Advertisement
ಮದುವೆನಂತರ ಜವಾಬ್ದಾರಿ ಜಾಸ್ತಿ. ಹಣವನ್ನು ಉಳಿಸುವ ಅನಿವಾರ್ಯತೆ ಬ್ಯಾಚುಲರ್ಗಿಂತ ಹೆಚ್ಚು. ಮದುವೆಯ ಮೊದಲು ಕನಸು ಹಂಚಿಕೊಳ್ಳುವ ಜೊತೆಗೆ ಭವಿಷ್ಯದ ಆರ್ಥಿಕ ಗುರಿಯನ್ನು ಗುರುತಿಸುವುದು ಜಾಣ ದಂಪತಿಗಳ ಲಕ್ಷಣ ಎನ್ನುತ್ತಾರೆ. ಇದು ನಿಜ ಕೂಡ. ಮದುವೆಗೆ ಮೊದಲು ಎಲ್ಲವೂ ಕನಸು, ಕನಸು. ಅದನ್ನು ಕಾಣುವ ನೆಪದಲ್ಲಿ ಭವಿಷ್ಯದ ಆರ್ಥಿಕ ಚಿಂತನೆ ಮಾಡದೇ ಇದ್ದರೆ ಹೇಗೆ?
ನಗರ ಪ್ರದೇಶದಲ್ಲಿದ್ದರೆ ಇಬ್ಬರೂ ದುಡಿಯಲೇ ಬೇಕು. ಇಬ್ಬರು ದುಡಿದರೆ ಒಬ್ಬರ ಸಂಬಳವನ್ನು ಹೂಡಿಕೆಗೆ ಮೀಸಲಿಡುವುದು ಕ್ಷೇಮ. ಅದು ಇನ್ವೆಸ್ಟ್‌ಮೆಂಟ್, ಮ್ಯೂಚುವಲ್ ಫಂಡ್, ಷೇರು ಅಥವಾ ರಿಯಲ್ ಎಸ್ಟೇಟ್ ಆಗಿರಬಹುದು. ಡೌನ್‌ಪೇಮೆಂಟ್‌ಗೆ ಒಂದಿಷ್ಟು ಹಣ ರೆಡಿ ಮಾಡಿ, ನಗರದೊಳಗೋ ಅಥವಾ ಹೊರಭಾಗದಲ್ಲೋ ಸೈಟ್ ಖರೀದಿಸಿ ಇಟ್ಟರೆ ಅದು ಭವಿಷ್ಯದ ಉತ್ತಮ ಸೇವಿಂಗ್ಸ್. ಹೀಗೆ ವಿವಿಧ ಬಗೆಯಲ್ಲಿ ದುಡಿಮೆಯು ಒಂದು ಭಾಗವನ್ನು ವಿನಿಯೋಗಿಸಿದರೆ ಉತ್ಪತ್ತಿ ಡೆಡ್‌ಮನಿಯಾಗುವುದು ತಪ್ಪುತ್ತದೆ. ಒಂದು ಪಕ್ಷ ಇಬ್ಬರೂ ದುಡಿಮೆಯಲ್ಲಿ ಒಬ್ಬರ ಆದಾಯ ಅಷ್ಟನ್ನೂ ಹೂಡಿಕೆ ಮಾಡಲು ಆಗದೇ ಇದ್ದರೆ. ಅದರಲ್ಲಿ ಶೇ. 60ರಷ್ಟು ಹೂಡಿಕೆ ಮಾಡಿ.
Related Articles
Advertisement
ನಿಮ್ಮ ಆದಾಯದ ಶೇ. 5ರಷ್ಟು ತುರ್ತು ನಿಧಿ ಅಂದರೆ ಅನಾರೋಗ್ಯ, ಅನಿರೀಕ್ಷಿತ ಖರ್ಚುಗಳನ್ನು ನಿಭಾಯಿಸಲು ಎತ್ತಿಡಬೇಕು.
ವಾಹನ ಬೇಕೋ ಬೇಡವೋವಾಹನ ಕೊಳ್ಳುವ ಮೊದಲು ಇದು ಬೇಕಾ ಅನ್ನೋದನ್ನು ಖಚಿತ ಮಾಡಿಕೊಳ್ಳಿ. ತಿಂಗಳ ಆದಾಯದಲ್ಲಿ ಶೇ. 4-5ರಷ್ಟು ಖರ್ಚು ಇದಕ್ಕಾಗಿಯೇ ಆಗುತ್ತದೆ. ವಾಹನ ಕೊಳ್ಳುವಿರಾದರೆ ಕಾರು ಅಥವಾ ಬೈಕು ಇದರಲ್ಲಿ ನಿಮಗೆ ಅಗತ್ಯ ಯಾವುದಿದೆ ತೀರ್ಮಾನಿಸಿ. ಏಕೆಂದರೆ ಕಾರು ಕೊಂಡರೆ ಪ್ರತಿ ದಿನ 20ಕಿ.ಮೀ ಓಡಾಡಲು ತಿಂಗಳಿಗೆ ಪೆಟ್ರೋಲ್, ಸರ್ವೀಸು ಸೇರಿ 6-7ಸಾವಿರ ಖರ್ಚುೆ. ವರ್ಷಕ್ಕೆ ಹೆಚ್ಚಾ ಕಡಿಮೆ 80ಸಾವಿರದಷ್ಟು ಹಣವನ್ನು ಕಾರಿಗಾಗಿಯೇ ಎತ್ತಿಡಬೇಕು. ಬೈಕ್ ಆದರೆ ತಿಂಗಳಿಗೆ ವರ್ಷಕ್ಕೆ ಹೆಚ್ಚಾ ಕಡಿಮೆ ಪೆಟ್ರೋಲ್ ಸೇರಿ 30ಸಾವಿರ ಖರ್ಚು ಬರಬಹುದು. ಲೆಕ್ಕವಿರಲಿ..
