Advertisement
ಆಧಾರ್ ಸಂಖ್ಯೆ ಜೋಡಣೆ ಹೊಂದಿದ ಬ್ಯಾಂಕ್ ಇಲ್ಲವೇ ಅಂಚೆ ಖಾತೆ ಇಲ್ಲದ ಫಲಾನುಭವಿಗಳಿಗೆ ಮಾಸಾಶನ ತಡೆ ಹಿಡಿಯಲು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯ ನಿರ್ಧರಿಸಿದ್ದು ಇದರ ಪರಿಣಾಮವಾಗಿ ಬ್ಯಾಂಕ್ ಖಾತೆ ಇಲ್ಲದವರಿಗೆ ಅಕ್ಟೋಬರ್ ತಿಂಗಳಿನಿಂದಲೇ ಮಾಸಾಶನ ನಿಲ್ಲಲಿದೆ (ಅಕ್ಟೋಬರ್ ತಿಂಗಳಲ್ಲಿ ಸಿಗಬೇಕಿದ್ದ ಸೆಪ್ಟೆಂಬರ್ ತಿಂಗಳಿನ ಮಾಸಾಶನ ಕೈಗೆ ಸೇರದು). ಇದರಿಂದಾಗಿ ಖಾತೆ ಮಾಡಿಸಿಕೊಳ್ಳದೆ ಮನಿ ಆರ್ಡರ್ ಮೂಲಕ ಮಾಸಾಶನ ಪಡೆಯುತ್ತಿದ್ದ ರಾಜ್ಯದ ಅಂದಾಜು ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಮಾಸಾಶನ ವಂಚಿತರಾಗಲಿದ್ದಾರೆ.
Related Articles
Advertisement
ಅಶಕ್ತರಿಗೆ ಅಧಿಕಾರಿಗಳೇ ಖಾತೆ ಮಾಡಿಸಲಿ
ಪ್ರಸಕ್ತ ಸರ್ಕಾರ, ಜನರಿಗೆ ಸುಲಭವಾಗಿ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ, ಅಧಿಕಾರಿಗಳ ಗ್ರಾಮ ವಾಸ್ತವ್ಯ, ಹಲೋ ಕಂದಾಯ ಸಚಿವರೇ ಹೀಗೆ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಸಾಮಾಜಿಕ ಭದ್ರತಾ ಪಿಂಚಣಿಗಾಗಿ ಬ್ಯಾಂಕ್ ಖಾತೆ ಮಾಡಿಸಿಕೊಳ್ಳಲಾಗದ ಅಶಕ್ತ, ಅನಾಥ, ಅಂಗವಿಕಲರಿಗೆ ಬ್ಯಾಂಕ್ ಖಾತೆ ಮಾಡಿಸಿಕೊಡುವತ್ತಲೂ ನಿಗಾ ವಹಿಸಬೇಕಿದೆ.
ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಮಾಡಿಸಿಕೊಳ್ಳಲು ನೀಡಲಾಗಿದ್ದ ಕೊನೆಯ ಗಡುವು ಸಹ ಸೆ.15ಕ್ಕೆ ಮುಗಿದಿದೆ. ಹೀಗಾಗಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳಲ್ಲಿ ಮಾಸಾಶನ ಸಿಗುವುದಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಮನಿ ಆರ್ಡರ್ ಮೂಲಕ ಮಾಸಾಶನ ಪಡೆಯುವವರು ಡಿಸೆಂಬರ್ ಒಳಗೆ ಬ್ಯಾಂಕ್ ಖಾತೆ ಮಾಡಿಸಿಕೊಂಡರೆ ಮಾಸಾಶನ ಮುಂದುವರಿಯುತ್ತದೆ. ಇಲ್ಲದಿದ್ದರೆ ಮಾಸಾಶನ ಖಾತೆಯೇ ರದ್ದಾಗುತ್ತದೆ. ●ಪುಷ್ಪಾ ಕೆ., ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ದಾವಣಗೆರೆ
●ಎಚ್.ಕೆ. ನಟರಾಜ