Advertisement

ಕಡಬ ವ್ಯಾಪ್ತಿಯಲ್ಲೂ ಮಂಗನ ಕಾಯಿಲೆ ಭೀತಿ

04:30 AM Jan 18, 2019 | Team Udayavani |

ಕಡಬ : ರಾಜ್ಯದ ಕೆಲಭಾಗ ಗಳಲ್ಲಿ ಮಂಗನ ಕಾಯಿಲೆ ಹಬ್ಬಿರುವ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕಡಬ ತಾಲೂಕಿನ ಕುಟ್ರಾಪ್ಪಾಡಿ, ಹಳೆನೇರೆಂಕಿ ಗ್ರಾಮಗಳಲ್ಲಿ ಮಂಗಗಳ ಶವ ಪತ್ತೆಯಾ ಗಿದ್ದು, ಜನರಲ್ಲಿ ಭೀತಿಗೆ ಕಾರಣವಾಗಿದೆ.

Advertisement

ಕ್ಯಾಸನೂರು ಕಾಡಿನ ಕಾಯಿಲೆ
1956ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೆಲ ಗ್ರಾಮಗಳಲ್ಲಿ ವಿಷ ಮಶೀತ ಜ್ವರವನ್ನು ಹೋಲುವ ಜ್ವರ ಕಾಣಿಸಿಕೊಂಡಿತ್ತು. ಆ ಕಾಯಿಲೆ ಕಾಣಿ ಸಿದ ಸುತ್ತಮುತ್ತಲಿನ ಕಾಡುಗಳಲ್ಲಿ ಮಂಗ ಗಳು ಸಾಯುತ್ತಿದ್ದವು. ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಹಾಗೂ ಪುಣೆಯ ವೈರಸ್‌ ಸಂಶೋಧನ ಕೇಂದ್ರ (ನ್ಯಾಶ ನಲ್‌ ಇನ್‌ಸ್ಟಿಟ್ಯೂಟ್ ಆಫ್‌ ವೈರಾಲಜಿ) ಗಳ ಸಂಶೋ ಧನೆಯ ಫಲವಾಗಿ ಆ ರೋಗಕ್ಕೆ ವೈರಸ್‌ ಕಾರಣ ವೆಂದು ದೃಢಪಟ್ಟಿತ್ತು. ಮೊದಲ ಬಾರಿ ಈ ರೋಗವು ಕ್ಯಾಸನೂರು ಕಾಡಿನಲ್ಲಿ ಪತ್ತೆ ಯಾದುದರಿಂದಾಗಿ . ಅದಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ ಎಂದೇ ಕರೆಯ ಲಾಗುತ್ತಿದೆ. ಈ ಕಾಯಿಲೆಯು ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಶಿರಸಿ, ತಾಲೂಕುಗಳಲ್ಲಿ, ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಸುತ್ತಮತ್ತು ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಲವೆಡೆ ಈ ರೋಗ ಕಂಡುಬಂದಿದ್ದು, ಜನರು ಭೀತಿಗೊಳಗಾಗಿದ್ದಾರೆ.

