ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಮತ್ತು ವಾಣಿಜ್ಯ ನಗರಿ ಮುಂಬೈಗೆ ಈ ಬಾರಿ ಒಂದೇ ಸಲ ಮಾನ್ಸೂನ್ ಪ್ರವೇಶಿಸಿದೆ. 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಎರಡೂ ನಗರಗಳಿಗೆ ಒಂದೇ ಬಾರಿ ಮಾನ್ಸೂನ್ ಎಂಟ್ರಿ ನೀಡಿದೆ. ಉಭಯ ನಗರಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಇಂತಹ ಅಪರೂಪದ ವಿದ್ಯಮಾನವು ಕೊನೆಯ ಬಾರಿಗೆ ಜೂನ್ 21, 1961 ರಂದು ಸಂಭವಿಸಿತು, ಮಾನ್ಸೂನ್ ದೆಹಲಿ ಮತ್ತು ಮುಂಬೈನಲ್ಲಿ ಒಂದೇ ಸಮಯದಲ್ಲಿ ಮುಂದುವರೆದಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಎರಡು ನಗರಗಳ ನಡುವೆ 1,430 ಕಿಲೋಮೀಟರ್ ಅಂತರವಿದೆ.
ಇದನ್ನೂ ಓದಿ:Parvathamma Rajkumar ಸೋದರಳಿಯ ನಟ ಸೂರಜ್ ಗೆ ಅಪಘಾತ: ಗಂಭೀರ ಗಾಯ
ಸಾಮಾನ್ಯವಾಗಿ ದಿಲ್ಲಿಗೆ ಜೂನ್ 27ರಂದು ಪ್ರವೇಶಿಸಬೇಕಿತ್ತು. ಆದರೆ ಈ ಬಾರಿ ಎರಡು ದಿನ ಮೊದಲೇ ಮುಂಗಾರಿನ ಮಳೆಯಾಗಿದೆ. ಆದರೆ ಮತ್ತೊಂದೆಡೆ ಜೂನ್ 11ರಂದು ಮುಂಬೈಗೆ ಮುಂಗಾರು ಪ್ರವೇಶಿಸಬೇಕಿತ್ತು, ಆದರೆ ಎರಡು ವಾರಗಳ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಳಿಗ್ಗೆ 5.30 ರವರೆಗೆ, ನಗರದ ಪ್ರಾಥಮಿಕ ಹವಾಮಾನ ನೆಲೆಯಾದ ಸಫ್ದರ್‌ಜಂಗ್‌ನಲ್ಲಿ 47.2 ಮಿಮೀ ಮಳೆ ದಾಖಲಾಗಿದ್ದರೆ, ನೈಋತ್ಯ ದೆಹಲಿಯ ಪಾಲಂನಲ್ಲಿ 22 ಮಿಮೀ ಮಳೆಯಾಗಿದೆ.