Advertisement

ಲಿಂಗಾಯತ-ಒಕ್ಕಲಿಗರಿಗೆ ಹೆಚ್ಚಿನ ಟಿಕೆಟ್‌:ಲಿಂಗಾಯತ, ಒಕ್ಕಲಿಗರಿಗೆ ಮಣೆ ಹಾಕಿದ ಮೂರು ಪಕ್ಷಗಳು

09:45 PM Apr 20, 2023 | Team Udayavani |

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮೂರು ಪಕ್ಷಗಳಲ್ಲೂ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

Advertisement

ರಾಜ್ಯದ ಎರಡು ಪ್ರಭಾವಿ ಸಮುದಾಯಗಳಾದ ಲಿಂಗಾಯತ ಹಾಗೂ ವೀರಶೈವ ಸಮುದಾಯಕ್ಕೆ ರಾಜಕೀಯ ದೃಷ್ಟಿಯಿಂದ ಮಣೆ ಹಾಕುವುದು ಮೂರು ಪಕ್ಷಗಳಿಗೂ ಅನಿವಾರ್ಯವಾಗಿ ಪರಿಣಮಿಸಿದ್ದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಟಿಕೆಟ್‌ ನೀಡಿಲ್ಲ. ಕಾಂಗ್ರೆಸ್‌ 15 ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದರೆ ಜೆಡಿಎಸ್‌ 19 ಜನರಿಗೆ ಅವಕಾಶ ಕಲ್ಪಿಸಿದೆ.

ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ವ್ಯಕ್ತವಾದ ಟೀಕೆ ಹಿನ್ನೆಲೆಯಲ್ಲಿ ಟಿಕೆಟ್‌ ಹಂಚಿಕೆ ಸಂದರ್ಭದಲ್ಲೇ ಈ ಆರೋಪ ಕಳೆದುಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಬಾರಿ 68 ಲಿಂಗಾಯತ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ 42 ಒಕ್ಕಲಿಗ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಕೂಡಾ ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಈ ಬಾರಿ ತುಸು ಧಾರಾಳಿಯೇ ಆಗಿದ್ದು, 51 ಜನರಿಗೆ ಅವಕಾಶ ನೀಡಿದೆ. 45 ಮಂದಿ ಒಕ್ಕಲಿಗರಿಗೆ ಕಾಂಗ್ರೆಸ್‌ ಅವಕಾಶ ನೀಡಿದೆ. ಜೆಡಿಎಸ್‌ನಲ್ಲಿ 54 ಒಕ್ಕಲಿಗರು ಹಾಗೂ 37 ಲಿಂಗಾಯತರಿಗೆ ಅವಕಾಶ ನೀಡಲಾಗಿದೆ.
ಈ ಎರಡು ಪ್ರಭಾವಿ ಸಮುದಾಯ ಹೊರತುಪಡಿಸಿದರೆ ಬಿಜೆಪಿಯಲ್ಲಿ ಬ್ರಾಹ್ಮಣರಿಗೆ 13, ಈಡಿಗ-ಬಿಲ್ಲ 8, ಕುರುಬ 7 ಹಾಗೂ 6 ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್‌ 14 ಕುರುಬ, 7 ಬ್ರಾಹ್ಮಣರಿಗೆ ಅವಕಾಶ ನೀಡಿದೆ.

ಬಿಜೆಪಿ :
ಲಿಂಗಾಯತ 68, ಒಕ್ಕಲಿಗ 42, ಪರಿಶಿಷ್ಟ ಜಾತಿ 37, ಪರಿಶಿಷ್ಟ ಪಂಗಡ 17, ಬ್ರಾಹ್ಮಣ 13, ಈಡಿಗ-ಬಿಲ್ಲವ 8, ಕುರುಬ 7, ರೆಡ್ಡಿ 7, ಬಂಟ 6, ಮರಾಠ 3, ಗಾಣಿಗ 2, ನಾಯ್ಡು 2, ರಜಪೂತ್‌ 2, ಯಾದವ 2, ಬಲಿಜ 1, ಜೈನ 1, ಕೊಡವ 1, ಕೋಲಿ-ಕಬ್ಬಲಿಗ 1, ಕೋಮಾರ ಪಂಥ್‌ 1, ಮೊಗವೀರ 1, ತಿಗಳ 1.

