Advertisement

ಭಾರತೀಯರನ್ನು ನಿಂದಿಸಿ ಟ್ವೀಟ್‌ ಮಾಡಿದ್ದರೇ ಮಾರ್ಗನ್‌, ಬಟ್ಲರ್‌?

08:15 AM Jun 10, 2021 | Team Udayavani |

ಲಂಡನ್‌: ಇಂಗ್ಲೆಂಡ್‌ ತಂಡ ಮತ್ತೂ ಒಂದು ಟ್ವೀಟ್‌ ಸುಳಿಗೆ ಸಿಲುಕಿದೆ. ಇಯಾನ್‌ ಮಾರ್ಗನ್‌ ಮತ್ತು ಜಾಸ್‌ ಬಟ್ಲರ್‌ ಭಾರತೀಯ ಆಟಗಾರರ ವಿರುದ್ಧ ಜನಾಂಗೀಯ ನಿಂದನೆಯ ಟ್ವೀಟ್‌ ಮಾಡಿದ್ದಾರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಇಸಿಬಿ ತನಿಖೆ ಆರಂಭಿಸಿದೆ.

Advertisement

2019ರ ಏಕದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ಹಾಗೂ ಜಾಸ್‌ ಬಟ್ಲರ್‌ ಅವರು ಭಾರತೀಯರನ್ನು ಅಪಹಾಸ್ಯ ಮಾಡಲು “ಸರ್‌’ ಹಾಗೂ ಕೆಲವು ರಹಸ್ಯ ಇಂಗ್ಲಿಷ್‌ ಪದಗಳನ್ನು ಬಳಸಿದ್ದಾರೆಂಬ ಆರೋಪವನ್ನು ಎದುರಿಸುತ್ತಿದ್ದಾರೆ. 2017- 18ರಲ್ಲಿ ಇವರಿಬ್ಬರೂ ಈ ರೀತಿಯ ಟ್ವೀಟ್‌ ಮಾಡಿದ್ದರೆಂದು “ಟೆಲಿಗ್ರಾಫ್’ ವರದಿ ಮಾಡಿದೆ.

ಈ ಕುರಿತು ಮಾತನಾಡಿದ ಇಸಿಬಿ ವಕ್ತಾರ ರೊಬ್ಬರು, “ನಮ್ಮ ಕ್ರೀಡೆಯಲ್ಲಿ ತಾರತಮ್ಯಕ್ಕೆ ಜಾಗವಿಲ್ಲ. ಇಂತಹ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ನಾವು ಬದ್ಧರಾಗಿದ್ದೇವೆ. ಪ್ರತಿಯೊಂದು ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿ ಇಸಿಬಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next