Advertisement
ಕರಾವಳಿಯಲ್ಲಿ ಜೂನ್ ತಿಂಗಳಿನಿಂದ ಸೆಪ್ಟಂಬರ್ ಅಂತ್ಯದವರೆಗೆ ಮುಂಗಾರು ಋತುವಿನಲ್ಲಿ 3101 ಮಿ.ಮೀ. ಮಳೆಯಾಗಬೇಕು. ಅದರಂತೆ ಸೆ.30ರ ವರೆಗೆ 3,736 ಮಿ.ಮೀ. ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಶೇ.11, ಉಡುಪಿ ಜಿಲ್ಲೆಯಲ್ಲಿ ಶೇ.13 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.31ರಷ್ಟು ಹೆಚ್ಚು ಮಳೆ ಸುರಿದಿದೆ. ಒಟ್ಟಾರೆ ಕರಾವಳಿ ಭಾಗದಲ್ಲಿ ಶೇ.20ರಷ್ಟು ಅಧಿಕ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ.12ರಷ್ಟು ಹೆಚ್ಚಳ, ಬಂಟ್ವಾಳ-ಶೇ.6, ಮಂಗಳೂರು-ಶೇ.7, ಪುತ್ತೂರು-ಶೇ.3, ಸುಳ್ಯ-ಶೇ.22, ಮೂಡುಬಿದಿರೆ-ಶೇ.19, ಕಡಬ-ಶೇ.8, ಮೂಲ್ಕಿ-ಶೇ.3, ಉಳ್ಳಾಲ-ಶೇ.5, ಉಡುಪಿ ಜಿಲ್ಲೆಯ ಕಾರ್ಕಳ-ಶೇ.6, ಕುಂದಾಪುರ-ಶೇ.45, ಉಡುಪಿ-ಶೇ.12, ಬೈಂದೂರು-ಶೇ.19, ಬ್ರಹ್ಮಾವರ-ಶೇ.17, ಕಾಪು-ಶೇ.11 ಮತ್ತು ಹೆಬ್ರಿಯಲ್ಲಿ ಶೇ.6ರಷ್ಟು ಹೆಚ್ಚು ಮಳೆಯಾಗಿದೆ.
Related Articles
Advertisement
ಹಿಂಗಾರು ಮಳೆಯತ್ತ ನಿರೀಕ್ಷೆಕರಾವಳಿ ಭಾಗದಲ್ಲಿ ಮುಂಗಾರು ಅವಧಿ ಪೂರ್ಣಗೊಂಡ ಬಳಿಕ ಅ. 1ರಿಂದ ಡಿಸೆಂಬರ್ ಅಂತ್ಯದವರೆಗಿನ ಹಿಂಗಾರು ಅವಧಿಯ ಮೇಲೆ ನಿರೀಕ್ಷೆ ಮೂಡಿದೆ. ಈ ಹಿಂದಿನ ಕೆಲವು ವರ್ಷಗಳಲ್ಲಿ ಕರಾವಳಿಗೆ ಉತ್ತಮ ಹಿಂಗಾರು ಇತ್ತು. ಈ ಬಾರಿ ಹೇಗಿರಬಹುದು ಎಂಬ ನಿರೀಕ್ಷೆ ರೈತರಲ್ಲಿದೆ. ಹಿಂಗಾರು ಅವಧಿಯ ಮಳೆಯ ಕುರಿತಂತೆ ಹವಾಮಾನ ಇಲಾಖೆಯಿಂದ ಸದ್ಯದಲ್ಲೇ ವಿಶ್ಲೇಷಣೆಯೂ ಬಿಡುಗಡೆ ಮಾಡಲಿದೆ. ಕರಾವಳಿಯಲ್ಲಿ ಹಿಂಗಾರು ಅವಧಿಯಲ್ಲಿ 259.4 ಮಿ.ಮೀ. ವಾಡಿಕೆ ಮಳೆ ಸುರಿಯಬೇಕು. 2019ರಲ್ಲಿ ವಾಡಿಕೆಗಿಂತ ಶೇ.124 ಹೆಚ್ಚಳ, 2020ರಲ್ಲಿ ಶೇ.27, 2021ರಲ್ಲಿ ಶೇ.122, 2022ರಲ್ಲಿ ಶೇ.14ರಷ್ಟು ಕಡಿಮೆ ಮತ್ತು ಕಳೆದ ವರ್ಷ ಶೇ.6ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು.