Advertisement

ಚಂದ್ರ ಗ್ರಹಣ 2022: ಗ್ರಹಣ ಸಮಯ ಮತ್ತು ಎಲ್ಲೆಲ್ಲಿ ಗೋಚರಿಸುತ್ತೆ?

10:30 AM Nov 02, 2022 | Team Udayavani |

ನವದೆಹಲಿ: ನವೆಂಬರ್ 8 ರಂದು ಚಂದ್ರನು ಭೂಮಿಯ ನೆರಳಿನ ಮೂಲಕ ಹಾದುಹೋಗುವ ರೀತಿಯಲ್ಲಿ ಒಟ್ಟುಗೂಡಿದಾಗ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಮೂರು ವರ್ಷಗಳಿಗೊಮ್ಮೆ ನಡೆಯುವ  ಸಂಪೂರ್ಣ ಚಂದ್ರಗ್ರಹಣವಾಗಿದೆ! ಮಾರ್ಚ್ 2025 ರಲ್ಲಿ, ಮುಂದಿನ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ.

Advertisement

ಚಂದ್ರ ಗ್ರಹಣ 2022: ಗ್ರಹಣ ಸಮಯ

ಭಾರತದಲ್ಲಿ, ಸಂಪೂರ್ಣ ಗ್ರಹಣವು ಪೂರ್ವ ಭಾಗಗಳಲ್ಲಿ ಮಾತ್ರ ಗೋಚರಿಸುತ್ತದೆ ಆದರೆ ಭಾಗಶಃ ಗ್ರಹಣವು ಭಾರತದ ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಗೋಚರಿಸುತ್ತದೆ. ಕೋಲ್ಕತ್ತಾ, ಪಾಟ್ನಾ, ರಾಂಚಿ, ಗುವಾಹಟಿ ಭಾರತದ ಇನ್ನೂ ಕೆಲವು ನಗರಗಳಲ್ಲಿ ಪೂರ್ಣ ಚಂದ್ರಗ್ರಹಣ ಗೋಚರಿಸುತ್ತದೆ ಎಂದು ದೃಕ್ ಪಂಚಾಂಗ್  ತಿಳಿಸಿದೆ.

ಚಂದ್ರಗ್ರಹಣದ ನಗರವಾರು ಸಮಯಗಳು ಇಲ್ಲಿವೆ:

ದೆಹಲಿ (ಭಾಗಶಃ ಚಂದ್ರಗ್ರಹಣ) ಆರಂಭ: 05:32 ಸಂಜೆ. ಕೊನೆ – 06:18 ಸಂಜೆ.

Advertisement

ಕೋಲ್ಕತ್ತಾ (ಸಂಪೂರ್ಣ ಚಂದ್ರಗ್ರಹಣ): ಪ್ರಾರಂಭ: (ಚಂದ್ರೋದಯದೊಂದಿಗೆ) – 04:56 ಸಂಜೆ -ಮೋಕ್ಷ ಕಾಲ ಸಂಜೆ 6:18

ಮುಂಬೈ (ಭಾಗಶಃ ಚಂದ್ರಗ್ರಹಣ): ಪ್ರಾರಂಭ – 06:05 ಸಂಜೆ. ಮೋಕ್ಷ ಕಾಲ ಸಂಜೆ 6:18

ಬೆಂಗಳೂರು (ಭಾಗಶಃ ಚಂದ್ರಗ್ರಹಣ): ಪ್ರಾರಂಭ – 05:53 ಸಂಜೆ. ಕೊನೆ – 06:18 ಸಂಜೆ.

ಚೆನ್ನೈ (ಭಾಗಶಃ ಚಂದ್ರಗ್ರಹಣ): ಪ್ರಾರಂಭ – 05:42 ಸಂಜೆ. ಕೊನೆ – 06:18 ಸಂಜೆ.

ಗುವಾಹಟಿ (ಸಂಪೂರ್ಣ ಚಂದ್ರಗ್ರಹಣ): ಪ್ರಾರಂಭ – 04:37 ಸಂಜೆ. ಕೊನೆ – 06:18 ಸಂಜೆ.

ಮಂಗಳೂರು: ಪ್ರಾರಂಭ: 6.00 ಸಂಜೆ, ಕೊನೆ: 7.26 ಸಂಜೆ.

ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಗ್ರಹಣವು ಭೌಗೋಳಿಕ ವಿದ್ಯಮಾನವಾಗಿದ್ದರೂ, ಜ್ಯೋತಿಷ್ಯದಲ್ಲಿ ಧರ್ಮಗ್ರಂಥಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next