Advertisement
ಮಡಿಕೇರಿ ತಾಲೂಕಿನಲ್ಲಿ 6,500, ಸೋಮವಾರಪೇಟೆಯಲ್ಲಿ 10,000 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಒಟ್ಟು 14,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. 30,500 ಹೆಕ್ಟೇರ್ ಪ್ರದೇಶದ ಪೈಕಿ ಕೇವಲ 2,400 ಹೆಕ್ಟೇರ್ ಪ್ರದೇಶ ಮಾತ್ರ ನೀರಾವರಿ ವ್ಯಾಪ್ತಿಗೆ ಒಳಪಡಲಿದ್ದು, ಉಳಿದ ಪ್ರದೇಶಗಳಲ್ಲಿ ರೈತರು ಮಳೆಯನ್ನು ನಂಬಿಕೊಂಡೇ ಭತ್ತದ ಕೃಷಿ ಕೈಗೊಂಡಿದ್ದಾರೆ.
ರೈತರ ಕೃಷಿ ವಲಯವನ್ನು ಆಧಾರವಾಗಿಟ್ಟುಕೊಂಡು ಕೃಷಿ ಇಲಾಖೆ ಭಿತ್ತನೆ ಬೀಜ ಮತ್ತು ಗೊಬ್ಬರವನ್ನು ಕೂಡ ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಮಾಡಿಕೊಂಡಿದೆ.
Related Articles
Advertisement
ಈ ಕಾರಣದಿಂದಲೆ ಕೊಡಗು ಜಿಲ್ಲೆಯಲ್ಲಿ ಹಲವು ರೈತರು ಭತ್ತದ ಕೃಷಿ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ಭತ್ತದ ಗದ್ದೆಗಳು ಪಾಳು ಬೀಳುತ್ತಿದ್ದು, ಕೆಲವು ಗದ್ದೆಗಳು ನಿವೇಶನಗಳಾಗಿ ಪರಿವರ್ತನೆಯಾದರೆ ಕೆಲವೆಡೆ ಕಾಡಾನೆ ಗಳ ಕಾರಿಡಾರ್ ಆಗಿ ಪಾಳು ಬಿದ್ದಿವೆ. ಕೊಡಗು ಜಿಲ್ಲೆ ಭೌಗೋಳಿಕವಾಗಿ ಬೆಟ್ಟ-ಗುಡ್ಡಗಳಿಂದ ಕೂಡಿರುವುದಲ್ಲದೆ, ಭೂಮಿಯ ಫಲವತ್ತತೆಯಲ್ಲೂ ವ್ಯತ್ಯಾಸ ಗಳಿವೆ. ಕೆಲವೆಡೆ ಎಕರೆಗೆ 10 ಕ್ಟಿಂಟಾಲ್ ಭತ್ತ ಬೆಳೆಯಲ್ಪಟ್ಟರೆ, ಮತ್ತೆ ಕೆಲವೆಡೆ 20ರಿಂದ 30 ಕ್ಟಿಂಟಾಲ್ ಭತ್ತ ಬೆಳೆಯಲಾಗುತ್ತದೆ. ಭತ್ತದ ಬೆಳೆಯ ನಿರ್ವಹಣೆ, ಪೋಷಣೆ ಕೂಡ ಭತ್ತದ ಇಳುವರಿಯನ್ನು ನಿರ್ಧರಿಸುತ್ತದೆ ಎಂದು ಕೊಡಗು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಕೃಷಿ ಫಸಲು ನಷ್ಟದಿಂದ ರೈತರು ಪಾರಾಗಲು, ಎಲ್ಲ ರೈತರು ಕೃಷಿ ಫಸಲು ವಿಮೆಯನ್ನು ಮಾಡಿಸಿಕೊಳ್ಳಬೇಕು. ಇದರಿಂದ ಕೃಷಿ ನಷ್ಟದಿಂದ ಸ್ವಲ್ಪಮಟ್ಟಿಗಾದರೂ ಪಾರಾಗ ಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.
ತುಂಗಾ ತಳಿ ಬೆಳೆಯುವವರೇ ಅಧಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು 110ರಿಂದ 130 ದಿನಗಳಲ್ಲಿ ಫಸಲು ಬರುವ ತುಂಗಾ ತಳಿಯ ಭತ್ತ ಬೆಳೆಯುತ್ತಿದ್ದು, ಅದರೊಂದಿಗೆ ನೆರೆೆಯ ಕೇರಳ ರಾಜ್ಯ, ದಕ್ಷಿಣ ಕನ್ನಡ ಕಡೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆಯಿರುವ ಅಥಿರಾ ಎಂಬ ಕೆಂಪು ಬಣ್ಣದ ಭತ್ತ ಬೆಳೆಯುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ದಕ್ಷಿಣ ಕೊಡಗಿನ ಹಲವು ರೈತರು ಅಥಿರಾ ಬೆಳೆಯ ಕಡೆ ಆಕರ್ಷಿತರಾಗಿದ್ದಾರೆ. ಅದರೊಂದಿಗೆ ತುಂಗಾ ಐ.ಯು.ಟಿ-13905, ಇಂಟಾನ್-ಎಂ.ಟಿ.ಯು., ಬಿ.ಆರ್-2655, ಸೇರಿದಂತೆ ಜೀರಿಗೆ ಸಣ್ಣ, ರಾಜಮುಡಿ ಹಾಗೂ ಕೆಲವು ರೈತರು ಬಾಸ್ಮತಿ ತಳಿಯ ಭತ್ತ ಬೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೊಡಗಿನ ಸಾಂಪ್ರದಾಯಿಕ ತಳಿ ಎಂದೇ ಕರೆಯಲ್ಪಡುವ, ರೋಗ ನಿರೋಧಕ ಶಕ್ತಿ ಹೊಂದಿರುವ ಬಿ.ಕೆ.ಬಿ. ತಳಿಯನ್ನೇ ಕೆಲವು ರೈತರು ನೆಚ್ಚಿಕೊಂಡಿದ್ದಾರೆ.