Advertisement

Moon: ಚಂದ್ರ ಈಗ “ಮಾಮ”ನಲ್ಲ, 446 ಕೋಟಿ ವಯಸ್ಸಿನ ಹಿರಿಯಜ್ಜ!

11:19 PM Oct 24, 2023 | Team Udayavani |

ಹೊಸದಿಲ್ಲಿ: 465 ಕೋಟಿ ವರ್ಷಗಳ ಹಿಂದೆ ಭೂಮಿ ಹುಟ್ಟಿತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ ಚಂದ್ರ ಹುಟ್ಟಿದ್ದು ಯಾವಾಗ? ಆತನ ನಿಖರ ವರ್ಷವೆಷ್ಟು? ಎಂಬ ಪ್ರಶ್ನೆಗಳಿಗೆ ಇದುವರೆಗೆ ಸ್ಪಷ್ಟ ಉತ್ತರ ಲಭಿಸಿಲ್ಲ. ಹೊಸ ವಿಶ್ಲೇಷಣೆಗಳ ಪ್ರಕಾರ ಚಂದ್ರನಿಗೆ ನಾವಂದುಕೊಂಡಿದ್ದಕ್ಕಿಂತ ಹೆಚ್ಚು ವಯಸ್ಸಾಗಿದೆ!

Advertisement

ಅಂದರೆ ಚಂದ್ರಗೆ 446 ಕೋಟಿ ವರ್ಷಗಳಾಗಿವೆ ಈ ಹಿಂದಿನ ಅಂದಾಜು­ಗಳಿಗಿಂತ 4.6 ಕೋಟಿ ವರ್ಷಗಳು ಹೆಚ್ಚಾಗಿವೆ ಎಂದು “ಜಿಯೋಕೆಮಿಕಲ್‌ ಪಸ್ಪೆಕ್ಟಿವ್ಸ್‌ ಲೆಟರ್ಸ್‌” ಎಂಬ ನಿಯತಕಾಲಿಕೆಯಲ್ಲಿ ಪ್ರಕಟ­ವಾದ ಸಂಶೋಧನ ಲೇಖನದಲ್ಲಿ ತಿಳಿಸ­ಲಾಗಿದೆ. 1992ರಲ್ಲಿ ಚಂದ್ರನ ಮೇಲಿಳಿದ ಅಪೊಲೊ ಯಾನಿಗಳು, ಒಂದಷ್ಟು ಹರಳು­ಗಳನ್ನು ಭೂಮಿಗೆ ತಂದಿದ್ದರು. ಅದನ್ನು ಬಳ­ಸಿಯೇ ಚಂದ್ರನ ಆಯಸ್ಸನ್ನು ಪತ್ತೆಹಚ್ಚಲಾಗುತ್ತಿದೆ.

400 ಕೋಟಿಗೂ ಹೆಚ್ಚು ವರ್ಷಗಳ ಹಿಂದೆ ಸೌರವ್ಯೂಹ ತನ್ನ ಹದಿಹರೆಯದಲ್ಲಿತ್ತು. ಆಗ ಭೂಮಿಯಿನ್ನೂ ಬೆಳೆಯುತಲಿತ್ತು. ಅದೇ ಹೊತ್ತಿನಲ್ಲಿ ಭೂಮಿಗೆ ಮಂಗಳನ ಗಾತ್ರದ ಬೃಹತ್‌ ಕಾಯವೊಂದು ಅಪ್ಪಳಿಸಿತ್ತು. ಆಗ ಭೂಮಿಯಿಂದ ಹೊರಹಾರಿದ ದೊಡ್ಡ ತುಂಡೊಂದು ಚಂದ್ರನಾಗಿ ರೂಪುಗೊಂಡಿತು. ಅದೇ ಹೊತ್ತಿನಲ್ಲಿ ಗಟ್ಟಿ ಹರಳುಗಳು ರೂಪು ಗೊಂಡಿದ್ದವು. ಅವನ್ನೇ ಚಂದ್ರಯಾನಿಗಳು ಭೂಮಿಗೆ ತಂದಿದ್ದರು. ಈ ಹರಳುಗಳ ಆಧಾರ ದಲ್ಲೇ ಚಂದ್ರನ ಆಯಸ್ಸನ್ನು ಪತ್ತೆಹಚ್ಚಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ ಎಂದು ಶಿಕಾಗೊ ವಿವಿ ಪ್ರೊ| ಫಿಲಿಪ್‌ ಹೆಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next