Advertisement

NASA: ಚಂದ್ರನ ಫೋಟೋ ಕ್ಲಿಕ್ಕಿಸಿದ ನಾಸಾ

12:11 AM Sep 22, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಎರಡು ವಿಭಿನ್ನ ಕ್ಯಾಮೆರಾಗಳು, ಚಂದ್ರನ ದಕ್ಷಿಣ ಧ್ರುವದ ಚಿತ್ರವನ್ನು ಸೆರೆಹಿಡಿದಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿರುವ ಮೊಸಾಯಿಕ್‌ನ ಚಿತ್ರ ಸೆರೆಯಾಗಿದೆ. ಈ ಪ್ರದೇಶವನ್ನು ಮಾನವ ಇದುವರೆಗೂ ಅನ್ವೇಷಿಸಿಲ್ಲ. ಅಲ್ಲದೇ ಈ ಪ್ರದೇಶದ ಕುರಿತು ವಿಜ್ಞಾನಿಗಳು ಹೆಚ್ಚಿನ ಕುತೂಹಲವನ್ನು ಹೊಂದಿದ್ದು, ಇಲ್ಲಿ ಮಂಜುಗಡ್ಡೆಯ ನಿಕ್ಷೇಪಗಳು ಇರುವ ಸಾಧ್ಯತೆಗಳನ್ನು ಅಂದಾಜಿಸಿದ್ದಾರೆ.

Advertisement

ಚಂದ್ರನ ಫೋಟೋ ಬಿಡುಗಡೆಗೊಳಿಸಿರುವ ನಾಸಾ, “ಮೂನ್‌ಲೈಟ್‌ ಸೊನಾಟಾ. ನೂತನ ಚಿತ್ರವು, ಚಂದ್ರನ ಸುತ್ತ ಸುತ್ತುತ್ತಿರುವ ಎರಡು ಕ್ಯಾಮೆರಾಗಳ ಶಕ್ತಿಯನ್ನು ಅನಾವರಣಗೊಳಿಸುತ್ತದೆ. ಇವು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ. ನಾಸಾದ ಲೂನಾರ್‌ ರೆಕಾಗ್ನೆ„ಸನ್ಸ್‌ ಆರ್ಬಿಟರ್‌ ಕ್ಯಾಮೆರಾ(ಎಲ್‌ಆರ್‌ಒಸಿ) ಮತ್ತು ಶಾಡೊಕ್ಯಾಮ್‌ ಚಂದ್ರನ ಈ ಚಿತ್ರಗಳನ್ನು ಸೆರೆಹಿಡಿದಿವೆ’ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next