ಮದುವೆ ಸರ್ಟಿಫಿಕೇಟ್ ಕೂಡಲೇ ಮಾಡಿಸಿ ಹೆಸರು ಬದಲಾವಣೆಯ ಅಫಿಡೆವಿಟ್‌ಸಲ್ಲಿಸಿದರೆ ಉಳಿತಾಯ, ಹೂಡಿಕೆಗೆ ಅನುಕೂಲ. ಮುಂದೆ ಎಲ್ಲ ವ್ಯವಹಾರಗಳೂ ಸರಾಗವಾಗಿ ಆಗಿ, ಗೊಂದಲಗಳಿಗೆ ಅವಕಾಶವಿರುವುದಿಲ್ಲ. ತಮ್ಮ ಹೆಸರಿನ ಜೊತೆ ಗಂಡನ ಹೆಸರು ಸೇರಿಸಿಕೊಳ್ಳುವ ಇಚ್ಛೆ ಇದ್ದವರು ಆ ಬದಲಾವಣೆಯನ್ನು ಈ ಸಂದರ್ಭದಲ್ಲೇ ಮಾಡಿಕೊಳ್ಳಬೇಕು. ಒಟ್ಟಿಗೆ ಅಕೌಂಟ್ ಇದ್ದು ಸಾಲಕ್ಕೆ ಇಬ್ಬರೂ ಅರ್ಜಿ ಸಲ್ಲಿಸಿದರೆ, ಹೆಚ್ಚೆಚ್ಚು ಸಾಲ ಸಿಗುತ್ತದೆ. ಜೊತೆಗೆ ಇಬ್ಬರಿಗೂ ತೆರಿಗೆ ವಿನಾಯತಿ ಸಿಗುತ್ತದೆ. ಮದುವೆಯಾದ ಕೆಲದಿನಗಳಿಗೆ ಇಬ್ಬರ ಹೆಸರಲ್ಲೂ ಜಾಯಿಂಟ್ ಅಕೌಂಟ್ ತೆರೆದರೆ ಉತ್ತಮ. ಮದುವೆ ನಂತರ ನಿಮ್ಮ ಆಸ್ತಿಯನ್ನು ಜಂಟಿಯಾಗಿ ಅನುಭವಿಸುವಂತೆ ನೋಡಿಕೊಳ್ಳಿ. ಇದರಿಂದ ಭವಿಷ್ಯದ ಹೂಡಿಕೆಗೆ ಅನುಕೂಲವಾಗುತ್ತದೆ. ಇದರಿಂದ ಲಾಭ ಏನೆಂದರೆ ಸಾಲ ಪಡೆಯಬೇಕಾದರೆ ಇಬ್ಬರ ಆದಾಯ, ಆಸ್ತಿಯ ಲೆಕ್ಕವೂ ಇರುವುದರಿಂದ ಪ್ಲಸ್ ಪಾಯಿಂಟ್ ಜಾಸ್ತಿ. ಹೂಡಿಕೆ ಹೇಗೆ?
ಕೈಯಲ್ಲಿ ಐದು ಲಕ್ಷ ಇದೆ. ಹೂಡಿಕೆ ಮಾಡುವ ಮನೆ ಮೌಲ್ಯ 15 ಲಕ್ಷ. ಬಾಡಿಗೆಗೆ ಕೊಟ್ಟರೆ 10ಸಾವಿರ ಸಿಗುತ್ತದೆ ಎಂದಾದರೆ, 10 ಲಕ್ಷ ಸಾಲ ಮಾಡಿ ಕೊಳ್ಳುವುದು ಲೇಸು. ಏಕೆಂದರೆ ಕೊಂಡು ಬಾಡಿಗೆಗೆ ಕೊಟ್ಟರೆ ಬಾಡಿಗೆ ಹಣ ಸಾಲಕ್ಕೆ ಹೋಗುತ್ತದೆ. ಇದು ನಿಜವಾದ ಹೂಡಿಕೆಯಾಗುತ್ತದೆ. ಬೇಡ ಎಂದಾಗ ಮನೆ ಮಾರಿದರೆ ಹಾಕಿದ ಹಣಕ್ಕೆ ಶೇ. 10-15ರಷ್ಟು ಜಾಸ್ತಿ ಬರಬಹುದು. ಇದೇ 5 ಲಕ್ಷವನ್ನು ಬ್ಯಾಂಕಲ್ಲಿ ಇಟ್ಟರೆಶೇ. 7-8ರಂತೆ ತಿಂಗಳಿಗೆ 350ರೂ. ಬರಬಹುದು. ಈ ಹೂಡಿಕೆಯ ಲೆಕ್ಕಾಚಾರದಲಿ ಜಾಣ್ಮೆ ಇದೆ. ಆದರೆ ಹತ್ತು ಲಕ್ಷದ ಜೊತೆಗೆ, ಮತ್ತೆ ಕೈಯಿಂದ 5 ಲಕ್ಷ ಸಾಲ ಮಾಡಿದರೂ ಮನೆಯ ಬಾಡಿಗೆ ಎರಡು ಸಾವಿರ ಬಂದರೆ ನೀವೇ ಕೈಯಿಂದ ಬಡ್ಡಿ ಕಟ್ಟಬೇಕಾಗುತ್ತದೆ, ಎಚ್ಚರ. – ನಾದಸ್ವರಾ