Advertisement
ಒಂದು ದಿನ ಆತ ಮಗನನ್ನು ಕರೆದು ಮನೆಯಲ್ಲಿರುವ ಗೋಡೆ ಗಡಿಯಾರನ್ನು ಆತನ ಕೈಗೆ ಇಡುತ್ತಾ ಇದನ್ನು ಹೊರಗಡೆ ಜನನಿಬಿಡ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಇದರ ಬೆಲೆ ಎಷ್ಟು ಎಂದು ಕೇಳಿ ಬರಬೇಕೆಂದು ತಾಕೀತು ಮಾಡುತ್ತಾನೆ. ಒಲ್ಲದ ಮನಸ್ಸಿನಿಂದ ಆತ ಹೇಗೋ ಮಾರುಕಟ್ಟೆಗೆ ಅದನ್ನು ತೆಗೆದುಕೊಂಡು ತೆರಳುತ್ತಾನೆ. ಅಲ್ಲಿ ಎಲ್ಲರೂ ಒಂದೊಂದು ದರವನ್ನು ಫಿಕ್ಸ್ ಮಾಡಿ ಹೇಳುತ್ತಾರೆ. ಯಾರೊಬ್ಬರೂ ಕೂಡಾ ಅದರ ಮೂಲ ಬೆಲೆಯೆನ್ನು ಹೇಳಲು ಅಸಫಲರಾಗುತ್ತಾರೆ. ಮನೆಗೆ ಹಿಂದುರಿಗಿ ಆತ ತನ್ನ ತಂದೆಯಲ್ಲಿ ವಿಷಯ ಪ್ರಸ್ತಾವ ಮಾಡುತ್ತಾನೆ.
Related Articles
Advertisement
ಯಾಕೆ ಜನ ಹೀಗೆ ನಡೆದುಕೊಳ್ಳುತ್ತಿದ್ದಾರೆ ?ಯಾಕೆ ನನಗೆ ಹೀಗೆ ಆಗುತ್ತಿದೆ? ಎಂದು ಎದುರಿಗೆ ಕಣ್ಣಿಗೆ ಕಾಣುವ ವೃದ್ಧರೊಬ್ಬರ ಅಂಗಡಿಗೆಯತ್ತ ಸಾಗುತ್ತಾನೆ. ಆತ ಯುವಕನ ಮನಸ್ಥಿತಿ ಕಂಡು ಅರ್ಥೈಸಿಕೊಳ್ಳುತ್ತಾನೆ. ಹಾಗೆ ಕೊಂಚ ಕ್ಷಣ ಆಲೋಚಿಸಿ, ನೋಡು ಹುಡುಗ ಸಮಯದ ಬೆಲೆ ಕೇಳುತ್ತಿದ್ದೆಯಲ್ಲ ಇದಕ್ಕೆ ಯಾವುದೇ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ ನೀನು ಕೋಟಿ ರೂಪಾಯಿಕೊಟ್ಟರೂ, ಒಂದು ಸೆಕೆಂಡ್ ಕೂಡಾ ವಾಪಸ್ಸು ತರಲು ಸಾಧ್ಯವಿಲ್ಲ. ಅದಕ್ಕಾಗಿ ಸಮಯದ ಉಪಯೋಗವನ್ನು ಸರಿಯಾಗಿ ಮಾಡು. ಸಮಯವೆಂಬುದು ಒಂದು ಒಳ್ಳೆಯ ಮತ್ತು ಕೆಟ್ಟ ವಿಚಾರವನ್ನು ಒಳಗೊಂಡಿದೆ.
ಕೆಟ್ಟ ವಿಷಯ ಏನೆಂದರೆ ಅದನ್ನು ನಾವು ಕಳೆದುಕೊಂಡು ಬಿಡುವುದು ಹಾಗೆ ಒಳ್ಳೆ ವಿಷಯ ಯಾವುದೆಂದರೆ ಆ ಸಮಯದಲ್ಲಿ ನಾವು ಒಳ್ಳೆ ಕಾರ್ಯದಲ್ಲಿ ವ್ಯಯಿಸುತ್ತೇವೆಲ್ಲ ಅದು. ಎಲ್ಲರ ಹತ್ತಿರವೂ ಕೂಡ ದಿನಕ್ಕೆ 24ಗಂಟೆ ಸಮಯವಿರುತ್ತದೆ. ಶ್ರೀಮಂತರ ಬಳಿಯೂ ಹೌದು ಬಡವನ ಬಳಿಯಲ್ಲೂ ಇರುತ್ತದೆ. ನಮ್ಮಲ್ಲಿ ಹೊಂದಿರುವ ಈ ಅನರ್ಘ್ಯ ರತ್ನವನ್ನು ನಾವು ಹೇಗೆ ಉಪಯೋಗಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಆ ವಯೋವೃದ್ಧರ ಮಾತು ಕೇಳಿ ಆ ಯುವಕನ ಮನಸ್ಸು ಅರಳುತ್ತದೆ. ಯಾವುದೋ ಬದಲಾವಣೆ ಗಾಳಿ ಆತನ ಮನಸ್ಸಿನೊಳಗೆ ಇಳಿಯುತ್ತದೆ. ಆತ ತಡ ಮಾಡದೇ ತನ್ನ ಮನೆಗೆ ತೆರಳಿ ತಂದೆಯಲ್ಲಿ ಎಲ್ಲ ವಿಚಾರವನ್ನು ಮನದಟ್ಟು ಮಾಡುತ್ತಾನೆ. ಆ ದಿನದಿಂದ ಆ ಯುವಕನ ಜೀವನ ಬದಲಾಗುತ್ತದೆ. ಒಂದೊಳ್ಳೆ ವ್ಯಕ್ತಿಯಾಗಿ ಜೀವನ ಸಾಗಿಸುತ್ತಾನೆ.
ಈ ಕಥೆಯ ತಾತ್ಪರ್ಯ ಇಷ್ಟೇ. ಸಮಯ ಎಲ್ಲರಿಗೂ ಉಚಿತವಾಗಿರುತ್ತದೆ. ಅದು ಬೆಲೆ ರಹಿತವಾದದ್ದು. ಅದನ್ನು ಖರೀದಿಸಲಾಗದು. ಆದರೆ ಅದನ್ನು ನಾವು ಸೂಕ್ತವಾಗಿ ಬಳಕೆ ಮಾಡಬಹುದು. ನಾವು ಅದನ್ನು ಇಟ್ಟುಕೊಳ್ಳಲೂ ಸಾಧ್ಯವಿಲ್ಲ, ವ್ಯಯಿಸಬಹುದು. ಒಮ್ಮೆ ನಷ್ಟ ಪಡಿಸಿದರೇ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ನಾವುಗಳು ಸಮಯದ ಉಪಯೋಗ ಬಹಳ ಮುಖ್ಯ.
*ಶಿವಕುಮಾರ್ ಹೊಸಂಗಡಿ ,ದುಬೈ