Advertisement
ಮೊರಾರ್ಜಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು 6ನೇ ತರಗತಿಗೆ ವಸತಿಯುತ ಶಾಲೆಗೆ ಸೇರಲು ಪರೀಕ್ಷೆಯನ್ನು 9 ಕೇಂದ್ರಗಳಲ್ಲಿ ನಡೆಸಲಾಯಿತು, ಪರೀಕ್ಷೆಗೆ 2,134 ವಿದ್ಯಾರ್ಥಿಗಳುಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 81 ವಿದ್ಯಾರ್ಥಿಗಳು ಗೈರಾಗಿದ್ದರು.
Related Articles
Advertisement
ಸಿರುಗುಪ್ಪ: 1,885 ವಿದ್ಯಾರ್ಥಿಗಳು ಹಾಜರುಸಿರುಗುಪ್ಪ: ನಗರದ ಎಸ್‌ಇಎಸ್ ಬಾಲಕಿಯರ ಪ್ರೌಢಶಾಲೆ, ಎಸ್‌ಇಎಸ್ ಪದವಿ ಕಾಲೇಜು, ವಿಜಯಮೇರಿ, ಶಾಂತಿನಿಕೇತನ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6ನೇ ತರಗತಿಯ ಪ್ರವೇಶ ಪರೀಕ್ಷೆಗಳು ನಡೆದವು. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಇಒ ಪಿ.ಡಿ. ಭಜಂತ್ರಿ, 4 ಪರೀಕ್ಷಾ
ಕೇಂದ್ರಗಳಲ್ಲಿ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 1,885 ಮಕ್ಕಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆ ಬರೆಯುತ್ತಿದ್ದಾರೆ. 8 ಜನ ಮುಖ್ಯ ಅಧಿಧೀಕ್ಷಕರು, ಸಹಾಯಕರು, ಮೇಲ್ವಿಚಾರಕರು ಸೇರಿದಂತೆ 79 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಹರಪನಹಳ್ಳಿ: 2846 ಮಕ್ಕಳ ನೋಂದಣಿ- 63 ವಿದ್ಯಾರ್ಥಿಗಳು ಗೈರು
ಹರಪನಹಳ್ಳಿ: ಪ್ರಸಕ್ತ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಆಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ
ಪ್ರವೇಶ ಪರೀಕ್ಷೆ ಭಾನುವಾರ ಪಟ್ಟಣದ ವಿವಿಧ ಕೇಂದ್ರಗಳಲ್ಲಿ ನಡೆಯಿತು. ಪರೀಕ್ಷೆಗೆ ಒಟ್ಟು 2846 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 2,783 ವಿದ್ಯಾರ್ಥಿಗಳು ಹಾಜರಾಗಿ, 63 ವಿದ್ಯಾರ್ಥಿಗಳು ಗೈರಾಗಿದ್ದರು. ಪಟ್ಟಣದ ಎಡಿಬಿ ಕಾಲೇಜು, ಎಸ್‌ಎಸ್‌ಎಚ್ ಜೈನ್ ಕಾಲೇಜ್, ವಿವಿಎಸ್ ಪ್ರೌಢಶಾಲೆ, ಎಚ್
ಪಿಎಸ್ ಕಾಲೇಜು, ತರಳಬಾಳು ಪ್ರೌಢಶಾಲೆ, ಎಸ್‌ಯುಜೆಎಂ ಕಾಲೇಜು, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ
ಪೂರ್ವ ಕಾಲೇಜ್, ಕೆಸಿಎ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸೇರಿ ಒಟ್ಟು 10 ಕೇಂದ್ರಗಳಲ್ಲಿ ಪರೀಕ್ಷೆ ಜರುಗಿದವು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 67ವಿದ್ಯಾರ್ಥಿಗಳು ಗೈರು
ಸಿರುಗುಪ್ಪ: ನಗರದ ಎಸ್.ಇ.ಎಸ್. ಬಾಲಕಿಯರ ಪ್ರೌಢಶಾಲೆ, ಎಸ್.ಇ.ಎಸ್. ಪದವಿ ಕಾಲೇಜು, ವಿಜಯಮೇರಿ, ಶಾಂತಿನಿಕೇತನ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆಗಳು ಜರುಗಿದವು. ಒಟ್ಟು 1885 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 67 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು 1818ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಬಿಇಒ ಪಿ.ಡಿ. ಭಜಂತ್ರಿ ತಿಳಿಸಿದ್ದಾರೆ. 42 ವಿದ್ಯಾರ್ಥಿಗಳು ಗೈರು
ಕೂಡ್ಲಿಗಿ: ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ, ಡಾ| ಅಂಬೇಡ್ಕರ್, ವಸತಿ ಶಾಲೆಗಳ 2019ನೇ ಸಾಲಿನ ಪ್ರವೇಶಕ್ಕಾಗಿ ಪಟ್ಟಣದ ಒಟ್ಟು 8 ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆಯಿತು. ಪಟ್ಟಣದ ವಾಸವಿ ಸ್ಕೂಲ್, ಜ್ಯೂನಿಯರ್ ಕಾಲೇಜ್, ತರಳಬಾಳು ಶಾಲೆ, ಜ್ಞಾನಭಾರತಿ ಶಾಲೆ, ಚರ್ಚ್ ಶಾಲೆ, ಹಿರೇಮಠ ಪ್ರೌಢಶಾಲೆ, ಡಿಗ್ರಿ ಕಾಲೇಜುಗಳಲ್ಲಿ ಪರೀಕ್ಷೆ ನಡೆದಿದ್ದು, ಒಟ್ಟು 2595 ಹಾಜರಾಗಿದ್ದರೆ, 42 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಕೂಡ್ಲಿಗಿ ಬಿಇಒ ಉಮಾದೇವಿ ತಿಳಿಸಿದ್ದಾರೆ.