಿ ನಡೆಸಿತ್ತು.