ಮಸ್ಕಿ: ಈತ ಎಲ್ಲಿದ್ದರೂ ಸರಿಯೇ ಹುಡುಕಿಕೊಂಡು ವಾನರ ಸೈನ್ಯವೇ ಬರುತ್ತದೆ. ಆತನ ಸುತ್ತ ಕುಳಿತು ಹರಟೆ ಹೊಡೆಯುತ್ತವೆ. ಆತನ ಕೈಯಿಂದಲೇ ನೀಡುವ ತಿಂಡಿ ತಿನಿಸು ತಿಂದು ಜಿಗಿದಾಡುತ್ತವೆ.
ಇದು ಮಸ್ಕಿ ಪಟ್ಟಣದಲ್ಲಿ ನಿತ್ಯವೂ ನಡೆಯುತ್ತಿರುವ ಅಪರೂದ ದೃಶ್ಯವಿದು. ಮಸ್ಕಿ ಪಟ್ಟಣದ ನಿವಾಸಿ ಶಾಂತಯ್ಯ ಸ್ವಾಮಿ ಇಂತಹ ಘಟನೆಗೆ ಸಾಕ್ಷಿಯಾಗಿದ್ದಾರೆ. ಮಸ್ಕಿ ಪಟ್ಟಣದ ಶಾಸಕರ ಕಚೇರಿ ಬಳಿ ಒಂದು ಸಣ್ಣ ಅಂಗಡಿ ಇಟ್ಟುಕೊಂಡ ಶಾಂತಯ್ಯಸ್ವಾಮಿ ಹಲವು ವರ್ಷಗಳಿಂದಲೂ ವಾನರ ಪ್ರೇಮಿಯಾಗಿದ್ದಾರೆ.
ವಿಶೇಷವಾಗಿ ಎರಡು ಅವಧಿಯ ಲಾಕ್ ಡೌನ್ ವೇಳೆ ಕೋತಿಗಳಿಗೆ ಎಲ್ಲೂ ಆಹಾರ ಸಿಗದೇ ಇದ್ದ ಸಂದರ್ಭದಲ್ಲಿ ಬಸ್ಕಿಟ್, ಮಿರ್ಚಿ, ಹಣ್ಣು ಹಂಪಲುಗಳನ್ನು ನೀಡುವ ಮೂಲಕ ವಾನರ ಸೈನ್ಯಕ್ಕೆ ಅತ್ಯಂತ ಪ್ರೀಯರಾಗಿದ್ದಾರೆ.
ಇದನ್ನೂ ಓದಿ :ಯಾವುದೇ ಮೈತ್ರಿಯಿಲ್ಲದೆ ಚುನಾವಣೆಯನ್ನು ಬಿ ಎಸ್ ಪಿ ಎದುರಿಸಲಿದೆ : ಸತೀಶ್ ಚಂದ್ರ ಮಿಶ್ರಾ
ನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ಅವಧಿಗೆ ಸರಿಯಾಗಿ ಆತ ಎಲ್ಲಿಯೇ ಇರಲಿ ಆತನ ಬಳಿ ಪ್ರತ್ಯಕ್ಷವಾಗುವ ಮಂಗಗಳ ಸೈನ್ಯ ಆತ ನೀಡುವ ತಿನಿಸು ತಿಂದು ಮುಂದೆ ಸಾಗುತ್ತವೆ. ನಿತ್ಯ ವಾನರ ಸೈನ್ಯಕ್ಕೆ ತಿಂಡಿ, ತಿನಿಸು, ಫಲಹಾರ ನೀಡಿಯೇ ತಮ್ಮ ದಿನದ ಚಟುವಟಿಕೆ ಆರಂಭಿಸುತ್ತಾರಂತೆ ಶಾಂತಯ್ಯಸ್ವಾಮಿ.