Advertisement
ನಗರದ ಬಿಬಿ ರಸ್ತೆಯಲ್ಲಿ ಆರಂಭಿಸಲಾದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ಕಚೇರಿ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ರೈತರ ಭವಿಷ್ಯ ಅತಂತ್ರವಾಗಿದೆ. ರೈತರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ.
Related Articles
Advertisement
ನಮ್ಮ ಪಕ್ಷ ಯಾವುದೇ ರೀತಿಯ ಹಣದ ಆಮಿಷ ಒಡ್ಡುವುದಿಲ್ಲ. ಬದಲಾಗಿ, ನಾವು ನಿಷ್ಠೆಯಿಂದ ಬಡವರು ಹಾಗೂ ಕಾರ್ಮಿಕರಿರಾಗಿ ಶ್ರಮಿಸುತ್ತೇವೆ. ತಮ್ಮ ಮತ ನಮಗೆ ನೀಡಿ. ಯಾವುದೇ ಕಾರಣಕ್ಕೂ ತಮ್ಮ ಅಮೂಲ್ಯ ಮತವನ್ನು ಯಾರಿಗೂ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಮೋದಿ ಸರ್ಕಾರ ಕೆಳಗಿಳಿಸಿ: ಬಯಲುಸೀಮೆ ರೈತರಿಗಾಗಿ ಮಂಗಳೂರಿನ ನೇತ್ರಾವತಿ ನದಿಯನ್ನು ಈ ಭಾಗಕ್ಕೆ ತಿರುಗಿಸುವ ಕಾರ್ಯವಾಗಬೇಕಾಗಿದೆ. ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ಮಾತ್ರ ಮಳೆಗಾಲದಲ್ಲಿ ಕುಡಿಯುವ ನೀರು ಸಿಗುತ್ತದೆ. ಹೆಬ್ಟಾಳ ಹಾಗೂ ನಾಗವಾರ ಕೊಳಚೆ ನೀರನ್ನು ಈ ಭಾಗಕ್ಕೆ ತರುವ ಹುನ್ನಾರ ನಡೆಯುತ್ತಿದೆ.
ಲಕ್ಷಾಂತರ ಲೀಟರ್ ಹಾಲು ಹಾಗೂ ಅಪಾರ ಪ್ರಮಾಣದಲ್ಲಿ ತರಕಾರಿ ನೀಡುವ ರೈತರಿಗೆ ಕೊಳಚೆ ನೀರು ನೀಡಲಾಗುತ್ತಿದೆ. ನಮ್ಮ ಪಕ್ಷ ಕೂಲಿ ಕಾರ್ಮಿಕರಿಗಾಗಿ ಮತ್ತು ರೈತರ ಪರ ಹೋರಾಟ ಮಾಡುತ್ತಲೇ ಬಂದಿದೆ. ಹಲವಾರು ಸಂದರ್ಭಗಳಲ್ಲಿ ನಮ್ಮ ಹೋರಾಟಕ್ಕೆ ತಕ್ಕ ಪ್ರತಿ ಫಲ ಸಿಕ್ಕಿದೆ.
ಸಂವಿಧಾನದ ನಾಲ್ಕು ಆಧಾರ ಸ್ತಂಭಗಳಾದ ಜಾತ್ಯಾತೀತ, ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವ ಈಗ ಅಪಾಯದಲ್ಲಿವೆ. ಇವುಗಳನ್ನು ರಕ್ಷಿಸಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೆಳಗಿಳಿಸಬೇಕು ಎಂದರು.
ಮೋದಿಗೆ ತಕ್ಕಪಾಠ ಕಲಿಸಿ: ಭಾರತ ಯುವಜನ ಪ್ರಕೋಷ್ಠಕದ ಸಂಚಾಲಕ ಮಣಿಕಾಂತ್ ಮಾತನಾಡಿ, ಸಂಸದ ವೀರಪ್ಪ ಮೊಯ್ಲಿ ಏನು ಕೆಲಸ ಮಾಡಿದ್ದಾರೆ. 10 ವರ್ಷಗಳಿಂದ ಕೇವಲ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡುತ್ತ ಹೊರಟಿದ್ದಾರೆ.
ನರೇಂದ್ರ ಮೋದಿ ಮತ್ತು ವೀರಪ್ಪ ಮೊಯ್ಲಿ ಅಂಬಾನಿ ಜತೆ ಚೆನ್ನಾಗಿದ್ದಾರೆ. ಅವರಿಂದ ಸಹಕಾರ ಪಡೆದು ಚುನಾವಣೆಯಲ್ಲಿ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇನೆಂದು ಹೇಳಿ ಆ ಭರವಸೆಯನ್ನು ಈರೇಡಿಸಲಿಲ್ಲ.
ಪಕೋಡ ಮಾರಿ ಜೀವನ ಸಾಗಿಸಬಹುದು ಎಂಬ ಹೇಳಿಕೆ ನೀಡುವವರಿಗೆ ತಕ್ಕ ಪಾಠ ಕಲಿಸಬೇಕೆಂದರು. ಈ ವೇಳೆ ರಾಜ್ಯ ಪ್ರಾಂತ ರೈತಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಪ್ರಾಂತ ರೈತಸಂಘದ ಅಧ್ಯಕ್ಷ ವೀರಣ್ಣ, ರಾಜ್ಯ ಸಿಪಿಎಂ ಕಾರ್ಯದರ್ಶಿ ಗೋಪಾಲ ಕೃಷ್ಣ, ಸುಮಿತ್ರಮ್ಮ ಇತರರಿದ್ದರು.