Advertisement
ವಿಪಕ್ಷಗಳು ಕೊರೊನಾ ವಿಚಾರದಲ್ಲಿ ಸರಕಾರ ಕೈಗೊಂಡ ನಿರ್ಧಾರಗಳು, ಜಿಡಿಪಿ ಪತನ ಹಾಗೂ ಗಡಿಯಲ್ಲಿ ಚೀನದಿಂದ ಎದುರಿಸುತ್ತಿರುವ ಬಿಕ್ಕಟ್ಟು ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಶ್ನೆಗಳ ಸುರಿಮಳೆ ಸುರಿಸಲು ಕಾಯುತ್ತಿದ್ದರೆ, ಕೇಂದ್ರ ಸರಕಾರ ತಾನು ಇತ್ತೀಚೆಗೆ ಕೈಗೊಂಡಿರುವ 11 ಸುಗ್ರೀವಾಜ್ಞೆಗಳನ್ನು ಎರಡೂ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಮಂಡಿಸಿ ಸದನದ ಒಪ್ಪಿಗೆ ಪಡೆಯುವುದಕ್ಕೆ ಪ್ರಥಮ ಆದ್ಯತೆ ನೀಡಿದೆ.
ಅಧಿವೇಶನ ಶುರುವಾಗುತ್ತಿದ್ದಂತೆ ಚೀನ ಬಿಕ್ಕಟ್ಟಿನ ಬಗ್ಗೆ ಸರಕಾರವನ್ನು ಪೇಚಿಗೆ ಸಿಕ್ಕಿಸಲು ವಿಪಕ್ಷಗಳು ರೂಪಿಸಿರುವ ತಂತ್ರಗಾರಿಕೆಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಪಕ್ಷದ ಆಂತರಿಕ ಮೂಲಗಳು, “ಚರ್ಚೆಗೆ ನಾವು ಸಿದ್ಧವಾಗಿದ್ದೇವೆ. ಸದನದಲ್ಲಿ ಯಾವಾಗ ಆ ಚರ್ಚೆ ನಡೆದರೂ ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ. ಗಡಿಯಲ್ಲಿ ನಾವು ಹೇಗೆ ಚೀನಕ್ಕೆ ದಿಟ್ಟತನದ ಉತ್ತರ ನೀಡಿದ್ದೇವೆಯೋ, ಅದೇ ರೀತಿ ಸದನದ ಚರ್ಚೆಗಳನ್ನೂ ದಿಟ್ಟತನದಿಂದ ಎದುರಿಸಲಿದ್ದೇವೆ’ ಎಂದು ಹೇಳಿವೆ. “ಬಹಿರಂಗ ಚರ್ಚೆ ಬೇಡ’
ಈ ಕುರಿತಂತೆ ಮಾತನಾಡಿರುವ ಸಚಿವರೊಬ್ಬರು, “ನಮ್ಮ ಸರಕಾರ, ಚರ್ಚೆಗಳಿಂದ ಓಡಿಹೋಗುವುದಿಲ್ಲ. ಆದರೆ, ಭಾರತ-ಚೀನ ಗಡಿ ವಿಚಾರ ಅತ್ಯಂತ ಸೂಕ್ಷ್ಮವಾದದ್ದು. ಹಾಗಾಗಿ, ಆ ವಿಚಾರದಲ್ಲಿ ಸರಕಾರ ಯಾವ ಕ್ರಮ ಗಳನ್ನು ಅನುಸರಿಸಲಿದೆ, ಯಾವ ತಂತ್ರಗಾರಿಕೆಯನ್ನು ರೂಪಿಸಲಿದೆ ಎಂಬು ದನ್ನು ಬಹಿರಂಗವಾಗಿ ಚರ್ಚಿಸುವುದು ಸಲ್ಲದು. ಆದರೆ, ಇನ್ನೊಂದು ವಾರ ಅಥವಾ ಕೆಲವೇ ದಿನಗಳಲ್ಲಿ ಗಡಿ ಸಮಸ್ಯೆಯನ್ನು ಇತ್ಯರ್ಥ ಗೊಳಿಸಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ.
Related Articles
ಸರಕಾರದ ಕೆಲವು ನಂಬಲರ್ಹ ಮೂಲಗಳನ್ನು ಉದ್ದೇಶಿಸಿ ಮಾಡಿರುವ ಆ ವರದಿಯಲ್ಲಿ, “ಸಾಮಾನ್ಯವಾಗಿ ಪ್ರತಿಯೊಂದು ಅಧಿವೇಶನ ಶುರುವಾಗುವ ಮುನ್ನ ಕೇಂದ್ರ ಸರಕಾರ ಸರ್ವಪಕ್ಷಗಳ ಸಭೆ ಕರೆಯುತ್ತದೆ. ಆದರೆ, ಈ ಬಾರಿ ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ವ್ಯವಹಾರ ಸಲಹಾ ಸಮಿತಿಯ (ಬಿಎಸಿ) ಸಭೆ ನಡೆಸಲು ಉದ್ದೇಶಿಸಲಾಗಿದೆ. ಆ ಸಭೆಯಲ್ಲಿ ವಿಪಕ್ಷಗಳ ಪ್ರತಿನಿಧಿಗಳು ಮಾತ್ರವೇ ಭಾಗವಹಿಸುವ ನಿರೀಕ್ಷೆಯಿದ್ದು, ಆ ಸಭೆಯಲ್ಲೇ ಭಾರತ-ಚೀನ ಗಡಿ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗು¤ತದೆ. ಅಷ್ಟಾದರೂ, ವಿಪಕ್ಷಗಳ ಪ್ರತಿನಿಧಿಗಳು ದೀರ್ಘ ಸ್ವರೂಪದ ಉತ್ತರ ಬೇಕು ಎಂದಾದರೆ ರಕ್ಷಣಾ ಸಚಿವರಿಂದ ವಿಸ್ತೃತ ಮಾಹಿತಿ ನೀಡಲಾಗುತ್ತದೆ’ ಎಂದು ಹೇಳಲಾಗಿದೆ.
Advertisement