Advertisement
ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ (ಕಂದಾಯ ಇಲಾಖೆ) ಐವನ್ ಡಿ”ಸೋಜಾ ಅವರು “ಮಾ. 1ರಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು 10 ಕೋಟಿ ರೂ. ಯೋಜನಾ ವೆಚ್ಚದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವುದರೊಂದಿಗೆ ಮೂಡುಬಿದಿರೆ ತಾಲೂಕನ್ನು ಉದ್ಘಾಟಿಸಲು ಆಗಮಿಸಲಿದ್ದಾರೆ’ ಎಂದು ಪ್ರಕಟಿಸಿದ್ದರು. ಆದರೆ ಬುಧವಾರ ರಾತ್ರಿಯವರೆಗೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕಡಬ ನೂತನ ತಾಲೂಕು ಉದ್ಘಾಟನೆ ಮತ್ತೆ ಮುಂದಕ್ಕೆ ಹೋಗಿದೆ. ನಿಗದಿಯಾದಂತೆ ಮಾ. 1ರ ಬದಲು 2ರಂದು ಉದ್ಘಾಟನ ಸಮಾರಂಭ ನಡೆಯಲಿದೆ ಎಂದು ಪುತ್ತೂರು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಚಾಯತ್ ಕಚೇರಿಗಳಿಗೆ ರವಾನಿಸಿದ ಪತ್ರದಲ್ಲಿ ತಿಳಿಸಿದ್ದಾರೆ. ಕಂದಾಯ ಸಚಿವರು ತುರ್ತಾಗಿ ದಿಲ್ಲಿಗೆ ಹೋಗಬೇಕಿರುವ ಕಾರಣ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಕುರಿತು ಕಂದಾಯ ಅಧಿಕಾರಿಗಳಿಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.