Advertisement
ಕಳೆದ ವರ್ಷ ದ.ಕ. ಜಿಲ್ಲೆಯಿಂದ 400ಕ್ಕೂ ಅಧಿಕ ಬಸ್‌ಗಳು ಚುನಾವಣೆ ಕೆಲಸಕ್ಕೆ ತೆರಳಿದ್ದವು. ಆದರೆ ಈ ಬಾರಿ ಹೆಚ್ಚಿನ ಶಾಲಾ-ಕಾಲೇಜು ಬಸ್‌ಗಳನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದಾಗಿ ಕೆಎಸ್ಸಾರ್ಟಿಸಿ ಬಸ್‌ಗಳ ಬಳಕೆ ಕಡಿಮೆ. ಹಾಗಾಗಿ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಉಂಟಾಗದು ಎನ್ನುತ್ತಾರೆ ಅಧಿಕಾರಿಗಳು.
ದೂರದ ಊರುಗಳಿಂದ ಮತದಾನಕ್ಕೆಂದು ತಮ್ಮ ಊರುಗಳಿಗೆ ಬಂದ ಮಂದಿಗೆ ಸರಣಿ ರಜೆ ಸಿಗುತ್ತದೆ. ಕೆಲವರು ಮತ್ತೆರಡು ದಿನ ರಜಾ ಹಾಕಿ ಮೇ 1ರ ಕಾರ್ಮಿಕ ದಿನದ ರಜೆ ಕಳೆದು ತಮ್ಮ ಕೆಲಸಕ್ಕೆ ಮರಳಲು ಈಗಾಗಲೇ ಯೋಜನೆ ರೂಪಿಸಿದ್ದಾರೆ. ಇದೇ ಕಾರಣಕ್ಕೆ ಎ. 25ರಂದು ಬೆಂಗಳೂರಿನಿಂದ ಮಂಗಳೂರಿಗೆ ಹೆಚ್ಚುವರಿ ಸುಮಾರು 40 ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು ಎ. 28ರಂದು ಮಂಗಳೂರಿನಿಂದ ಬೆಂಗಳೂರಿಗೂ ಸುಮಾರು 40 ಹೆಚ್ಚುವರಿ ಬಸ್‌ಗಳು ತೆರಳಲಿವೆ.