Advertisement

ಮೂಕನಾಯಕ ಸೆನ್ಸಾರ್‌ ಆಗಿದೆ; ಬಿಡುಗಡೆಯಾಗಬೇಕಿದೆ

11:06 AM Jan 02, 2018 | |

ಬರಗೂರು ರಾಮಚಂದ್ರಪ್ಪನವರು ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಮುಗಿಸಿರುವುದಷ್ಟೇ ಅಲ್ಲ, ಆ ಚಿತ್ರದ ಸೆನ್ಸಾರ್‌ ಸಹ ಆಗಿದ್ದು, “ಯು’ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರ ಯಾವುದು ಗೊತ್ತಾ? “ಮೂಕನಾಯಕ’. ಕುಮಾರ್‌ ಗೋವಿಂದ್‌, ಈ ಚಿತ್ರದಲ್ಲಿ “ಮೂಕನಾಯಕ’ನಾಗಿ ಕಾಣಿಸಿಕೊಂಡಿರುವುದು ವಿಶೇಷ.

Advertisement

“ಮೂಕನಾಯಕ’ ಎಂಬ ಹೆಸರೇ ಹೇಳುವಂತೆ, ಈ ಚಿತ್ರದ ನಾಯಕ ಸೂರ್ಯ ಒಬ್ಬ ಮೂಖನಾಗಿದ್ದು, ಗ್ರಾಮೀಣ ಭಾಗದ ಚಿತ್ರಕಲಾವಿದರನಾಗಿರುತ್ತಾನೆ. ಅಕ್ಕನ ಆಶ್ರಯದಲ್ಲಿ ಬದುಕುವ ಅವನಿಗೆ ತಾನು ರಚಿಸುವ ಚಿತ್ರಗಳೇ ಮಾತು ಇದ್ದಂತೆ. ತನ್ನ ಎಲ್ಲ ಭಾವನೆಗಳನ್ನೂ ಚಿತ್ರಗಳ ಮೂಲಕ ಅಭಿವ್ಯಕ್ತಿಗೊಳಿಸುವ ಆತ, ದಲಿತರ ಬವಣೆ, ರೈತರನ ಕಷ್ಟಗಳನ್ನು ತನ್ನ ಚಿತ್ರದ ಮೂಲಕ ಬಿಂಬಿಸುತ್ತಾ ಹೋಗುತ್ತಾನೆ.

ತನ್ನ ಚಿತ್ರಗಳಿಗೆ ಮಾರುಕಟ್ಟೆ ಇಲ್ಲದಿದ್ದರೂ, ಆತ ತನ್ನ ಬದ್ಧತೆಯನ್ನು ಬಿಡುವುದಿಲ್ಲ. ಹೀಗಿರುವಾಗಲೇ ಒಂದು ಅನಿರೀಕ್ಷಿತ ತಿರುವು ಪಡೆದುಕೊಳ್ಳುವ ಚಿತ್ರವು, ಒಂದು ಹಂತದಲ್ಲಿ ಹೋರಾಟದ ಮಜಲು ಮುಟ್ಟುತ್ತದೆ. ಆ ನಂತರ ಮಾತು ಮತ್ತು ಮೌನದ ಸಂಬಂಧಗಳನ್ನು ಮುನ್ನಡೆಗೆ ಹೇಗೆ ತರುತ್ತದೆ ಎಂಬುದನ್ನು ಚಿತ್ರ ಬಿಡಿಸಿಡುತ್ತಾ ಹೋಗುತ್ತದೆ.

“ಮೂಕನಾಯಕ’ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪನವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ಗೀತೆಗಳನ್ನೂ ರಚಿಸಿದ್ದಾರೆ. ಈ ಚಿತ್ರವನ್ನು ಬಾಲರಾಜ್‌ ಎನ್ನುವವರು ನಿರ್ಮಿಸಿದ್ದು, ಚಿತ್ರದಲ್ಲಿ ಕುಮಾರ್‌ ಗೋವಿಂದ್‌, “ಸ್ಪರ್ಶ’ ರೇಖಾ, ಶೀತಲ್‌ ಶೆಟ್ಟಿ, ಸುಂದರ್‌ ರಾಜ್‌, ವೆಂಕಟರಾಜು ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಡಾ. ಶಮಿತಾ ಮಲ್ನಾಡ್‌ ಸಂಗೀತ ಸಂಯೋಜಿಸಿದ್ದು, ನಾಗರಾಜ್‌ ಅದವಾನಿ ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್‌ ಅರಸ್‌ ಅವರ ಸಂಕಲನ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next