Advertisement

ರಾಜ್ಯದಲ್ಲಿ ಕೃಷಿ ಟೂರಿಸಂಗೆ ಹೆಚ್ಚಿನ ಉತ್ತೇಜನ: ಸಚಿವ ನಾರಾಯಣ ಗೌಡ

03:53 PM Sep 10, 2020 | keerthan |

ದಾವಣಗೆರೆ: ರಾಜ್ಯ ಸರ್ಕಾರ ಕೃಷಿ ಟೂರಿಸಂ ಗೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

Advertisement

ಗುರುವಾರ ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಗ್ರಿ ಟೂರಿಸಂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಚಿಕ್ಕಮಗಳೂರು ಹಾಗೂ ಮಂಡ್ಯದಲ್ಲಿ ಪ್ರಾರಂಭಿಸಲಾಗಿದೆ. ರಾಜ್ಯದ ಇತರೆ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಮತ್ತೆ ಗರಿಗೆದರಿದ ಸಚಿವ ಸಂಪುಟ ವಿಸ್ತರಣೆ ಚರ್ಚೆ: ಕೆಲವೇ ದಿನಗಳಲ್ಲಿ ಬಿಎಸ್ ವೈ ದೆಹಲಿಗೆ

ಅನೇಕರಿಗೆ ವಿವಿಧ ಬೆಳೆಗಳ ಬೆಳೆಯುವ ಮಾಹಿತಿಯೇ ಇರುವುದಿಲ್ಲ. ಅಗ್ರಿ ಟೂರಿಸಂ ಮೂಲಕ ಬೆಳೆಗಳ ಬೆಳೆಯುವ ವಿಧಾನ, ಆಹಾರ ಉತ್ಪನ್ನಗಳ ಸಿದ್ದಪಡಿಸುವಿಕೆ ಮಾಹಿತಿ ನೀಡಲಾಗುತ್ತದೆ. ಕೃಷಿಫಾರಂ, ಗದ್ದೆ, ಜಮೀನುಗಳಲ್ಲಿ ಹೋಂ ಸ್ಟೇ ಮಾದರಿ ವ್ಯವಸ್ಥೆ ಮಾಡಲಾಗುವುದು. ದಿನಕ್ಕೆ ಇಂತಿಷ್ಟು ಶುಲ್ಕ ನಿಗದಿ ಪಡಿಸಲಾಗುವುದು. ಅಮೇರಿಕಾ ಇತರೆ ದೇಶಗಳ ಮಾದರಿಯಲ್ಲಿ ಅಗ್ರಿ ಟೂರಿಸಂ ಬಲಪಡಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next