Advertisement
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಜಿಲ್ಲಾದ್ಯಂತ ಬಿತ್ತನೆ ಬೀಜಗಳ ಖರೀದಿ ಹಾಗೂ ಬಿತ್ತನೆ ತುಂಬಾ ಬಿರುಸುನಿಂದ ನಡೆದಿದೆ ಎಂದರು.
Related Articles
Advertisement
ನಂತರ ಬಿತ್ತನೆ ಬೀಜಗಳಿಗೆ ವಿವಿಧ ಕೀಟ ನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಕಡಿಮೆ ಖರ್ಚಿನಲ್ಲಿ ಬೆಳೆಗೆ ಬರಬಹುದಾದ ಅನೇಕ ರೋಗ ಮತ್ತು ಕೀಟದ ಹಾವಳಿ ತಪ್ಪಿಸಬಹುದಾಗಿದೆ. ಸಾಮಾನ್ಯವಾಗಿ ಬೀಜಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕಾಗಿ ಸಸಿ ಮಡಿಯಲ್ಲಿ ಕಂಡು ಬರುವ ಕೊಳೆರೋಗ ನಿಯಂತ್ರಿಸಲು ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಥೈರಾಮ್ ಅಥವಾ ಕ್ಯಾಪಾrನ್ ಶಿಲೀಂಧ್ರ ನಾಶಕ ಪುಡಿ ಲೇಪನ ಮಾಡುವುದರಿಂದ ಟೊಮೆಟೋ, ಬದನೆ, ಮೆಣಸಿನಕಾಯಿ ಮುಂತಾದ ಬೆಳೆಗಳಲ್ಲಿ ಸಸಿ ಸಾಯುವ ರೋಗದಿಂದ ರಕ್ಷಿಸಬಹುದು.
ಶೇಂಗಾ, ಹತ್ತಿ, ಕಡಲೆ ಹಾಗೂ ತೊಗರಿ ಬೆಳೆಗಳಿಗೆ ಬರುವ ಬುಡಕೊಳೆ ರೋಗದ ನಿಯಂತ್ರಣಕ್ಕಾಗಿ ಪ್ರತಿ ಕಿ.ಗ್ರಾಂ ಬೀಜಕ್ಕೆ 4-6 ಗ್ರಾಂ ಟ್ರೆ„ಕೋಡರ್ಮಾ ಜೈವಿಕ ಅಣುಜೀವಿಯಿಂದ ಲೇಪನ ಮಾಡುವುದರಿಂದ ಬೆಳೆ ರಕ್ಷಿಸಬಹುದೆಂದು ತಿಳಿಸಿದರು.
ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್. ಮಾತನಾಡಿ, ಮಣ್ಣು ಪರೀಕ್ಷೆ ಆಧಾರಿತ ಮೇಲೆ ಬಿತ್ತುವ ಪೂರ್ವದಲ್ಲಿ ರಸಗೊಬ್ಬರಗಳ ಬಳಕೆ ಮಾಡಬೇಕು. ತದನಂತರ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಸಿಂಪರಣೆ ಮೂಲಕ ಬೆಳೆಗಳಿಗೆ ಸಿಂಪರಣೆ ಮಾಡಿದಲ್ಲಿ ಪೋಷಕಾಂಶಗಳ ಕೊರತೆ ನಿಗಿಸಬಹುದು. ಬೇಸಿಗೆಯಲ್ಲಿ ಬೆಳೆದ ಹತ್ತಿ ಬೆಳೆಗೆ ಅಲ್ಲಲ್ಲಿ ಮೂಪು ಉದುರುವ ಲಕ್ಷಣಗಳು ಕಂಡು ಬರುತ್ತಿದ್ದು, ಪ್ರತಿ ಲೀಟರ್‌ಗೆ ನೀರಿಗೆ 10 ಗ್ರಾಂ ನೀರಿನಲ್ಲಿ ಕರಗುವ ಪೊಟ್ಯಾಷ್ ನೈಟ್ರೇಟ್ ಸಿಂಪಡಿಸಬೇಕೆಂದು ತಿಳಿಸಿದರು.
ಪಶು ವಿಜ್ಞಾನಿ ಡಾ| ಮಹೇಶ ಕಡಗಿ ಅವರು, ಕುರಿಗಳ ಆರೋಗ್ಯದ ಬಗ್ಗೆ ಲಸಿಕೆಗಳನ್ನು ನೀಡಲು ಸವಿಸ್ತಾರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರೈತರಾದ ದಿಳ್ಳೆಪ್ಪ ಬಣಕಾರ, ಹೊನ್ನಪ್ಪ ಗೌಡ್ರು, ಭೀರಪ್ಪ ಎರೇಕುಪ್ಪಿ, ಕರಿಯಪ್ಪ ಬೀರಾಳ, ನಿಂಗಪ್ಪ ಬಡಪ್ಪಳವರ ಇತರರಿದ್ದರು.