Advertisement

ಮುಂಗಾರು ಆರಂಭದೊಂದಿಗೆ ಕೃಷಿ ಚಟುವಟಿಕೆಗೆ ಚಾಲನೆ  ​​​​​​​

06:15 AM Jun 09, 2018 | Team Udayavani |

ಕಾಪು: ಕರಾವಳಿಯಲ್ಲಿ ಮುಂಗಾರು ಮಳೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಮಳೆಗಾಲಕ್ಕೆ ಮೊದಲೇ ಕೃಷಿ ಕಾರ್ಯಗಳಿಗಾಗಿ ಸಿದ್ಧತೆ ನಡೆಸಿ, ಉಳುಮೆ – ಭಿತ್ತನೆ ನಡೆಸಿದ್ದ ರೈತರಿಗೆ ಮಹಾಮಳೆ ಅವಾಂತರ ಉಂಟು ಮಾಡಿತ್ತು. ಇದೀಗ ಮುಂಗಾರು ಪ್ರಾರಂಭ ಗೊಳ್ಳುತ್ತಿದ್ದಂತೆಯೇ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ.  

Advertisement

ಲಾಭ ನಷ್ಟಗಳ ಲೆಕ್ಕಾಚಾರ 
ಈ ಬಾರಿ ಮೇ ತಿಂಗಳಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ಹಲವೆಡೆ ನೀರಿನ ಕೊರತೆ ಅಷ್ಟಾಗಿ ಭಾದಿಸಿರಲಿಲ್ಲ. ಆದರೆ ಮೇ ಕೊನೆಯ ವಾರದಲ್ಲಿ ಸುರಿದ ಭಾರೀ ಗಾಳಿ, ಮಳೆ, ಸಿಡಿಲಿನಿಂದ ತೆಂಗು, ಕಂಗು ಮಾತ್ರವಲ್ಲದೆ ತೋಟಗಾರಿಕಾ ಬೆಳೆಗಳಿಗೆ ಹಾನಿಯುಂಟಾಗಿತ್ತು.

ಕಾಡುತ್ತಿವೆ ಹಲವು ಸಮಸ್ಯೆಗಳು 
ಮೊನ್ನೆಯ ಮಹಾಮಳೆ ರಾದ್ಧಾಂತ ದಿಂದಾಗಿ ನೇಜಿಗಾಗಿ ಭಿತ್ತಲಾಗಿದ್ದ ಭತ್ತದ ಬೀಜಗಳು ಕೊಳೆತು ಹೋಗುವಂತಾಗಿದೆ. ಕೃಷಿ ಗದ್ದೆಗೆ ಹಾಕಿರುವ ಹಟ್ಟಿಗೊಬ್ಬರ ಮತ್ತು ಸುಡುಗೊಬ್ಬರಗಳು ನೀರು ಪಾಲಾಗಿವೆ. ಈ ಕಾರಣದಿಂದಾಗಿ ಕೃಷಿಗೆ ಮತ್ತು ಸನ್ನಾಹ ನಡೆಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.  ಒಮ್ಮೆ ಗೊಬ್ಬರ ಹಾಕಿ ಹದಗೊಳಿಸಿರುವ ಭೂಮಿಯಲ್ಲಿ ಮಳೆ ನೀರು ಶೇಖರಣೆಗೊಂಡ ಪರಿಣಾಮ ವಿಪರೀತ ಕಳೆ ಗಿಡಗಳು ಬೆಳೆಯಲಾರಂಭಿಸಿವೆ. ಇವುಗಳು ಫ‌ಲವತ್ತತೆಯನ್ನು ಹೀರಿ ಕೊಳ್ಳುವುದರಿಂದ ಸಮಸ್ಯೆಯಾಗಿದೆ. ಕಳೆಗಳನ್ನು ಕಿತ್ತು ಮತ್ತೂಮ್ಮೆ ಉಳುಮೆ ಮಾಡಬೇಕಿದೆ. ಉಳುಮೆಗಾಗಿ ಕೆಲವರು ಯಂತ್ರಗಳ ಮೊರೆ ಹೋಗಿದ್ದರೆ, ಮತ್ತೆ ಕೆಲವರು ಸಾಂಪ್ರದಾಯಿಕ ಪದ್ಧತಿ ತ್ಯಜಿಸುವ ಮನಸ್ಸಿಲ್ಲದೇ ಕೋಣಗಳೊಂದಿಗೆ ಉಳುಮೆಗೆ ಮುಂದಾಗಿದ್ದಾರೆ.

ಶಿಲೀಂಧ್ರ  ಉತ್ಪತ್ತಿ
ಮಳೆಯ ಪರಿಣಾಮದಿಂದಾಗಿ ಉಳುಮೆ ಮಾಡಿ ಹದಗೊಳಿಸಲಾದ ಗದ್ದೆಗಳಲ್ಲಿ ನೀರು ನಿಂತು ಶಿಲೀಂಧ್ರಗಳ ಉತ್ಪತ್ತಿಯಾಗಿದೆ. 
-ರಾಘವೇಂದ್ರ ನಾಯಕ್‌, ಕೃಷಿಕ

ಕೃಷಿ ಕಾರ್ಯ ವಿಳಂಬ
ಭತ್ತದ ಬೀಜ ಮಳೆಯ ಕಾರಣದಿಂದಾಗಿ ಮೊಳಕೆ ಯೊಡೆಯುವ ಮೊದಲೇ ಕೊಳೆತು ಹೋಗಿವೆ. ಮೊಳಕೆಯೊಡೆಯುವ ಮೊದಲೇ ನೀರು ಪಾಲಾಗಿರುವುದ ರಿಂದ ಮುಂದೆ ಬಿತ್ತನೆ ಬೀಜದ ಕೊರತೆ ಎದುರಾಗಿದೆ. ಇದರಿಂದ ಕೃಷಿ ಕಾರ್ಯ ವಿಳಂಬವಾಗಿದೆ.
– ಪರಮೇಶ್ವರ ಅಧಿಕಾರಿ ,ಕೃಷಿಕ

Advertisement
Advertisement

Udayavani is now on Telegram. Click here to join our channel and stay updated with the latest news.

Next