Advertisement

ಅವಿಭಕ್ತ ಕುಟುಂಬಗಳಿಂದ ನೈತಿಕತೆ ಹೆಚ್ಚು

04:43 PM Sep 07, 2022 | Team Udayavani |

ಕಲಬುರಗಿ: ಭಾರತ ಅವಿಭಕ್ತ ಕುಟುಂಬಕ್ಕೆ ಖ್ಯಾತಿ ಪಡೆದ ದೇಶವಾಗಿದೆ. ಅವಿಭಕ್ತ ಕುಟುಂಬಗಳಿಂದ ವ್ಯಕ್ತಿಯಲ್ಲಿ ನೈತಿಕತೆ ಹೆಚ್ಚಿರುತ್ತದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ಭೀಮರಾವ್‌ ಟಿ.ಟಿ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂ.ಚಂದ್ರಶೇಖರ ಪಾಟೀಲ ತೇಗಲತಿಪ್ಪಿ ಸ್ಮರಣಾಥ “ಆದರ್ಶ ಮಕ್ಕಳು’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಸಿ.ಎಸ್‌. ನಾರಾಯಣ ಮಾತನಾಡಿ, ತಂದೆ -ತಾಯಿಗಳನ್ನು ನೋಡಿಕೊಳ್ಳುವುದು ಪವಿತ್ರ ಕರ್ತವ್ಯ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಹಿರಿಯ ಲೇಖಕಿ ಶಾಂತಾ ಪಸ್ತಾಪೂರ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಕಾರ್ಯಾಧ್ಯಕ್ಷ ಪ್ರಭವ ಪಟ್ಟಣಕರ್‌, ರವಿಕುಮಾರ ಶಹಾಪುರಕರ್‌ ಮಾತನಾಡಿದರು.

ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ ಪ್ರಮುಖರಾದ ಸುಜಾತಾ, ಬಾಬುರಾವ ಪಾಟೀಲ, ಚೇತನಕುಮಾರ ಗಾಂಗಜೀ, ಶಶಿಕಲಾ ದೇವಿಪ್ರಸಾದ ಪೂಜಾರಿ, ಶಕುಂತಲಾ ನರಿಬೋಳ, ಶ್ರೀದೇವಿ ಹಣಮಂತರಾಯ ಅಟ್ಟೂರ, ಸೋಮಶೇಖರ ಡಿಗ್ಗಿ ಅವರನ್ನು “ಆದರ್ಶ ಮಕ್ಕಳು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಪ್ರಮುಖರಾದ ಶಾಮಸುಮದರ ಕುಲಕರ್ಣಿ, ಡಾ|ಶರಣಪ್ಪ ಮಾಳಗೆ, ರಾಜೇಂದ್ರ ಮಾಡಬೂಳ, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ ಜಾವಳಿ, ಶಿವರಾಜ ಅಂಡಗಿ, ವಿಶ್ವನಾಥ ತೊಟ್ನಳ್ಳಿ, ಮಂದಾಕಿನಿ ಪೂಜಾರಿ, ರವೀಂದ್ರಕುಮಾರ ಭಂಟನಳ್ಳಿ, ಸೋಮಶೇಖರ ಹಿರೇಮಠ, ಡಾ|ಮಲ್ಲಿಕಾರ್ಜುನ ವಡ್ಡನಕೇರಿ, ಶಿಲ್ಪಾ ಜೋಶಿ, ಸುನೀಲ ಹಡಪದ, ಎಂ.ಎಸ್‌.ಪಾಟೀಲ ನರಿಬೊಳ, ಶರಣರಾಜ್‌ ಛಪ್ಪರಬಂದಿ, ಜಗದೀಶ ಮರಪಳ್ಳಿ, ಪ್ರಭುಲಿಂಗ ಮೂಲಗೆ, ಎಚ್‌.ಎಸ್‌. ಬರಗಾಲಿ, ಎಸ್‌.ಎಂ.ಪಟ್ಟಣಕರ್‌, ಮಲ್ಲಿನಾಥ ಸಂಗಶೆಟ್ಟಿ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next