ಸತ್ತ ಮಂಗನ ಮೇಲಿದ್ದ ಉಣುಗು ಕಚ್ಚಿದಲ್ಲಿ ಕಾಯಿಲೆ
ಮಂಗನ ಕಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರುಡುವುದಿಲ್ಲ. ಕಾಯಿಲೆ ಯಿಂದ ಸತ್ತುಬಿದ್ದ ಮಂಗನ ದೇಹದಲ್ಲಿದ್ದ ಸಣ್ಣ ಸಣ್ಣ ಗಾತ್ರದ ಉಣುಗು (ಉಣ್ಣಿ) ಗಳು ಪರಿಸರದಲ್ಲಿ ಹರಡಿ ಮನುಷ್ಯನ ದೇಹಕ್ಕೆ ಕಚ್ಚಿದಲ್ಲಿ ಈ ಕಾಯಿಲೆ ಹರಡುತ್ತದೆ. ಆದ್ದರಿಂದ ಮಂಗಗಳು ಸಾಯುತ್ತಿರುವ ಪ್ರದೇಶಕ್ಕೆ ಹೋಗುವ ವೇಳೆ ಆರೋಗ್ಯ ಇಲಾಖೆಯಿಂದ ಕೊಡುವ ಡಿಎಂಪಿ ಎಣ್ಣೆಯನ್ನು ಕೈಕಾಲುಗಳಿಗೆ ಹಚ್ಚಿಕೊಂಡು ಹೋಗಬೇಕು. ಕಾಡಿನಿಂದ ಬಂದ ಕೂಡಲೇ ಸಾಬೂನು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಕಚ್ಚಿಕೊಂಡ ಉಣುಗುಗಳು ಉದುರಿಹೋಗುತ್ತವೆ. ಈ ವೈರಸ್‌ ಕಾಡಿನಲ್ಲಿರುವ ಕೆಲವು ಪ್ರಾಣಿಗಳಲ್ಲಿ ಇದ್ದು ಇವುಗಳ ಮೈಮೇಲಿರುವ ಉಣುಗುಗಳಲ್ಲಿ ಪ್ರವೇಶಿಸುತ್ತವೆ. ಈ ಉಣುಗುಗಳು ಇತರ ಪ್ರಾಣಿಗಳಿಗೆ, ಮಂಗಗಳಿಗೆ ಮತ್ತು ಮನುಷ್ಯರಿಗೆ ಕಚ್ಚುವುದರಿಂದ ಕಾಯಿಲೆ ಬರುತ್ತದೆ. ಕಾಯಿಲೆಗೆ ತುತ್ತಾದವರಿಗೆ 8-10 ದಿನಗಳ ತನಕ ಬಿಡದೇ ಜ್ವರ ಬರುತ್ತದೆ. ವಿಪರೀತ ತಲೆನೋವು, ಕೈಕಾಲು ಮತ್ತು ಸೊಂಟ ನೋವು. ವಿಪರೀತ ನಿಶ್ಯಕ್ತಿ, ಕಣ್ಣುಗಳು ಕೆಂಪಾಗುವುದು, ಜ್ವರ ಬಂದ ನಾಲ್ಕಾರು ದಿನದ ಅನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವವೂ ಆಗಬಹುದು. ಮಂಗನ ಕಾಯಿಲೆ ನಿಯಂತ್ರಿಸುವ ಲಸಿಕೆ ಬಂದಿದ್ದು ಅದನ್ನು 6 ವರ್ಷದ ಮೇಲ್ಪಟ್ಟ ಎಲ್ಲರಿಗೂ ಎರಡು ವರಸೆಗಳಲ್ಲಿ ಒಂದು ತಿಂಗಳ ಅಂತರದಲ್ಲಿ ನೀಡಲಾಗುತ್ತದೆ. ಎರಡನೇ ಚುಚ್ಚುಮದ್ದು ಹಾಕಿಸಿಕೊಂಡ 70 ದಿನಗಳ ನಂತರವೇ ರೋಗ ನಿರೋಧಕ ಶಕ್ತಿ ಬರುತ್ತದೆ ಎಂದು ಆರೋಗ್ಯ ಇಲಾಖೆ ವತಿಯಿಂದ ಹಂಚಲಾದ ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ.

ಜನರಲ್ಲಿ ಆತಂಕ
ಹಲವು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿ ಕೊಂಡಿದ್ದಾಗ ಕೊಕ್ಕಡ ಭಾಗದಲ್ಲಿಯೂ ತೀವ್ರವಾಗಿತ್ತು. ಆ ಸಂದರ್ಭದಲ್ಲಿ ಹಳೆನೇರೆಂಕಿಯ ಶಿವಾರು ಮಲೆಯಲ್ಲಿ ಹಲವು ಮಂಗಳು ಮೃತಪಟ್ಟಿದ್ದವು. ಇದೀಗ ಶಿವಾರು ಮಲೆ ಅರಣ್ಯ ಭಾಗದಿಂದ ಹಳೆನೇರೆಂಕಿ ಪ್ರದೇಶಕ್ಕೆ ಬಂದಿರುವ ಮಂಗಗಳ ತಂಡದಲ್ಲಿದ್ದ ಒಂದು ಕೋತಿ ಮೃತಪಟ್ಟಿರುವುದು ಪರಿಸರದ ಜನರಲ್ಲಿ ಆತಂಕ ಹೆಚ್ಚಿಸಿದೆ. ಕೆಲ ದಿನಗಳ ಹಿಂದೆ ಕುಟ್ರಾಪ್ಪಾಡಿ ಗ್ರಾಮದ ಉಳಿಪ್ಪು ಅರಣ್ಯ ಪ್ರದೇಶದಲ್ಲಿ ಸಂಪೂರ್ಣ ಕೊಳೆತುಹೋಗಿದ್ದ ಮಂಗದ ಶವ ಪತ್ತೆಯಾಗಿತ್ತು. ಆದರೆ ಆರೋಗ್ಯ ಇಲಾಖಾ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಶವ ಪೂರ್ತಿ ಕೊಳೆತು ಅಸ್ಥಿಪಂಜರ ಮಾತ್ರ ಉಳಿದಿತ್ತು. ಆದುದರಿಂದ ಶವದ ಭಾಗಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಸಾಧ್ಯವಾಗಿರಲಿಲ್ಲ.

•ನಾಗರಾಜ್‌ ಎನ್‌.ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next