Advertisement

ಮುಂದುವರಿದ ಮಂಗಗಳ ಸಾವು

12:53 AM Jan 24, 2019 | |

ಬೈಂದೂರು/ಸಾಗರ: ಸಾಗರ ತಾಲೂಕಿನ ಎಡಜಿಗಳೇಮನೆ ಗ್ರಾ.ಪಂ.ವ್ಯಾಪ್ತಿಯ ವರದಪುರದ ಶ್ರೀಧರಾಶ್ರಮದ ಸುತ್ತಮುತ್ತ ಬುಧವಾರ ಮತ್ತೆರಡು ಮೃತ ಮಂಗಗಳು ಪತ್ತೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಂಗಳವಾರ ಆಶ್ರಮದ ಗೋಶಾಲೆ ಸಮೀಪ ಅಸ್ವಸ್ಥ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದ ಮಂಗ ಬುಧವಾರ ಮೃತಪಟ್ಟಿದ್ದು, ಡಾ| ಸುನಿತಾ ನೇತೃತ್ವದಲ್ಲಿ ಪೋಸ್ಟ್‌ಮಾರ್ಟಂ ಮಾಡಿ ಸುಡಲಾಗಿದೆ. ಇನ್ನೊಂದು ಮಂಗ ಕೊಳೆತ ಸ್ಥಿತಿಯಲ್ಲಿ ಕಾಣಿಸಿದ್ದು ಅದನ್ನು ಸಹ ಸುಡಲಾಗಿದೆ.

Advertisement

ಕಳೆದ ಎರಡು ದಿನದಲ್ಲಿ ಆಶ್ರಮದ ಸುತ್ತಮುತ್ತವೇ ಒಟ್ಟೂ ಮೂರು ಮಂಗಗಳು ಮೃತಪಟ್ಟಿವೆ. ಇದಲ್ಲದೆ ಪಡವಗೋಡು ಗ್ರಾಪಂನ ಬಿಳಿಸಿರಿ ಸಮೀಪದ ಅಬಸೆಯಲ್ಲಿ ಒಂದು ಮಂಗ ಮೃತಪಟ್ಟಿದ್ದು ಪಶು ಇಲಾಖೆ ವೈದ್ಯರು ಪೋಸ್ಟ್‌ಮಾರ್ಟ್‌ಂ ಮಾಡಿ ಅಂಗಾಂಶ ಸಂಗ್ರಹಿಸಿದ್ದಾರೆ. ಉಳ್ಳೂರು ಗ್ರಾಪಂ ವ್ಯಾಪ್ತಿಯ ದೊಡ್ಡಬೈಲು ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗ ಪತ್ತೆಯಾಗಿದೆ. ಎಸ್‌ಎಸ್‌ ಭೋಗ್‌ ಗ್ರಾಪಂನ ಮರಾಠಿ ಗ್ರಾಮದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮಂಗವೊಂದರ ಶವವನ್ನು ನಾಯಿ ತಿಂದಿದ್ದು ಪತ್ತೆಯಾಗಿದೆ. ಕುದರೂರು ಗ್ರಾಪಂನ ಬೆರಾಳದಲ್ಲಿ ಮಂಗದ ಶವ ಪತ್ತೆಯಾಗಿದೆ.

ಕೋಳೂರು ಗ್ರಾಪಂನ ಗಿಣಿವಾರದಲ್ಲೂ ಮಂಗನ ಶವ ಪತ್ತೆಯಾಗಿದೆ. ಈ ಮಧ್ಯೆ, ಉಡುಪಿ ಜಿಲ್ಲೆ ಬೈಂದೂರು ಸೇನೇಶ್ವರ ದೇವಸ್ಥಾನದ ತೆಂಗಿನ ತೋಟದ ಬಳಿ ಬುಧವಾರ ಬೆಳಗ್ಗೆ ಇನ್ನೊಂದು ಮಂಗನ ಶವ ದೊರೆತಿದೆ. ವೈದ್ಯಕಿಯ ವರದಿಯಿಂದ ಸ್ಪಷ್ಟ ಮಾಹಿತಿ ದೊರೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next