Advertisement
ಇತಿಹಾಸ ಪ್ರಸಿದ್ಧ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ವಾನರರಿಗೆ ಪ್ರಸಿದ್ಧಿಯಾಗಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಈ ಕೋತಿಗಳ ಆಟ ನೋಡಿ ಸಂತಸಪಡದವರಿಲ್ಲ. ಹಣ್ಣುಕಾಯಿಯ ಬಾಳೆಹಣ್ಣು , ತೆಂಗಿಕಾಯಿಯೂ ಈ ವಾನರರಿಗೆ ಮೀಸಲು. ಒಮ್ಮೊಮ್ಮೆ ಮಕ್ಕಳು, ಮಹಿಳೆಯರ ಕೈಯಿಂದ ಬ್ಯಾಗ್ ಎಳೆದು ಆಹಾರಕ್ಕಾಗಿ ಕಾಡುವುದೂ ಉಂಟು!. ಆದರೆ ಭಕ್ತರಿಲ್ಲದೆ ಈ ಕಪಿಗಳಿಗೆ ಆಹಾರದ ಕೊರತೆಯಾಗಿದೆ.
Related Articles
Advertisement
ಶ್ರೀ ರಾಮ ಭಕ್ತ, ವಾನರ ಶ್ರೇಷ್ಠ ಆಂಜನೇಯನ ಹುಟ್ಟು ಇದೇ ಕಾರಿಂಜದಲ್ಲಿ ಎಂಬ ಪ್ರತೀತಿ ಇದೆ. ರಾವಣ ವಧೆ ಬಳಿಕ ಸಪರಿವಾರ ಸಹಿತ ಅಯೋಧ್ಯೆಯತ್ತ ತೆರಳುವಾಗ ಕಾರಿಂಜೆಗೆ ಬಂದಿದ್ದರೆಂದೂ ಹನುಮಂತನ ಹುಟ್ಟೂರಿನಲ್ಲಿ ನೆಲೆಯೂರಲು ಕಪಿ ವೀರರು ನಿರ್ಧರಿದ್ದರೆಂದೂ ಆದುದರಿಂದ ಇಲ್ಲಿ ವಾನರರಿಗೆ ನೈವೇದ್ಯ ಕೊಡುವ ಸಂಪ್ರದಾಯ ಬೆಳೆದಿದೆ ಎಂದು ಪುರಾಣೈತಿಹ್ಯದಿಂದ ತಿಳಿದು ಬರುತ್ತದೆ.
ಪ್ರಸ್ತುತ ಈ ಕೋತಿಗಳಿಗೆ ಸಂಪ್ರದಾಯದಂತೆ ಅರ್ಚಕರು ನೈವೇದ್ಯ ಅರ್ಪಿಸುತ್ತಾರೆ. ಆದರೆ ಕೋತಿಗಳು ನೂರಾರು ಸಂಖ್ಯೆಯಲ್ಲಿರುವುದರಿಂದ ಇದು ಸಾಕಾಗುವುದಿಲ್ಲ. ಆಹಾರಕ್ಕಾಗಿ ಕಾದು ಕುಳಿಯುತ್ತಾವೆ. ಇಲ್ಲಿನ ಮೆನೇಜರ್ ಸತೀಶ್ ಪ್ರಭು ಅವರು ಸಂಜೆ ಹೊತ್ತು ಸ್ವಲ್ಪ ಆಹಾರ ಸಿದ್ದಪಡಿಸಿ ನೀಡುತ್ತಾರೆ. ಭಕ್ತರಿಂದ ಹೆಚ್ಚಾಗಿ ಬಾಳೆಯ ಹಣ್ಣು ಪಡೆಯುತ್ತಿದ್ದ ಕೋತಿಗಳು ಎಡತಾಕುತ್ತವೆ. ಭಕ್ತರು ಬಾಳೆಗೊನೆ ನೀಡಿದಲ್ಲಿ ಕೋತಿಗಳಿಗೆ ಅರ್ಪಿಸಬಹುದು ಎನ್ನುತ್ತಾರೆ ಸತೀಶ್.