Advertisement
ಕೆಲವು ಸ್ಥಳೀಯ ಜನಪ್ರತಿನಿಧಿಗಳು ತಮ್ಮ ವೈಯುಕ್ತಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಚಾರಣಗಳನ್ನು ಆರಂಭಿಸಲು ಒತ್ತಾಸೆ ಹೂಡಿರುವುದು ತಿಳಿದುಬಂದಿದೆ.
Related Articles
Advertisement
ಸ್ಥಳೀಯ ಬೇಡಿಕೆಯ ನೆಪ?ಇಲ್ಲಿ ಚಾರಣ ಆರಂಭಿಸಲು ಸ್ಥಳೀಯರ ಒತ್ತಾಯ ಇದೆ ಎನ್ನುವ ನೆಪವನ್ನು ಮುಂದಿಡಲಾಗುತ್ತಿದ್ದು, ಉಳ್ಳವರಿಂದ ಹೋಮ್‌ಸ್ಟೇ ಉದ್ಯಮಕ್ಕೆ ಪೂರಕವಾಗಿ ಆರ್ಥಿಕ ಲಾಭಕ್ಕಾಗಿ ಮಾಡುತ್ತಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ಪರಿಸರ ಪ್ರಿಯರು. ಬಂಗಾರಪಲ್ಕೆ ಪ್ರದೇಶವು ಬಹಳ ಆಳವಾದ ಜಾಗವಾಗಿದ್ದು, ಇದಕ್ಕೆ ಸರಿಯಾದ ದಾರಿಗಳಿಲ್ಲ. ಇಲ್ಲಿ ಈ ಹಿಂದೆ ಮಣ್ಣು ಕುಸಿದು ಯುವಕನೊಬ್ಬ ಸಾವನ್ನಪ್ಪಿದ್ದ. ಇದು ಅಪಾಯಕಾರಿ ಎನ್ನುವ ಹಣೆಪಟ್ಟಿಯನ್ನೂ ಪಡೆದುಕೊಂಡಿದ್ದು, ಚಾರಣಕ್ಕೆ ಸೂಕ್ತವಲ್ಲ ಎನ್ನುವುದು ಅವರ ಅಭಿಪ್ರಾಯ. ಹೊಸ ಸ್ಥಳಗಳ ಸೇರ್ಪಡೆ ಪರಿಶೀಲನೆಯಲ್ಲಿ
ಕುದುರೆಮುಖ ಅರಣ್ಯ ವ್ಯಾಪ್ತಿಯ 2-3 ಹೊಸ ಸ್ಥಳಗಳನ್ನು ಚಾರಣಕ್ಕೆ ಸೇರಿಸಲು ಸ್ಥಳೀಯರಿಂದ ಒತ್ತಾಯವಿದೆ. ಅದೇ ರೀತಿ ಹಲವರ ವಿರೋಧವೂ ಇದೆ. ಆದರೆ ಜವಾಬ್ದಾರಿಯುತರಿಗೆ ನಿಯಂತ್ರಿತ ವಾಗಿ ಚಾರಣಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದು ಇಲಾಖೆಯ ಅಭಿಪ್ರಾಯ. ಕುದುರೆಮುಖ ವಲಯದ ಧಾರಣಾ ಶಕ್ತಿಯ ಅನ್ವಯ ದಿನಕ್ಕೆ 300 ಮಂದಿಗೆ ಮಾತ್ರ ಗರಿಷ್ಠ ಅನುಮತಿ ನೀಡಲಾಗುತ್ತಿದೆ. ಇದೇಮಿತಿಯಲ್ಲಿ ಹೊಸ ಸ್ಥಳಗಳಿಗೂ ಅನುಮತಿ ಕೊಡುವ ಬಗ್ಗೆ ಸದ್ಯ ಚರ್ಚೆ ನಡೆಯು ತ್ತಿದ್ದು, ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕುದುರೆ ಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.