ಸಂದರ್ಭ ವಿಶೇಷವಾಗಿ ಪ್ರಥಮ ಬಾರಿಗೆ 7 ಪಲ್ಲಕ್ಕಿ ಸೇವೆ ನಡೆಯಿತು. ಮೇ 24ರ ಪತ್ತನಾಜೆಯ ಬಳಿಕ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆಯುವುದಿಲ್ಲ. ಪತ್ತನಾಜೆಗೆ ಮುಂಚಿತವಾಗಿ ಬಂದ ಸೋಮವಾರದಲ್ಲಿ ನಿತ್ಯ ಬಲಿಯ ಸಂದರ್ಭ ಕೊನೆ ಯ ಪಲ್ಲಕ್ಕಿ ಸೇವೆಗೆ ಇಷ್ಟು ಸೇವೆ ನಡೆದಿದೆ.
Advertisement
ರಾತ್ರಿ ಪೂಜೆಯ ಬಳಿಕ ವಿವಿಧ ಸುತ್ತುಗಳಲ್ಲಿ ದೇವರ ಬಲಿಯ ಬಳಿಕ ಪಲ್ಲಕಿ ಸೇವೆ ನಡೆಯಿತು. ಸೇವಾಕರ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಪ್ರಧಾನ ಅರ್ಚಕ ವಸಂತ ಕೆದಿಲಾಯ ಪೂಜಾ ವಿಧಿ ನೆರವೇರಿಸಿದರು. ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಸೇವಾಕರ್ತರನ್ನು ಗೌರವಿಸಿದರು. ಅನಂತರ ವಸಂತ ಕಟ್ಟೆ ಪೂಜೆ ನಡೆಯಿತು. ವ್ಯಸ್ಥಾಪನ ಸಮಿತಿ ಸದಸ್ಯರು, ನೂರಾರು ಭಕ್ತರು ಈ ಸಂದರ್ಭ ಪಾಲ್ಗೊಂಡರು.