ಕಾಸರಗೋಡು: ಕಾರಡ್ಕ ಕುಟುಂಬಶ್ರೀ ಸಿ.ಡಿ.ಎಸ್, ಕಾರಡ್ಕ ಗ್ರಾಮ ಪಂಚಾಯತ್, ನವಜ್ಯೋತಿ, ಪಾಂಚಜನ್ಯ ಮೊದಲಾದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಎಂ.ಕೆ.ಎಸ್.ಪಿ. ಯೋಜನೆಯಲ್ಲಿ ಕಾರಡ್ಕ ಗ್ರಾಮ ಪಂಚಾಯತ್‌ನ ಕಾನಕ್ಕೋಡಿನ ಬಯಲಿನಲ್ಲಿ ನಡೆದ ಮಳೆಗಾಲದ ನಾಟಿ ಉತ್ಸವ ಮನಸೂರೆಗೊಂಡಿತು.ಕೃಷಿ ಸಂಸ್ಕೃತಿಯ ಹಳೆಯ ನೆನಪುಗಳನ್ನು ಮತ್ತೆ ಸ್ಮೃತಿ ಪಟಲದಲ್ಲಿ ಮೂಡಿಸುವ ನಾಟಿ ಉತ್ಸವ ಕಾರ್ಯಕ್ರಮ ನೆರೆದ ಗ್ರಾಮೀಣರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಬಯಲು ಸಂರಕ್ಷಣೆಯ ಪ್ರತಿಜ್ಞೆ, ಹಗ್ಗ ಜಗ್ಗಾಟ, ನಾಟಿ ಹಾಡುಗಳು, ಕೃಷಿಕರಿಗೆ ಗೌರವಾರ್ಪಣೆ, ಕೃಷಿ ಉಪಕರಣಗಳ ಪ್ರದರ್ಶನ, ಆಹಾರ ಮೇಳ ಮೊದಲಾದವು ನಡೆಯಿತು.
ಮುಳ್ಳೇರಿಯ ವಿ.ಎಚ್.ಸಿ.ಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಮಾಸ್ಟರ್ ಕೃಷಿಕರು, ನೆರೆಕರೆ ಕೂಟ ಸದಸ್ಯರು, ಜೆಎಲ್‌ಜಿ ಸದಸ್ಯರು, ಭತ್ತ ಕೃಷಿ ಸಮಿತಿ ಪದಾಧಿಕಾರಿಗಳು ಮೊದಲಾದವರು ಭಾಗವಹಿಸಿದರು.
ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್, ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ವಪ್ನಾ, ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ವಾರಿಜಾಕ್ಷನ್, ಪಂಚಾಯತ್ ಉಪಾಧ್ಯಕ್ಷ ಗೋಪಾಲಕೃಷ್ಣ, ಕುಟುಂಬಶ್ರೀ ಎಡಿಎಂಸಿ ಹರಿದಾಸನ್, ಪ್ರೋಗ್ರಾಂ ಮೆನೇಜರ್ ಸೈಜು, ಬ್ಲಾಕ್ ಕೋಆರ್ಡಿನೇಟರ್ ರಮ್ಯಾ, ಮೆಂಬರ್ ಸೆಕ್ರೆಟರಿ ಅರುಣ್ ಕುಮಾರ್ ಮೊದಲಾದವರು ಮಾತನಾಡಿದರು.
ಚಿತ್ರ : ಕಲಾಕಾರ್ ಮುಳ್ಳೇರಿಯ