ದಾವಣಗೆರೆ: ಗಲಭೆಪೀಡಿತ ದಕ್ಷಿಣ ಆಫ್ರಿಕಾದ ಸೂಡಾನ್ ನಲ್ಲಿ ದಾವಣಗೆರೆ ಜಿಲ್ಲೆಯ 40 ಕ್ಕೂ ಹೆಚ್ಚಿನ ಜನರು ಸಿಲುಕಿದ್ದಾರೆ.
ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಾಳ್ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ 40 ಕ್ಕೂ ಹೆಚ್ಚು ಜನರು ಸಿಲುಕಿ ಹಾಕಿಕೊಂಡಿದ್ದಾರೆ.
ಸೂಡಾನ್ ನಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಅಂಕಿಅಂಶ ಸಂಗ್ರಹಿಸಿದರು. ಈ ವೇಳೆ ಸೂಡಾನ್ ನಲ್ಲಿರುವವರನ್ನು ಸುರಕ್ಷಿತವಾಗಿ ಕರೆತರಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಧೈರ್ಯದಿಂದ ಇರುವಂತೆ ಅಲ್ಲಿನ ಜನರಿಗೆ ತಿಳಿಸಿದರು.
ಅಸ್ತಾಪನಹಳ್ಳಿ, ಗೋಪನಾಳ್, ನಲ್ಲೂರು ಸಮೀಪದ ಹಾಗೂ ಶಿವಮೊಗ್ಗ ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗದವರು ಹಲವಾರು ವರ್ಷಗಳಿಂದ ಆಯುರ್ವೇದ ಔಷಧೀಯ ಮಾರಾಟ ಮತ್ತಿತರೆ ವಾಣಿಜ್ಯ ಚಟುವಟಿಕೆ ಗಳಿಗಾಗಿ ಸೂಡಾನ್ ಮತ್ತಿತರ ದೇಶಗಳಿಗೆ ಹೋಗಿ, ಬರುವುದು ನಡೆದುಕೊಂಡು ಬಂದಿದೆ.
ಸೂಡಾನ್ ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ನಡುವೆ ಸಿಲುಕಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಕೆಲವರು ತಮ್ಮ ಅಳಲು ತೋಡಿಕೊಂಡಿದ್ದಾರೆ.