Advertisement
ಕರಾವಳಿ ಭಾಗದಲ್ಲಿ ಈ ಬಾರಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ. 19ರಷ್ಟು ಕಡಿಮೆ ಮಳೆ ಸುರಿದಿತ್ತು. ಇದೀಗ ಹಿಂಗಾರು ಕೆಲವೆಡೆ ಆರಂಭದಲ್ಲಿಯೇ ಬಿರುಸು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
Related Articles
ಹಿಂಗಾರು ಆರಂಭದಲ್ಲಿ ತುಸು ಹಿನ್ನಡೆ ಕಂಡರೂ ಸದ್ಯ ಉತ್ತಮ ಮಳೆ ಆರಂಭಗೊಂಡಿದೆ. ಅ.1ರಿಂದ 13ರ ವರೆಗೆ ದ.ಕ. ಜಿಲ್ಲೆಯಲ್ಲಿ ಶೇ.31ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಉಡುಪಿಯಲ್ಲಿ ಶೇ. 37 ಕಡಿಮೆ ಮಳೆಯಾಗಿದೆ. ಆದರೆ, ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿರುಸಿನ ಮಳೆ ನಿರೀಕ್ಷೆ ಇದೆ.
Advertisement
ಈ ಬಾರಿ ಚಳಿ ಅವಧಿ ಹೆಚ್ಚಳ ಕರಾವಳಿ ಭಾಗದಲ್ಲಿ ಸದ್ಯ ಬಿಸಿಲು, ಸೆಕೆ, ಮಳೆ ಇದ್ದು, ಕೆಲವು ಕಡೆ ಬೆಳಗ್ಗಿನ ಜಾವ ತುಸು ಚಳಿಯ ವಾತಾವರಣವೂ ಇದೆ. ಸದ್ಯದ ಮಾಹಿತಿಯ ಪ್ರಕಾರ ನವೆಂಬರ್ ಎರಡನೇ ವಾರದಿಂದ ಚಳಿ ಆರಂಭವಾಗಬಹುದು. ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆ ಬಂದರೆ ಚಳಿ ಅವಧಿ ಮತ್ತು ಪ್ರಮಾಣ ಸಾಮಾನ್ಯವಾಗಿರುತ್ತಿತ್ತು. ಆದರೆ, ಹಿಂಗಾರು ಜಾಸ್ತಿಯಾದರೆ ವಾತಾವರಣದಲ್ಲಿ ನೀರಿನ ಅಂಶ ಹೆಚ್ಚಾಗುತ್ತದೆ. ಕಾರಣ ಚಳಿ ಬೇಗ ಆರಂಭವಾಗಿ, ಚಳಿಯ ಅವಧಿ ಕೂಡ ಜಾಸ್ತಿ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಕರಾವಳಿ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಸುರಿದಿತ್ತು. ಇದೇ ಕಾರಣಕ್ಕೆ ಹಿಂಗಾರು ಅವಧಿಯಲ್ಲಿ ಉತ್ತಮ ಮಳೆ ಸುರಿಯಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಮುಂಗಾರು ಕಡಿಮೆ ಸುರಿದ ವೇಳೆ ಹಿಂಗಾರು ಯಥೇತ್ಛವಾಗಿತ್ತು. ಹಿಂಗಾರು ಉತ್ತಮವಿದ್ದರೆ ಚಳಿಗಾಲದಲ್ಲಿಯೂ ವ್ಯತ್ಯಾಸವಾಗುವ ಸಾಧ್ಯತೆ ಇದೆ.
– ಡಾ| ರಾಜೇಗೌಡ, ಕೃಷಿ ವಿ.ವಿ. ಬೆಂಗಳೂರು ಹವಾಮಾನ ವಿಜ್ಞಾನಿ -ನವೀನ್ ಭಟ್ ಇಳಂತಿಲ