ಹುಣಸೂರು: ನಗರ ಶಬ್ಬೀರ್ ನಗರ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಜ್ವರದಿಂದ ಬಳಲುತ್ತಿರುವ 10 ವರ್ಷದೊಳಗಿನ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಕಳೆದ ನಾಲ್ಕು ದಿನಗಳಿಂದ ಹೆಚ್ಚಾಗಿ ಶಬ್ಬೀರ್ ನಗರದಲ್ಲಿ ಮಕ್ಕಳು ದೊಡ್ಡವರೆನ್ನದೆ ಜ್ವರ ಕಾಣೀಸಿಕೊಳ್ಳುತಿದೆ. ಹಲವರಿಗೆ ಮೊದಲು ಗಂಟಲು,ಕೈ-ಕಾಲು ನೋವು,ಜ್ವರ ಕಾಣಿಸಿಕೊಂಡಿದ್ದು, ಅಂದಿನಿಂದಲೂ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವಾಸಿಯಾಗದ್ದರಿಂದ ಶುಕ್ರವಾರ ಸಂಜೆಯಿಂದ ಶಬ್ಬೀರ್ ನಗರದ 10 ವರ್ಷದೊಳಗಿನ ಮಕ್ಕಳು ತಂಡೋಪತಂಡವಾಗಿ ಬಂದು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳ ಪೈಕಿ ಶಬ್ಬೀರ್ ನಗರದ ಉಮ್ಮೆಸಾನಿ,ಪಾತಿಮಾ,ಕುದೇಚುದ್ರುಲ್ಲಾ, ಪಾಜಿಯಾಬಾನು, ಉಮಾಯೂನ್,ಕುಲತುನ್, ಮುಜಾಮಿಲ್ ಷರೀಪ್, ನಾಸಿರ್ ಷರೀಪ್, ಮಹಮದ್ ಕೈಪ್, ಹಯಾತನಾಬೇಗಂ, ಶೀಪಾನಾ, ಇನ್ನು ಮುಸ್ಲಿಂ ಬ್ಲಾಕ್‌ನ ಮುಬಾರಕ್, ರೆಹಮತ್ ಮೊಹಲ್ಲಾದ ಉಮ್ಮೆಹಾನಿ, ಗುರುಪುರದ ಸೂಫಿಯಾ, ನರಸಿಂಹಸ್ವಾಮಿ ತಿಟ್ಟಿನ ವೇಣುಗೋಪಾಲ್, ನ್ಯೂ ಮಾರುತಿ ಬಡಾವಣೆಯ ಮೋಹಿತ್ ಒಳರೋಗಿಗಳಾಗಿ ದಾಖಲಾಗಿದ್ದರೆ, ಅನೇಕ ಮಂದಿ ದೊಡ್ಡವರೂ ಸಹ ವಿವಿಧ ವಾರ್ಡ್‌ಗಳಲ್ಲಿ ದಾಖಲಾಗಿದ್ದಾರೆ, ಕೆಲವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆರದು ಮನೆಗೆ ತೆರಳಿದ್ದಾರೆ.
ಈ ಪೈಕಿ ಶಬ್ಬೀರ್ ನಗರದ 9 ವರ್ಷದ ಇರ್ಷಾದ್‌ಷರೀಪ್‌ಗೆ ರಕ್ತದ ಪ್ಲೇಟ್ ಲೇಟ್ ಕಡಿಮೆಯಾಗಿರುವುದಾಗಿ ವರದಿ ಬಂದಿದೆ ಎಂದು ಆತನ ಪೋಷಕರು ತಿಳಿಸಿದ್ದು, ಇದೇ ಆಸ್ಪತ್ರೆಯಲ್ಲಿ ಎಲ್ಲ ಮಕ್ಕಳಂತೆ ಒಂದೇ ವಾರ್ಡ್‌ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿಗಳು ಚಿಕಿತ್ಸೆ ನೀಡಲು ಹರಸಾಹಸ ಪಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ರಾತ್ರಿ ಕಾರ್ಯನಿರತ ವೈದ್ಯ ಡಾ. ಸಚ್ಚಿದಾನಂದಮೂರ್ತಿ ಒಬ್ಬರೇ ಇದ್ದು, ಇತರೆ ರೋಗಿಗಳು ಹೆಚ್ಚಾಗಿ ಬರುತ್ತಿರುವುದರಿಂದ ಚಿಕಿತ್ಸೆ ಕಷ್ಟವಾಗುತ್ತಿದೆ.
ಬಹುತೇಕರಲ್ಲಿ ಹೆಚ್ಚಾಗಿ ಜ್ವರ,ಕೈಕಾಲು,ಕೀಲು,ಗಂಟಲು ನೋವು ಕಾಣಿಸಿಕೊಳ್ಳುತ್ತಿದ್ದು, ಇದೊಂದು ವೈರಲ್ ಫೀವರ್(ಜ್ವರ), ಚಿಕೂನ್ ಗುನ್ಯಾ ಮಾದರಿ ಜ್ವರ ವಾಗಿರಬಹುದು, ಇಂದು ದಾಖಲಾದವರಲ್ಲಿ ಹೆಚ್ಚು ಜ್ವರದಿಂದ ಬಳಲುತ್ತಿದ್ದಾರೆ. ರಕ್ತದ ಪರೀಕ್ಷೆಯಿಂದಷ್ಟೆ ಯಾವ ಕಾಯಿಲೆ ಎಂದು ಇನ್ನಷ್ಟೆ ತಿಳಿಯಬೇಕಿದೆ ಎಂದು ವೈದ್ಯಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ ತಿಳಿಸಿದ್ದಾರೆ.
ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಬ್ಬೀರ್ ನಗರದಲ್ಲಿ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಲಾಗಿದ್ದು, ತಾಲೂಕಿನಲ್ಲಿ ಇಬ್ಬರಿಗೆ ಮಾತ್ರ ಡೆಂ à ಜ್ವರ ಇರುವುದು ಖಚಿತಪಟ್ಟಿದೆ.
-ಡಾ. ದೇವತಾಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ, ಹುಣಸೂರು.