Advertisement
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಷ್ಟ್ರೋತ್ಥಾನಪರಿಷತ್‌ನ ಬನಶಂಕರಿಯಲ್ಲಿರುವ ಶಾಲೆ ಹಾಗೂರಾಮಮೂರ್ತಿ ನಗರದಲ್ಲಿರುವ ಶಾಲೆಗಳನ್ನು ಐಸೋಲೇಷನ್ ಕೇಂದ್ರವಾಗಿ ಪರಿವರ್ತಿಸಲಾಗಿದೆ.ಹಾಗೆಯೇ ಮಾಗಡಿ ರಸ್ತೆಯ ಚೆನ್ನೇನಹಳ್ಳಿಯಲ್ಲಿರುವಜನಸೇವಾ ವಿದ್ಯಾಕೇಂದ್ರದಲ್ಲೂ ಐಸೋಲೇಷನ್‌ಕೇಂದ್ರ ಆರಂಭಿಸಿದೆ.
Related Articles
Advertisement
ಇದೆಲ್ಲದರ ಜತೆಗೆ ಸೋಂಕಿತರಿಗೆಅಗತ್ಯವಾದ ಔಷಧೋಪಚಾರ, ಚಿಕಿತ್ಸೆ ಹಾಗೂಮಾರ್ಗದರ್ಶನಕ್ಕೆ ನುರಿತ ವೈದ್ಯರು ನೀಡಲಿದ್ದಾರೆಮತ್ತು ನರ್ಸ್‌ಗಳಿಂದ ಉತ್ತಮ ಆರೈಕೆ ಲಭ್ಯವಾಗಲಿದೆ.ಆರೋಗ್ಯಕ್ಕೆ ಅವಶ್ಯಕವಾದ ಕಷಾಯ, ಕುಡಿಯಲುಮತ್ತು ಸ್ನಾನಕ್ಕೆ ಬಿಸಿ ನೀರು, ಬೆಳಗ್ಗೆ ಉಪಾಹಾರ, ಕಾಫಿ,ಮಧ್ಯಾಹ್ನ ಊಟ, ಸಂಜೆ ಲಘು ಉಪಾಹಾರ, ರಾತ್ರಿಊಟ ಹಾಗೂ ಮಲಗುವ ಮೊದಲು ಅರಿಶಿಣಮಿಶ್ರಿತ ಹಾಲು ಸೋಂಕಿತರಿಗೆ ಸಿಗಲಿದೆ. ಬಿಸಿ ನೀರಿನಹಬೆ ತೆಗೆದುಕೊಳ್ಳಲು ಸೌಲಭ್ಯವೂ ಮಾಡಲಾಗಿದೆ.
ಅಗತ್ಯವಿದ್ದವರಿಗೆ ತುರ್ತು ಆಮ್ಲಜನಕದ ವ್ಯವಸ್ಥೆಮಾಡುವ ಜತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆಕರೆದೊಯ್ಯಲು ಆ್ಯಂಬುಲೆನ್ಸ್ ಸೇವೆ ಕೂಡ ಲಭ್ಯವಿದೆ.ಸೋಂಕಿತರಿಗೆ ಮಾತ್ರ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ಪರೀಕ್ಷೆ ಮಾಡಿದ ನಂತರ ಸೋಂಕು ದೃಢಪಟ್ಟಿರುವ ಬಾಲಕರು ಸಹಿತವಾಗಿ ಹಿರಿಯ ನಾಗರಿಕರು ಐಸೋಲೇಷನ್ ಕೇಂದ್ರಕ್ಕೆ ಬರಬಹುದು. ಇದು ಐಸೋಲೇಷನ್ ಕೇಂದ್ರ ಆಗಿರುವುದರಿಂದ ಕೋವಿಡ್‌ನಿಂದ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವವರನ್ನು ಸೇರಿಸಿಕೊಳ್ಳುವುದಿಲ್ಲ( ತುರ್ತು ಆಸ್ಪತ್ರೆ ಸೇವೆ ಅಗತ್ಯಇರುವವರು) ಹಾಗೆಯೇ ಐಸೋಲೇಷನ್‌ಗೆ ಕೋವಿಡ್ ಸೋಂಕಿತರಿಗೆ ಮಾತ್ರ ವ್ಯವಸ್ಥೆ ಇರಲಿದೆ.ಅವರೊಂದಿಗೆ ಬರುವವರಿಗೆ ವ್ಯವಸ್ಥೆ ಇರುವುದಿಲ್ಲ ಎಂದು ಸೇವಾಭಾರತಿ ಮೂಲಗಳು ತಿಳಿಸಿವೆ.
ರಾಜು ಖಾರ್ವಿ ಕೊಡೇರಿ