Advertisement

Moodbidri: ಸಂವಿಧಾನ ತಣ್ತೀಗಳ ಜಾರಿಯಿಂದ ಸಮ ಸಮಾಜ ನಿರ್ಮಾಣ

11:44 PM Nov 10, 2024 | Team Udayavani |

ಮೂಡುಬಿದಿರೆ: ರಾಜ ಕಾರಣವನ್ನು ಬದಿಗಿರಿಸಿ ಸಂವಿಧಾನದ ತಣ್ತೀಗಳನ್ನು ಜಾರಿ ಮಾಡುವ ಮೂಲಕ ಸಮ ಸಮಾಜದ ನಿರ್ಮಾಣ ಸಾಧ್ಯ. ಸಂವಿಧಾನದ ನಿರ್ದೇಶನ ಹಾಗೂ ತತ್ವಗಳ ಅಡಿಯಲ್ಲಿ ಸುಸೂತ್ರವಾಗಿ ಕಾರ್ಯಗಳು ನಡೆದರೆ, ಎರಡನೇ ದರ್ಜೆಯ ಪ್ರಜೆಗಳೆನಿಸಿರುವ ಆದಿವಾಸಿ ಗಳು ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ| ಎಚ್‌.ಸಿ. ಮಹಾದೇವಪ್ಪ ಹೇಳಿದರು.

Advertisement

ಮೂಡುಬಿದಿರೆಯಲ್ಲಿ ರವಿವಾರ ನಡೆದ “ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ-2024 ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಂವಿಧಾನದಲ್ಲಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಹೋರಾಟವು ವ್ಯಕ್ತಿತ್ವ, ನೈತಿಕತೆ ಹಾಗೂ ಚರಿತ್ರೆಯನ್ನು ನಿರ್ಮಾಣ ಮಾಡಬಲ್ಲದು ಎಂಬ ಅಂಬೇಡ್ಕರ್‌ ನಂಬಿಕೆ ನಿಜವಾಗಿದೆ ಎಂದವರು ಹೇಳಿದರು.

ನಮ್ಮ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳು ಸಂವಿಧಾನದ ಸಿದ್ದಾಂತಗಳ ಅಡಿಯಲ್ಲಿ ನಿರ್ಮಾಣ ಗೊಂಡಿವೆ. ಅವು ಯಾವುದೇ ಧರ್ಮ ಜಾತಿಗೆ ಸೀಮಿತವಾಗಿಲ್ಲ. ಇಡೀ ಜಗತ್ತಿ ನಲ್ಲೆ ಮೊದಲ ಬಾರಿ ಇಂತಹ ಯೋಜನೆ ಗಳನ್ನು ಜಾರಿಗೊಳಿಸಿದ ಹಿರಿಮೆ ನಮ್ಮ ಸರಕಾರದ್ದಾಗಿದೆ ಎಂದರು.

17 ಬೇಡಿಕೆಗಳಿಗೆ ಸ್ಪಂದನೆ
ಕರಾವಳಿಯ ಮರಾಟಿ ಸಮು ದಾಯದ ನ್ಯಾಯಯುತ ಬೇಡಿಕೆ ಗಳನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ, ಮುಖ್ಯಮಂತ್ರಿ ಯವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಮಹದೇವಪ್ಪ ತಿಳಿಸಿದರು.

“ಗದ್ದಿಗೆ’ ಸ್ಮರಣ ಸಂಚಿಕೆಯನ್ನು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಬಿಡುಗಡೆಗೊಳಿಸಿದರು. ಮರಾಟಿ ಸಮಾಜ ಸದಾ ಹೋರಾಟ ಹಾಗೂ ಸ್ವಾಭಿಮಾನದ ಮೂಲಕ ಬದುಕಿದೆ ಎಂದರು.

Advertisement

ಶಾಸಕ ಉಮಾನಾಥ ಎ. ಕೋಟ್ಯಾನ್‌ ಮಾತನಾಡಿ ಶಿಕ್ಷಣಕ್ಕೆ ಒತ್ತು ಕೊಡುವ ಸಮುದಾಯ ಖಂಡಿತ ಮುನ್ನೆಲೆಗೆ ಬರುವುದು. ಈ ಸಮಾವೇಶ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು.

ಜಮ್ಮು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಮೂರು ಗೋಷ್ಠಿಗಳು ನಡೆದವು. ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರನ್ನು ಸಮ್ಮಾನಿಸಲಾುತು.

ಮಾಜಿ ಸಚಿವ ಅಭಯಚಂದ್ರ, ಉದ್ಯಮಿ ಬರೋಡ ಶಶಿಧರ ಶೆಟ್ಟಿ, ಗಣ್ಯರಾದ ಡಾ| ಬಿ.ಜಿ.ನಾಯ್ಕ, ಶೋಭಾವತಿ ಎಂ.ಟಿ., ಎನ್‌.ವಿಶ್ವನಾಥ ನಾಯ್ಕ, ಅಶೋಕ್‌ ನಾಯ್ಕ ಕೆದಿಲ, ಡಾ| ಬಾಲಕೃಷ್ಣ ಸಿ.ಎಚ್‌., ರಾಮಚಂದ್ರ ನಾಯ್ಕ, ಕೆ. ಚಂದ್ರಶೇಖರ ನಾಯ್ಕ, ಎಸ್‌. ಎಸ್‌. ಪರಮೇಶ್ವರ, ರಾಮಚಂದ್ರ ಕೆಂಬಾರೆ, ಪ್ರಕಾಶ್‌ ನಾಯ್ಕ ಮೊದಲಾದವರು ಇದ್ದರು.

ಗೌರವಾಧ್ಯಕ್ಷ ಡಾ| ಕೆ. ಸುಂದರ ನಾಯ್ಕ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಶಂಕರ ನಾಯ್ಕ ವಂದಿಸಿದರು. ಪ್ರಕಾಶ ನಾಯ್ಕ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next