ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣ ಕುರಿತಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೋವಿಡ್ ತಡೆ ಮಾರ್ಗ ಸೂಚಿಗಳನ್ನು ಪ್ರಕಟಿಸಲಾಗಿದೆ.
ಡಿ. 28 ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ 10 ದಿನ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ಸಾರ್ವಜನಿಕವಾಗಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ.
ಡಿ. 30ರಿಂದ ಜನವರಿ 02 ರ ವರೆಗೆ ರೆಸ್ಟೊರೆಂಟ್ , ಪಬ್, ಕ್ಲಬ್ ಮತ್ತು ಹೋಟೆಲ್ ಗಳು 50 % ಮಾತ್ರ ಕಾರ್ಯ ನಿರ್ವಹಿಸಬೇಕು. ಎಲ್ಲಾ ಸಿಬ್ಬಂದಿಗಳು ಅಗತ್ಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ ಆರ್ ಟಿ-ಪಿಸಿಆರ್ ರಿಪೋರ್ಟ್ ಹೊಂದಿರಬೇಕು. 2 ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು.
ಡಿ. 28ರಿಂದ ಮದುವೆ , ಶುಭ ಸಮಾರಂಭಗಳು, ಕಾನ್ಫರೆನ್ಸ್ ಗಳು, ಮೀಟಿಂಗ್ ಗಳು ಮತ್ತು ಇನ್ನಿತರ ಎಲ್ಲಾ ಸಭೆ, ಕಾರ್ಯಕ್ರಮಗಳಲ್ಲಿ
300 ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ. ಮಾಸ್ಕ್ , ಸ್ಯಾನಿಟೈಜರ್ ಸೇರಿದಂತೆ ಕೋವಿಡ್ ತಡೆಗೆ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಆಯೋಜಕರು ಸಮಾರಂಭದಲ್ಲಿ ಕಡ್ದಾಯವಾಗಿ ಅನುಸರಿಸಬೇಕು.
ಗಡಿ ಜಿಲ್ಲೆಗಳಲ್ಲಿ ಅದರಲ್ಲಿಯೂ ಕೇರಳ ಮತ್ತು ಮಹಾರಾಷ್ಟ ಗಡಿಗಳಲ್ಲಿ ವ್ಯಾಪಕ ಕಟ್ಟೆಚ್ಚರ. ಪ್ರಯಾಣಿಕರ ತಪಾಸಣೆ.
ಸಚಿವರಾದ ಡಾ.ಸುಧಾಕರ್, ಆರ್.ಅಶೋಕ್, , ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.