ಕಾಂಗ್ರೆಸ್‌ :
ಲಿಂಗಾಯತ 51, ಒಕ್ಕಲಿಗ 45, ಪರಿಶಿಷ್ಟ ಜಾತಿ 36, ಪರಿಶಿಷ್ಟ ಪಂಗಡ 16, ಬ್ರಾಹ್ಮಣ 7, ಬಿಲ್ಲವ-ಈಡಿಗ 7, ಬೆಸ್ತ -ಕೋಲಿ-ಮೊಗವೀರ 5, ಬಂಟ 5, ಕ್ರಿಶ್ಚಿಯನ್‌ 3, ದೇವಾಂಗ 1, ಗೊಲ್ಲ 2, ಜೈನ 1, ಕೊಡವ 1, ಕುರುಬ 14, ಮರಾಠ 4, ಮುಸ್ಲಿಂ 15, ರಜಪೂತ್‌ 2, ರೆಡ್ಡಿ 3, ಉಪ್ಪಾರ 1, ವೈಶ್ಯ 1, ಬಲಿಜ 2, ನಾಯ್ಡು 1.

Advertisement

ಜೆಡಿಎಸ್‌ :
ಒಕ್ಕಲಿಗ 54, ಲಿಂಗಾಯತ 37, ಪರಿಶಿಷ್ಟ ಜಾತಿ 37, ಪರಿಶಿಷ್ಟ ಪಂಗಡ 12, ಮುಸ್ಲಿಂ 19, ಓಬಿಸಿ 31, ಇತರೆ ಸಮುದಾಯ 14.

ಪದವೀಧರರು ಹೆಚ್ಚು
ಬಿಜೆಪಿ ಪಟ್ಟಿಯಲ್ಲಿ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. 37 ಮಂದಿ ಸ್ನಾತಕೋತ್ತರ ಪದವೀಧರರು, ಹಾಗೂ 26 ಜನ ಪಿಯು ಪಾಸಾದವರು ಅಭ್ಯರ್ಥಿಗಳಾಗಿದ್ದಾರೆ.
ವಾಣಿಜ್ಯೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. 147 ಮಂದಿ ವಾಣಿಜ್ಯೋದಮಿಗಳು ಅಭ್ಯರ್ಥಿಗಳಾಗಿದ್ದಾರೆ. 38 ಮಂದಿ ಕೃಷಿಕರು ಹಾಗೂ ಐವರು ವಕೀಲರು ನಾಮಪತ್ರ ಸಲ್ಲಿಸಿದ್ದಾರೆ, 9 ಮಂದಿ ವೈದ್ಯರು ಮೂವರು ಶಿಕ್ಷಣ ತಜ್ಞರು ಅಭ್ಯರ್ಥಿಗಳಾಗಿದ್ದಾರೆ.

ಮೂರು ಸಲ ಗೆದ್ದವರು 33 ಮಂದಿ
ಬಿಜೆಪಿ ಈ ಬಾರಿ 75 ಮಂದಿ ಹೊಸಬರಿಗೆ ಮಣೆ ಹಾಕಿದರೆ, ಹಿಂದೆ ಮೂರು ಸಲ ಗೆದ್ದ 33 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಹಿಂದೆ ಚುನಾವಣೆಗೆ ಸ್ಪರ್ಧಿಸಿ ಒಮ್ಮೆಯೂ ಗೆಲ್ಲದ 27 ಜನರಿಗೆ ಒಂದು ಸಲ ಗೆದ್ದ 40 ಮಂದಿಗೆ, ಎರಡು ಸಲ ಗೆದ್ದ 25 ಮಂದಿಗೆ ಟಿಕೆಟ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next