ಹೊಸದಿಲ್ಲಿ: ದೇಶಾದ್ಯಂತ ನಿಗದಿತ ಅವಧಿಗಿಂತ 12 ದಿನ ಮುನ್ನವೇ ಪ್ರವೇಶಿಸಿದ್ದ ಮುಂಗಾರು ಮಳೆ, 201 ಜಿಲ್ಲೆಗಳಲ್ಲಿ (ಶೇ.30 ಭಾಗ) ವಾಡಿಕೆಗಿಂತ ಕಡಿಮೆಯಾಗಿದೆ.
ಜು.8ಕ್ಕೆ ವಾಡಿಕೆಯಂತೆ ದೇಶಾದ್ಯಂತ ಮಾನ್ಸೂನ್ ಆವರಿಸಬೇಕಿತ್ತು.
ಆದರೆ, 12 ದಿನ ಮೊದಲೇ ಜೂ.26ರಂದು ಪ್ರವೇಶಿಸಿತ್ತು. ಜೂನ್ 1 ಹಾಗೂ ಜುಲೈ 2ರ ಅವಧಿಯಲ್ಲಿ 9 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದೆ.
ಕೇರಳ ಶೇ.22, ದೆಹಲಿ, ಮಣಿಪುರ, ಮಿಜೋರಾಂ, ದಾಮನ್ ಹಾಗೂ ದಿಯು ಪ್ರದೇಶದಲ್ಲಿ ಶೇ.50ರಷ್ಟು ಮಳೆ ಕೊರತೆಯಾಗಿದೆ.
ಬಿಹಾರದಲ್ಲಿ ವಾಡಿಕೆಗಿಂತ ಶೇ.66 ರಷ್ಟು ಹೆಚ್ಚು ಮಳೆಯಾಗಿದೆ. ಅಸ್ಸಾಂನಲ್ಲಿ ಶೇ.24 ಹಾಗೂ ಮೇಘಾಲಯದಲ್ಲಿ ಶೇ.28ರಷ್ಟು ಹೆಚ್ಚು ಮಳೆಯಾಗಿದೆ.
ಅಸ್ಸಾಂನ 22 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, 31 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ಸುರಿದಿದೆ.