Advertisement

Moodbidire: ಶ್ರೀ ಹಿರೇ ಅಮ್ಮನವರ ಬಸದಿ- ಧಾಮ ಸಂಪ್ರೋಕ್ಷಣೆ, ಜಿನಬಿಂಬ ಪ್ರತಿಷ್ಠೆ

11:27 PM Feb 16, 2024 | Team Udayavani |

ಮೂಡುಬಿದಿರೆ: ಪರಿವರ್ತನೆಯ ಯುಗದಲ್ಲಿ ತಾಳ್ಮೆ, ಸಹನೆ, ಸಂಯಮ ಇದ್ದಾಗ ವೈಯಕ್ತಿಕ, ಸಾಂಸಾರಿಕ ಮಾತ್ರವಲ್ಲ ಸಾಮಾಜಿಕ ಬದುಕು ಸಹ್ಯವಾಗಿರಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ನುಡಿದರು.

Advertisement

ಭ| ಶಾಂತಿನಾಥ ಸ್ವಾಮಿ ಮೂಲ ನಾಯಕನಾಗಿರುವ, ಮೂಡುಬಿದಿರೆ ಜೈನ ಪೇಟೆಯಲ್ಲಿರುವ ಶ್ರೀ ಹಿರೇ ಅಮ್ಮನವರ ಬಸದಿಯಲ್ಲಿ ಫೆ. 10ರಿಂದ 16ರ ವರೆಗೆ ನಡೆದ ಧಾಮ ಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವದಂಗವಾಗಿ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭೂ ಮಸೂದೆಯಿಂದಾಗಿ ಭೂಮಿ ಕಳೆದುಕೊಂಡರೂ ವಿದ್ಯೆಗೆ ಮಹತ್ವ ಕೊಟ್ಟ ಕಾರಣ ಜೈನರು ಸಮಾಜದ ವಿವಿಧ ರಂಗಗಳನ್ನು ಪ್ರವೇಶಿಸಿ, ಮಹತ್ವದ ಸಾಧನೆ ತೋರಲು ಸಾಧ್ಯವಾಯಿತು ಎಂದ ಅವರು ಒಗ್ಗಟ್ಟು ಮತ್ತು ಸಾಮರಸ್ಯ ವರ್ಧಿಸುವ ಮೂಲಕ ಸಮಾಜವನ್ನು ಸದೃಢವಾಗಿ ಕಟ್ಟಬೇಕಾಗಿದೆ ಎಂದು ಹೇಳಿದರು.

ನರಸಿಂಹರಾಜಪುರ ಶ್ರೀ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನದಲ್ಲಿ ಮೂಡುಬಿದಿರೆ ಸುಪುತ್ರ ಮಹಾಕವಿ ರತ್ನಾಕರವರ್ಣಿ ತನ್ನ ಕಾವ್ಯದಲ್ಲಿ ಹೇಳಿರುವಂತೆ ಎಲ್ಲರೂ ತಮ್ಮಾತ್ಮ ತತ್ವವನ್ನು ನಂಬಿ ನಿಜವ ಸಾಧಿಸುವಂತಾಗಲಿ, ಅದೇ ಶಾಶ್ವತ’ ಎಂದರು.

ಮೂಡುಬಿದಿರೆ ಸ್ವಸ್ತಿಶ್ರೀ ಭಟ್ಟಾರಕಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಮಾತನಾಡಿ, ಬಸದಿ ಆಡಳಿತೆದಾರ ಭಾಸ್ಕರ ಎಸ್‌. ಕಟ್ಟೆಮಾರ್‌, ಜೀರ್ಣೋದ್ಧಾರ ಸಮಿತಿ ಮತ್ತು ಇತರ ಉಪಸಮಿತಿಗಳು, ಸಂಘಟನೆಗಳು ಹಾಗೂ ಶ್ರಾವಕ ಶ್ರಾವಕಿಯರ ಒಗ್ಗಟ್ಟಿನ ಪರಿಶ್ರಮದಿಂದ ಬಸದಿ ಹೊಸರೂಪತಳೆದು ಕಂಗೊಳಿಸು ವಂತಾಗಿದೆ ಎಂದರು.

Advertisement

ಸಮ್ಮಾನ
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮಿಜಾರುಗುತ್ತು ಡಾ| ಮೋಹನ ಆಳ್ವ, ವಾಸ್ತು ತಜ್ಞ ಡಾ| ಪಾದೂರು ಸುದರ್ಶನ ಕುಮಾರ್‌, ಎಂಜಿನಿಯರ್‌ ಪಾರ್ಶ್ವನಾಥ ಜೈನ್‌, ಮಾಂಡೊವಿ ಉಪಾಧ್ಯಕ್ಷ ನೇರಂಕಿ ಪಾರ್ಶ್ವನಾಥ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ ಅವರನ್ನು ಸಮ್ಮಾನಿಸಲಾಯಿತು.

ಡಾ| ಮೋಹನ ಆಳ್ವರು ಮಾತ ನಾಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೆ. ಅಭಯಚಂದ್ರ ಜೈನ್‌ ಸಮ್ಮಾನಿತರನ್ನು ಅಭಿನಂದಿಸಿದರು. ಹೊಂಬುಜದ ಡಾ| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ರಥ ವಿಹಾರಕ್ಕೆ ಚಾಲನೆ ನೀಡಿದರು.

ಭಾರತಿ ಬಿ. ಕಟ್ಟೆಮಾರ್‌, ಅನಂತ ಕೇಸರಿ ಕಟ್ಟೆಮಾರ್‌, ಕುಲದೀಪ ಅರಮನೆ, ಉಪಾಧ್ಯಕ್ಷ ಆನಡ್ಕ ಸುಧೀಶ್‌ ಕುಮಾರ್‌,
ರಾಜೇಂದ್ರ ಕುಮಾರ್‌ಮಯೂರಿ, ಕಾರ್ಯದರ್ಶಿಗಳಾದ ನಮಿರಾಜ್‌, ರಂಜಿತ್‌ ಕುಮಾರ್‌, ಸಂಪತ್‌ಕುಮಾರ್‌, ಮಿತ್ರಸೇನ ಇಂದ್ರ ಉಪಸ್ಥಿತರಿದ್ದರು.

50 ಲಕ್ಷ ರೂ. ಅನುದಾನ
ರಾಜ್ಯ ಸರಕಾರದಿಂದ 50 ಲಕ್ಷ ರೂ. ಅನುದಾನ ಒದಗಿಬಂದಿರುವುದನ್ನು ಸಭೆಯಲ್ಲಿ ಪ್ರಕಟಿಸಲಾಯಿತು.

ಪ್ರ. ಕಾರ್ಯದರ್ಶಿ ರಾಜವರ್ಮ ಬೈಲಂಗಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಚಾರ ಸಮಿತಿ ಅಧ್ಯಕ್ಷ ಡಾ. ಪ್ರಭಾತ್‌ ಬಲಾ°ಡು ನಮಿರಾಜ ಜೈನ್‌, ನಿರಂಜನ ಅಳಿಯೂರು ನಿರೂಪಿಸಿದರು. ರಂಜಿತ್‌ ತಮನಂಗಡಿ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next