Advertisement

ಮುಂಗಾರು ಉತ್ತಮ ಆರಂಭ, 2 ಲಕ್ಷ ಹೆಕ್ಟೇರ್‌ ಬಿತ್ತನೆ ಹೆಚ್ಚಳ

07:11 AM Jun 13, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪ್ರಾರಂಭ ಉತ್ತಮವಾಗಿರುವುದರಿಂದ ವಾಡಿಕೆಗಿಂತ 2 ಲಕ್ಷ ಹೆಕ್ಟೇರ್‌ ನಲ್ಲಿ ಹೆಚ್ಚುವರಿ ಬಿತ್ತನೆ ಆಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿಳಿಸಿದರು. 2020-21 ಮುಂಗಾರು -ಹಿಂಗಾರು ಕಾರ್ಯಾ  ಗಾರ ಉದ್ಘಾಟಿಸಿ ಮಾತನಾಡಿ, ವಾಡಿಕೆಯಂತೆ ಜೂನ್‌ ಮೊದಲ ವಾರದಲ್ಲಿ 5 ಲಕ್ಷ ಹೆಕ್ಟೇರ್‌ ಬಿತ್ತನೆಯಾಗುತ್ತಿತ್ತು.

Advertisement

ಪ್ರಸ್ತುತ 7 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. ಜುಲೈ ಅಂತ್ಯದವರೆಗೂ ರಾಜ್ಯಕ್ಕೆ ಬೇಕಾ ದ ಗೊಬ್ಬರ, ಬಿತ್ತನೆ ಬೀಜಕ್ಕೆ ಕೊರತೆ  ಇಲ್ಲ. ಅಗತ್ಯವಾದಷ್ಟು ದಾಸ್ತಾನು ಮಾಡಲಾಗಿ ದೆ ಎಂದರು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಸೋಯಾಬಿನ್‌ ಈ ಬಾರಿ ಬಿತ್ತನೆ ಮಾಡದಿರುವುದೇ ಸೂಕ್ತ ಎಂದು ರೈತರಿಗೆ ಸಲಹೆ ನೀಡಿ, ಈಗಿರುವ ಬಿತ್ತನೆ ಬೀಜದಲ್ಲಿ ಇಳುವರಿ ಹೆಚ್ಚು ಸಿಗುವುದು ಕಷ್ಟ ಎಂಬ ತಜ್ಞರ ಅಭಿಪ್ರಾಯವಿದೆ.

ಹೀಗಾಗಿ, ರೈತರು ಪರ್ಯಾಯವಾಗಿ ಮೆಕ್ಕೆಜೋಳ ಬೆಳೆಯ ಬೇಕೆಂದರು. ಬೀದರ್‌, ಬೆಳಗಾವಿ, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಹಾವೇರಿ, ಧಾರವಾಡ ಭಾಗದಲ್ಲಿ  ಸೋಯಾ ಬಿನ್‌ ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಸ್ತುತ ನಮ್ಮಲ್ಲಿ ಅಗತ್ಯ ಬೇಡಿಕೆಯಾದ 1.50 ಲಕ್ಷ ಕ್ವಿಂಟಲ್‌ನ ಪೈಕಿ 1.05 ಕ್ವಿಂಟಲ್‌ ಬಿತ್ತನೆ ಬೀಜವಿದ್ದು ತಲಾ 30 ಕೆ.ಜಿ.ವರೆಗೆ ನೀಡಲಾಗುತ್ತಿದೆ. ಆದರೂ, ರೈತರ ಹಿತದೃಷ್ಟಿಯಿಂದ ಈ ಬಾರಿ ಸೋಯಾಬಿನ್‌ ಬೆಳೆಯುವುದು  ಬೇಡ ಎಂಬ ಸಲಹೆ ಕೃಷಿ ಇಲಾಖೆಯದ್ದಾಗಿದೆ ಎಂದರು.

ಸಮರ್ಥನೆ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಸಮರ್ಥಿಸಿಕೊಂಡ ಸಚಿವರು, ಕೃಷಿ ಯಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಅನುಕೂಲವಾಗುತ್ತದೆ. ಹಳ್ಳಿಗಳಿಗೆ ಹೋಗಿ  ಯಾರೂ ರಿಯಲ್‌ ಎಸ್ಟೇಟ್‌ ಮಾಡುವುದಿಲ್ಲ. ಇನ್ನೂ ಕೃಷಿ ಕೈಗಾರಿಕೆ ಮತ್ತು ಕೃಷಿ ಸಂಸ್ಕರಣ ವಲಯಕ್ಕೆ ಅಗತ್ಯ ಜಮೀನು ಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next