Advertisement

ಮತ್ತಷ್ಟು ಬಾಂಡ್‌ ರಹಸ್ಯ ಬಯಲು; ಬಿಜೆಪಿಗೆ ಅಗ್ರಸ್ಥಾನ, ಅನಂತರದ ಸ್ಥಾನದಲ್ಲಿ ಟಿಎಂಸಿ

12:50 AM Mar 18, 2024 | Team Udayavani |

ಹೊಸದಿಲ್ಲಿ: ಸಾರ್ವಜನಿಕರಲ್ಲಿ ಭಾರೀ ಕುತೂಹಲ ಕೆರಳಿಸಿರುವ ಚುನಾವಣ ಬಾಂಡ್‌ಗಳ ಕುರಿತಾದ ಮತ್ತೂಂದು ಸುತ್ತಿನ ಮಾಹಿತಿ ಯನ್ನು ಕೇಂದ್ರ ಚುನಾವಣ ಆಯೋಗ ರವಿವಾರ ಬಹಿ ರಂಗಗೊಳಿಸಿದೆ.

Advertisement

ಈ ಮಾಹಿತಿ 2019ರ ಎ. 19ಕ್ಕಿಂತ ಹಿಂದಿನದ್ದು ಎನ್ನಲಾಗಿದೆ. ಕಳೆದ ಶುಕ್ರವಾರ ಬಹಿರಂಗವಾಗಿರುವುದು 2019ರ ಎ.19ರ ಬಳಿಕದ ಮಾಹಿತಿ ಆಗಿತ್ತು.

ಬಾಂಡ್‌ ಖರೀದಿ ದಾರರು ಮತ್ತು ನಗದು ಮಾಡಿದ ಪಕ್ಷಗಳ ಮಾಹಿತಿ ಯನ್ನು ಚು. ಆಯೋಗ ಮಾ. 14ರಂದು ಬಹಿರಂಗ ಪಡಿಸಿತ್ತು.

ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರ ಎಸ್‌ಬಿಐ ಈ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿತ್ತು. ರವಿವಾರ ಆಯೋಗ ಬಹಿರಂಗಪಡಿಸಿರುವ ಹೊಸ ದಾಖಲೆಗಳಲ್ಲಿ ಬಾಂಡ್‌ಗಳ ದಿನಾಂಕ, ಮುಖಬೆಲೆ, ಬಾಂಡ್‌ಗಳ ಒಟ್ಟು ಸಂಖ್ಯೆ, ವಿತರಣೆ ಮಾಡಿದ ಎಸ್‌ಬಿಐ ಶಾಖೆಗಳ ಹೆಸರು, ಬಾಂಡ್‌ ಸ್ವೀಕರಿಸಿದ ದಿನಾಂಕ, ಕ್ರೆಡಿಟ್‌ ಆದ ದಿನಾಂಕವನ್ನು ನಮೂದಿಸಲಾಗಿದೆ. ಆದರೆ ಬಾಂಡ್‌ಗಳ ವಿಶಿಷ್ಟ ಸಂಖ್ಯೆಯನ್ನು ಇಲ್ಲೂ ನಮೂದಿಸಲಾಗಿಲ್ಲ.
ಇದೇವೇಳೆ 2018ರ ಮಾ. 1ರಿಂದ 2019ರ ಎ. 11ರ ವರೆಗಿನ ಬಾಂಡ್‌ಗಳ ಮಾಹಿತಿ ಬಹಿರಂಗ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಿಟಿಜೆನ್ಸ್‌ ರೈಟ್ಸ್‌ ಟ್ರಸ್ಟ್‌ ಮತ್ತೂಂದು ಅರ್ಜಿ ದಾಖಲಿಸಿದೆ.

ಜೆಡಿಎಸ್‌ಗೆ 89.5
ಕೋಟಿ ರೂ. ದೇಣಿಗೆ
ಜೆಡಿಎಸ್‌ಗೆ 89.75 ಕೋಟಿ ರೂ. ದೇಣಿಗೆ ಚುನಾವಣ ಬಾಂಡ್‌ಗಳ ಮೂಲಕ ಬಂದಿದೆ. ಈ ಪೈಕಿ ಮೇಘಾ ಎಂಜಿನಿಯರಿಂಗ್‌ 50 ಕೋಟಿ ರೂ. ನೀಡಿದೆ. ಎಂಬೆಸಿ ಗ್ರೂಪ್‌, ಇನ್ಫೋಸಿಸ್‌, ಬಯೋಕಾನ್‌ ದೇಣಿಗೆ ನೀಡಿದ ಇತರ ಕಂಪೆನಿಗಳಾಗಿವೆ.

Advertisement

ದೇಣಿಗೆ ಬಗ್ಗೆ ಚುನಾವಣ ಆಯೋಗಕ್ಕೆ ಪಕ್ಷಗಳ ವಿವರ
ಚುನಾವಣ ಆಯೋಗಕ್ಕೆ ದೇಣಿಗೆ ದಾರರ ಮಾಹಿತಿ ನೀಡಿದ ರಾಜಕೀಯ ಪಕ್ಷಗಳ ಪೈಕಿ ಡಿಎಂಕೆ ಕೂಡ ಒಂದಾಗಿದೆ. ಆದರೆ ಬಿಜೆಪಿ, ಕಾಂಗ್ರೆಸ್‌, ಟಿಎಂಸಿ, ಆಪ್‌ ದೇಣಿಗೆದಾರರ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next