Advertisement

ಪೀಕ್‌ ಅವರ್‌ನಲ್ಲಿ ಹೆಚ್ಚು ರೈಲು

11:18 AM Aug 20, 2017 | |

ಬೆಂಗಳೂರು: ಸಂಚಾರದಟ್ಟಣೆ ಅವಧಿಯಲ್ಲಿ “ನಮ್ಮ ಮೆಟ್ರೋ’ ರೈಲುಗಳ ನಡುವಿನ ಸಂಚಾರ ಅವಧಿಯನ್ನು 4 ನಿಮಿಷಕ್ಕೆ ಇಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.

Advertisement

ಈ ಹಿಂದೆ ಎರಡು ಟರ್ಮಿನಲ್‌ (ಬೈಯಪ್ಪನಹಳ್ಳಿ, ಮೈಸೂರು ರಸ್ತೆ)ಗಳಿಂದ 4 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ಮಾಡುವ ರೈಲು ಸೇವೆಗಳ ಅವಧಿ ದಿನಕ್ಕೆ ಸುಮಾರು 1 ತಾಸು ಇತ್ತು. ಈಗ ಅದು ಹೆಚ್ಚು-ಕಡಿಮೆ 2 ಗಂಟೆಗೂ ಹೆಚ್ಚಾಗಿದೆ. ಅದೇ ರೀತಿ, ನಾಗಸಂದ್ರ, ಯಲಚೇನಹಳ್ಳಿ ಟರ್ಮಿನಲ್‌ಗ‌ಳಿಂದ 6 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ಮಾಡುವ ರೈಲುಗಳ ಸೇವೆಗಳ ಅವಧಿಯನ್ನು 1 ತಾಸಿನಿಂದ 2.20 ತಾಸಿಗೆ ಹೆಚ್ಚಿಸಲಾಗಿದೆ.

ಜನದಟ್ಟಣೆ ಹಿನ್ನೆಲೆಯಲ್ಲಿ ಈ ಅವಧಿಯನ್ನು ವಿಸ್ತರಿಸಲಾಗಿದೆ. ಇದರಿಂದ ಅಂದಾಜು 15 ರೈಲುಗಳು ಈ ಅವಧಿಯಲ್ಲಿ ಸಂಚರಿಸಲಿವೆ. ಈ ಮೊದಲು 10 ರೈಲುಗಳು ಕಾರ್ಯಾಚರಣೆ ಮಾಡುತ್ತಿದ್ದವು. “ಪೀಕ್‌ ಅವರ್‌’ನಲ್ಲಿಯ ಮೆಟ್ರೋ ವೇಳಾಪಟ್ಟಿ ವಿವರ ಹೀಗಿದೆ.

ಬೈಯಪ್ಪನಹಳ್ಳಿ-ಮೈಸೂರು ರಸ್ತೆ
-ಬೆಳಿಗ್ಗೆ 8.10ರಿಂದ 9.30 (4 ನಿಮಿಷಗಳ ಅಂತರ)
-ಸಂಜೆ 5.18ರಿಂದ 6.18 (4 ನಿಮಿಷಗಳ ಅಂತರ)

ಮೈಸೂರು ರಸ್ತೆ-ಬೈಯಪ್ಪನಹಳ್ಳಿ
-ಬೆಳಿಗ್ಗೆ 8.50ರಿಂದ 10.10 (4 ನಿಮಿಷಗಳ ಅಂತರ)
-ಸಂಜೆ 5.58ರಿಂದ 6.58 (4 ನಿಮಿಷಗಳ ಅಂತರ)

Advertisement

ನಾಗಸಂದ್ರ-ಯಲಚೇನಹಳ್ಳಿ
-ಬೆಳಿಗ್ಗೆ 8ರಿಂದ 9.24 (6 ನಿಮಿಷಗಳ ಅಂತರ)
-ಸಂಜೆ 4.48ರಿಂದ 6 (6 ನಿಮಿಷಗಳ ಅಂತರ)

ಯಲಚೇನಹಳ್ಳಿಯಿಂದ ನಾಗಸಂದ್ರ
-ಬೆಳಿಗ್ಗೆ 8.53ರಿಂದ 10.17 (6 ನಿಮಿಷಗಳ ಅಂತರ)
-ಸಂಜೆ 5.37ರಿಂದ 6.55 (6 ನಿಮಿಷಗಳ ಅಂತರ)

Advertisement

Udayavani is now on Telegram. Click here to join our channel and stay updated with the latest news.

Next