Advertisement

Goa ಸರಕಾರದಿಂದ 2 ಲಕ್ಷಕ್ಕೂ ಹೆಚ್ಚು ವಾಹನಗಳ ಸ್ಕ್ರ್ಯಾಪ್

04:10 PM Aug 05, 2023 | Team Udayavani |

ಪಣಜಿ: ಗೋವಾ ಸರ್ಕಾರವು 2 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಸ್ಕ್ರ್ಯಾಪ್ ಮಾಡಲಿದೆ. ಜುಲೈ 15 ರ ವರೆಗಿನ ಈ ಕುರಿತ ಅಂಕಿ ಅಂಶಗಳ ಪ್ರಕಾರ ಒಟ್ಟೂ 2,19,921 ವಾಹನಗಳು 15 ವರ್ಷಗಳಿಗೂ ಮುನ್ನ ನೋಂದಣಿಯಾದ ವಾಹನಗಳಾಗಿವೆ. ಡಿಸೆಂಬರ್ 31 ರ ವೇಳೆಗೆ ಈ ಸಂಖ್ಯೆ ಇನ್ನೂ 15,425 ರಷ್ಟು7 ಹೆಚ್ಚಳವಾಗಲಿದೆ. ವಾಹನಗಳ ಸಾಂದ್ರತೆಯಲ್ಲಿ ಗೋವಾ ವಿಶ್ವದಲ್ಲಿ 15ನೇ ಸ್ಥಾನದಲ್ಲಿದೆ ಎಂದು ಸಾರಿಗೆ ಸಚಿವ ಮಾವಿನ್ ಗುದಿನ್ಹೋ ಅವರು ಗೋವಾ ವಿಧಾನಸಭೆ ಕಲಾಪದಲ್ಲಿ ಮಾಹಿತಿ  ನೀಡಿದ್ದಾರೆ.

Advertisement

ಶಾಸಕ ವೆಂಜಿ ವಿಗಾಸ್ ಕೇಳಿದ ಪ್ರಶ್ನೆಗೆ ಸಾರಿಗೆ ಸಚಿವ ಮಾವಿನ್ ಗುದಿನ್ಹೋ ಉತ್ತರಿಸಿದರು. ಮಾವಿನ್ ಮಾತನಾಡಿ, ವಾಹನ ಸ್ಕ್ರ್ಯಾಪಿಂಗ್ ನೀತಿಯಲ್ಲಿ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳನ್ನು ಸೇರಿಸಬೇಕು. ಈ ವರ್ಷ ಗೋವಾದಲ್ಲಿ ಆಗಸ್ಟ್‍ವರೆಗೆ 42,957 ವಾಹನಗಳು ನೋಂದಣಿಯಾಗಿವೆ ಗೋವಾದಲ್ಲಿ ತಲಾ ವಾಹನ ಮಾಲೀಕತ್ವವು ರಾಷ್ಟ್ರೀಯ ಸರಾಸರಿಗಿಂತ 4.5 ಪಟ್ಟು ಹೆಚ್ಚಾಗಿದೆ. ರಸ್ತೆಗಳಲ್ಲಿ ಹಳೆಯ ಮಾಲಿನ್ಯಕಾರಕ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಸ್ಕ್ರ್ಯಾಪಿಂಗ್ ನೀತಿಯ ಮುಖ್ಯ ಉದ್ದೇಶವಾಗಿದೆ. ಕಾರ್ಬನ್ ಹೊರಸೂಸುವಿಕೆಗೆ ಸ್ಕ್ರ್ಯಾಪಿಂಗ್ ಇದು ಸಾರಿಗೆ ವಲಯದ ಪ್ರಮುಖ ಕೊಡುಗೆಯಾಗಿದೆ. ಆದ್ದರಿಂದ, ಸ್ಕ್ರ್ಯಾಪಿಂಗ್ ನೀತಿ ಮುಖ್ಯವಾಗಿದೆ ಎಂದು ಮಾವಿನ್ ಗುದಿನ್ಹೋ ಹೇಳಿದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಪುರಸಭೆಗಳು, ರಾಜ್ಯ ಸಾರಿಗೆ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಒಡೆತನದ 15 ವರ್ಷಗಳ ಹಳೆಯ ವಾಹನಗಳನ್ನು ಎ 1 ರಿಂದ ರದ್ದುಗೊಳಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ. ಆದರೆ, ರಾಜ್ಯದಲ್ಲಿ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಇನ್ನೂ ಇಲ್ಲ. ಎ 4 ರವರೆಗೆ ರಾಜ್ಯದಲ್ಲಿ 2,992 ಸರ್ಕಾರಿ ವಾಹನಗಳು ನೋಂದಣಿಯಾಗಿವೆ. ಈ ಪೈಕಿ 521 ಸರ್ಕಾರಿ ವಾಹನಗಳು 15 ವರ್ಷ ಪೂರೈಸಿವೆ. ಇನ್ನೂ ಐದು ವಾಹನಗಳ ತಪಾಸಣೆ ನಡೆಯುತ್ತಿದೆ. ಆದರೆ, ಈ ವಾಹನಗಳು ಇನ್ನೂ ಬಳಕೆಯಲ್ಲಿವೆಯೇ ಎಂಬ ಬಗ್ಗೆ ಸಾರಿಗೆ ಇಲಾಖೆ ಬಳಿ ಮಾಹಿತಿ ಇಲ್ಲ ಎಂದು ಸಚಿವ ಮಾವಿನ್ ಗುದಿನ್ಹೊ ಹೇಳಿದರು. ಸರ್ಕಾರದಲ್ಲಿನ ಹಳೇಯ ವಾಹನಗಳನ್ನು ಬದಲಿಸಲು ಅಂದಾಜು 95.9 ಕೋಟಿ ರೂ. ಅಗತ್ಯವಿದೆ,  ಅಲ್ಲದೆ ಕಳೆದ ಐದು ವರ್ಷಗಳಲ್ಲಿ 898 ಹೊಸ ಸರ್ಕಾರಿ ವಾಹನಗಳು ನೋಂದಣಿಯಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next