ಪಣಜಿ: ದಾಬೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಂತರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಲ್ಲಿ ಭಾರಿ ಹೆಚ್ಚಳದಿಂದಾಗಿ ವಿಮಾನಗಳ ಹಾರಾಟದಲ್ಲಿ ಭಾರಿ ಹೆಚ್ಚಳವನ್ನು ಕಂಡಿದೆ. ದಾಬೋಲಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುಮಾರು 100 ವಿಮಾನಗಳ ಆಗಮನ ಮತ್ತು 99 ವಿಮಾನಗಳ ನಿರ್ಗಮನಗಳನ್ನು ದಾಖಲಿಸಿದೆ.
ಗೋವಾ ದಾಬೋಲಿ ವಿಮಾನ ನಿಲ್ದಾಣದಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಶನಿವಾರ, ವಿಮಾನ ನಿಲ್ದಾಣವು ಏಳು ಅಂತರಾಷ್ಟ್ರೀಯ ವಿಮಾನಗಳು ಸೇರಿದಂತೆ 88 ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ನಿರ್ವಹಿಸಿದೆ. ಅಂತರಾಷ್ಟ್ರೀಯ ಚಾರ್ಟರ್ ಫ್ಲೈಟ್‍ಗಳ ಹೆಚ್ಚಳ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪ್ರವಾಸೋದ್ಯಮದ ಪ್ರವೃತ್ತಿಯಿಂದಾಗಿ ಹಬ್ಬದ ಋತುವಿನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 18, ಭಾನುವಾರ, ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 100 ವಿಮಾನಗಳ ಆಗಮನ ಮತ್ತು 99 ವಿಮಾನ ನಿರ್ಗಮನವನ್ನು ದಾಖಲಿಸಿದೆ. ಇದು ಒಟ್ಟು 31,965 ಪ್ರಯಾಣಿಕರು ಪ್ರಯಾಣಿಸಿದ್ದಾರೆ (16046 ಆಗಮನ ಮತ್ತು 15919 ನಿರ್ಗಮನ), ಇದು ಇತ್ತೀಚಿನ ದಿನಗಳಲ್ಲಿ ಅತ್ಯಧಿಕವಾಗಿದೆ ಎಂದೇ ಹೇಳಲಾಗಿದೆ.
ಸದ್ಯ ಗೋವಾಕ್ಕೆ ಕ್ರಿಸ್ ಮಸ್ ಸಂಭ್ರಮಾಚರಣೆ ಮತ್ತು ಹೊಸ ವರ್ಷ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾದತ್ತ ಮುಖಮಾಡುತ್ತಿದ್ದಾರೆ. “ಪ್ರವಾಸಿಗರ ಆಗಮನವು ದಿನದಿಂದ ದಿನಕ್ಕೆ ನಿರಂತರವಾಗಿ ಹೆಚ್ಚುತ್ತಿದೆ. ದಾಬೋಲಿ ವಿಮಾನ ನಿಲ್ದಾಣದಲ್ಲಿ ಯಾವುದೇ ಸ್ಲಾಟ್‍ಗಳು ಲಭ್ಯವಿಲ್ಲ ಆದರೆ ಅಂತರರಾಷ್ಟ್ರೀಯ ಚಾರ್ಟರ್‍ಗಳು ಇನ್ನೂ ಕೇಳುತ್ತಿವೆ ಎಂದು ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್‍ವಿಟಿ ಧನಂಜಯ್ ರಾವ್ ಮಾಹಿತಿ ನೀಡಿದರು.
ಇದನ್ನೂ ಓದಿ: 1971ರ ಭಾರತ-ಪಾಕಿಸ್ಥಾನ ಯುದ್ಧದ ವೀರ ಯೋಧ ಭೈರೋನ್ ಸಿಂಗ್ ರಾಥೋಡ್ ಇನ್ನಿಲ್ಲ