Advertisement
ಸುಮಾರು 12.2 ಕೋಟಿಗೂ ಹೆಚ್ಚು ಮಂದಿಯನ್ನು ಕೋವಿಡ್ ಬಡತನಕ್ಕೆ ದೂಡಬಹುದು. ಸಾಮೂಹಿಕ ನಿರುದ್ಯೋಗ, ನೆರವು ಸಿಗದೇ ಇರುವುದು, ಆಹಾರದ ಅಲಭ್ಯತೆ, ಆಹಾರ ಉತ್ಪಾದನೆಯಲ್ಲಿ ತೊಡಕುಗಳಿಂದ ಹೀಗಾಗಬಹುದು ಎಂದು ಹೇಳಿದೆ.
ಎಪ್ರಿಲ್‌ನಲ್ಲಿ ಕೋವಿಡ್‌ನಿಂದಾಗಿ ವಿಶ್ವಾದ್ಯಂತ ಮೃತರ ಪ್ರಮಾಣ ದಿನವೊಂದಕ್ಕೆ 10 ಸಾವಿರಷ್ಟು ಆಗಿತ್ತು ಎಂದು ಅದು ಹೇಳಿದೆ. ಉದಾಹರಣೆಗೆ ಅಫ್ಘಾನಿಸ್ಥಾನ ವೊಂದರಲ್ಲೇ ಆಹಾರದ ಕ್ಷಾಮ 2019ರಲ್ಲಿ 25 ಲಕ್ಷ ಮಂದಿಯನ್ನು ತಟ್ಟಿದ್ದು, 2020ರ ಮೇ ವೇಳೆಗೆ ಇದು 35 ಲಕ್ಷಕ್ಕೇರಿದೆ. ಲಾಕ್‌ಡೌನ್ ನಿಯಮಾವಳಿಗಳು ಇತ್ಯಾದಿಗಳಿಂದ ವಿವಿಧ ದೇಶಗಳ ಗಡಿಗಳು ಮುಚ್ಚಿದ್ದು ಅದರ ಪರಿಣಾಮ ದೇಶಗಳ ಮೇಲೆ ಆಗಿವೆ. ಅಫ್ಘಾನಿಸ್ಥಾನಕ್ಕೆ ಇರಾನ್ ಗಡಿ ಮುಚ್ಚಿದ್ದು ಪರಿಣಾಮ ಬೀರಿದೆ. ಇದರೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಬ್ರಜಿಲ್, ಭಾರತ, ದಕ್ಷಿಣ ಆಫ್ರಿಕಾದಲ್ಲೂ ಹಸಿವಿನ ಪ್ರಮಾಣ ಹೆಚ್ಚುವ ಅಪಾಯವಿದೆ. ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಇದೀಗ ವಿಶ್ವ ವಿನಿಯೋಗಿಸುತ್ತಿರುವ ನಿಧಿಯ 10 ಪಟ್ಟು ಹೆಚ್ಚು ನಿಧಿ ಅಗತ್ಯವಿದೆ ಎಂದು ಆಕ್ಸ್‌ಫಾಮ್ ಹೇಳಿದೆ.